“ಆಯುಧ” ಚಿತ್ರಕ್ಕೆ ಸೆನ್ಸಾರ್ ನಿಂದ “ಎ” ಪ್ರಮಾಣ ಪತ್ರ
ದೇವರಾಜ್ ಕುಮಾರ್ ನಿರ್ಮಾಣ, ನಿರ್ದೇಶನ ಹಾಗೂ ನಟನೆಯ ” ಆಯುಧ ” ಚಿತ್ರ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣ ಪತ್ರ ನೀಡಿದೆ. ಇದೇ ವರ್ಷ ಅಥವಾ ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ಬರಲಿದೆ.

ದೇವರಾಜ್ ಕುಮಾರ್ ಅವರು ಸದ್ದಿಲ್ಲದೆ ಚಿತ್ರಿಕರಣ ಮುಗಿಸಿದ್ದಾರೆ. ನಿರ್ಮಾಣ, ನಿರ್ದೇಶನ ಜೊತೆಗೆ ನಾಯಕ ನಟನಾಗಿಯೂ ಕೂಡ ಕಾಣಿಸಿಕೊಂಡಿದ್ದಾರೆ.
ಚಿತ್ರವನ್ನು ಹೊನ್ನಾವರ ಬೈಂದೂರು, ಚನ್ನಪಟ್ಟಣ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ನಾಲ್ಕು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳಿರುವ ಈ ಚಿತ್ರ ಆಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಡ್ರಾಮಾ ಚಿತ್ರವಾಗಿದೆ
ಡೇಂಜರ್ ಜೋನ್, ನಿಶಬ್ದ 2, ಅನುಷ್ಕಾ, ತಾಜ್ ಮಹಲ್ 2 ಚಿತ್ರ ನಿರ್ದೇಶಿಸಿರುವ ದೇವರಾಜ್ ಕುಮಾರ್, ಐದನೇ ಚಿತ್ರವಾಗಿ “ಆಯುಧ” ಚಿತ್ರ ಚಿತ್ರವನ್ನು ನಿರ್ದೇಶಿಸಿದ್ದಾರೆ.

ನಾಯಕಿಯರಾಗಿ ಅಮೃತ ಹಾಗೂ ಸಂಹಿತ ವಿನ್ಯ ನಟಿಸಿದ್ದಾರೆ. ಖಳ ನಟ ರಘು ಹಾಗೂ ಸೂರಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸತೀಶ ಸ್ಟೀವನ್ ಸಂಗೀತ ನಿರ್ದೇಶನ, ವೀನಸ್ ಮೂರ್ತಿ ಛಾಯಾಗ್ರಹಣ, ಮನವರ್ಷಿ ನವಲಗುಂದ ಗೀತರಚನೆ, ಚಂದ್ರು ಬಂಡೆ ಸಾಹಸ ನಿರ್ದೇಶನ ಹಾಗೂ ವಿಜಯ್ ಎಂ ಕುಮಾರ್ ಮತ್ತು ಮಹೇಶ್ ಸಂಕಲನದ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಡಿಸೆಂಬರ್ ನಲಿ ಬಿಡುಗಡೆಯಾಗಲಿದೆ

