ಬಿಗ್‍ಬಾಸ್ 12ನೇ ಆವೃತ್ತಿ ಅದ್ದೂರಿ ಆರಂಭ: ಮೊದಲ ದಿನವೇ ಸ್ಪರ್ಧಿಗಳಿಗೆ ಶಾಕ್
ಕನ್ನಡ ಕಿರುತೆರೆಯಲ್ಲಿ ಮನರಂಜನೆಯ ಮಹಾಪೂರವೇ ಹರಿಸುವ 12ನೇ ಆವೃತ್ತಿಯ ಬಿಗ್‍ಬಾಸ್ ರಿಯೋಲಿಟಿ ಶೋಗೆ ಅದ್ದೂರಿ ಚಾಲನೆ ಸಿಕ್ಕಿದೆ, ಈ ಭಾರಿ ನಿರೂಪಕ ಕಿಚ್ಚ ಸುದೀಪ್ ಅವರ ಹೊಸ ಲುಕ್ ಒಂದೆಡೆಯಾದರೆ ದೊಡ್ಮನೆಯಲ್ಲಿ ನಾಡಿನ ಸಂಸ್ಕøತಿ, ಕಲೆ ಬಿಂಬಿಸುವ ಮೂಲಕ ಕನ್ನಡಿಗರಿಗೆ ಕೃತಜ್ಞತೆ ಸಲ್ಲಿಸುವ ಕೆಲಸವನ್ನು ಬಿಗ್‍ಬಾಸ್ ಮಾಡಿದೆ.
ಈ ಬಾರಿ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ 19 ಸ್ಪರ್ಧಿಗಳು ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಎಲ್ಲರೂ ಒಬ್ಬರಿಗಿಂತ ಒಬ್ಬರು ಮನರಂಜನೆ ನೀಡುವುದರಲ್ಲಿ ಪಂಟರು. ಈ ತಂಡಕ್ಕೆ ಮೊದಲ ದಿನವೇ ಬಿಗ್‍ಬಾಸ್ ಶಾಕ್ ನೀಡಿದ್ದು ಒಬ್ಬ ಸ್ಪರ್ಧಿಗೆ ಬಿಗ್‍ಬಾಸ್ ಮನೆಯ ಬಾಗಿಲು ತೆರೆದಿದ್ದಾರೆ.
ಮನೆಗೆ ಬಂದಿರುವ ಸ್ಪರ್ಧಿಗಳು ಮಾತನಾಡಿಕೊಂಡು ಒಬ್ಬರನ್ನು ಹೊರಗುವಂತೆ ಬಿಗ್‍ಬಾಸ್ ಸೂಚಿಸಿದ್ಧಾರೆ, ಹೀಗಾಗಿ ಯಾರು ಮನೆಯಿಂದ ಹೊರಗೆ ಹೋಗಬೇಕು ಎನ್ನುವ ಬಗ್ಗೆ ಸ್ಪರ್ಧಿಗಳಲ್ಲಿ ಚರ್ಚೆ ನಡೆಯುತ್ತಿದೆ, ಮನೆಯಲ್ಲಿ ಇರಲು ತಮ್ಮದೇ ಆದ ಸಮರ್ಥನೆಯನ್ನೂ ನೀಡುತ್ತಿದ್ದಾರೆ.
ಹಾಗಿದ್ದರೆ ಅವರಾರು. ಮೊದಲ ದಿನವೇ ಮನೆಯಿಂದ ಹೊರಹೋಗುವರು ಯಾರು, ನಿಜಕ್ಕೂ ಸ್ಪರ್ಧಿ ಮನೆಯಿಂದ ಹೊರ ಹೋಗ್ತಾರಾ ಎನ್ನುವುದು ಕುತೂಹಲ ಕೆರಳಿಸಿದ್ದು ಬಿಗ್ ಬಾಸ್ ನಡೆ ಏನಾಗಿರಲಿದೆ ಎನ್ನುವುದನ್ನು ಇಂದು ರಾತ್ರಿ ನೋಡಬೇಕಾಗಿದೆ.
ಯಾರೆಲ್ಲಾ ಸ್ಪರ್ಧಿಗಳು
• ಕಲಾವಿದ ಕಾಕ್ರೋಚ್ ಸುಧಿ: ಕನ್ನಡದ ಹಲವು ಚಿತ್ರಗಳಲ್ಲಿ ನಟನೆ ಮಾಡುವ ಮೂಲಕ ಮೋಡಿ ಮಾಡಿದವರು ಜೊತೆಗೆ ಒಳ್ಳೆಯ ಮಾತುಗಾರ
• ಕಿರುತೆರೆ ನಟಿ ಮಂಜು ಭಾಷಿಣಿ: ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಹೆಸರು ಪಡೆದಿರುವ ಹಿರಿಯ ಕಲಾವಿದೆ. ಪಾತ್ರ ಯಾವುದೇ ಆದರೂ ನೀರು ಕುಡಿದಷ್ಟು ಸಲೀಸಾಗಿ ಮಾಡಬಲ್ಲ ಪ್ರತಿಭಾನ್ವಿತ ಕಲಾವಿದೆ.
• ಮಾತಿನ ಮಲ್ಲಿ ಮಲ್ಲಮ್ಮ : ಮಾತಿನ ಮೂಲಕವೇ ಗಮನ ಸೆಳೆದಿರುವ ಮಲ್ಲಮ್ಮ ಈ ಭಾರಿಯ ಬಿಗ್ ಬಾಸ್ ಗೆ ಆಗಮಿಸಿದ್ದು ಪ್ರಮುಖ ಆಕರ್ಷಣೆಯಾಗಿದ್ಧಾರೆ
• ನಟಿ,ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಗೌಡ: ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳಿಂದ ನಟಿಯಾಗಿ ಗುರುತಿಸಿಕೊಂಡಿರುವ ಅಶ್ವಿನಿ ಗೌಡ, ಕಿರಿತೆರೆಯಲ್ಲಿಯೂ ಅನೇಕ ಧಾರವಾಹಿಯಲ್ಲಿ ನಟಿಸಿದ್ದಾರೆ. ಜೊತೆಗೆ ಕನ್ನಡ ಪರ ಹೋರಾಟಗಾರ್ತಿ
• ನಿರೂಪಕಿ ನಟಿ,ಜಾನ್ವಿ: ಖಾಸಗಿ ವಾಹಿಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡು ಇದೀಗ ನಟಿಯಾಗಿರುವ ಜಾನ್ವಿ ಕೂಡ ಮತ್ತೊಬ್ಬ ಆಕರ್ಷಣೆಯ ಸ್ಪರ್ಧಿ
• ಕಾಮಿಡಿ ಕಲಾವಿದ ಚಂದ್ರಪ್ರಭ: ಕನ್ನಡ ಕಿರುತೆರೆಯಲ್ಲಿ ತಮ್ಮ ನಟನೆ ಮತ್ತು ವಿಭಿನ್ನ ನೃತ್ಯದ ಮೂಲಕ ಹೆಸರರಾಗಿರುವ ಕಾಮಿಡಿ ಕಲಾವಿದ ಚಂದ್ರಪ್ರಭ ಈ ಬಾರಿ ಬಿಗ್ ಬಾಸ್ ಗೆ ಎಂಟ್ರಿಕೊಟ್ಟಿದ್ದಾರೆ
• ಹಾಸ್ಯ ಕಲಾವಿದ ಗಿಲ್ಲಿ ನಟ: ಕಿರುತೆರೆಯಲ್ಲಿ ಪ್ರಾಪರ್ಟಿ ಕಾಮಿಡಿ ಮಾಡಿಕೊಂಡೇ ಖ್ಯಾತಿ ಪಡೆದ ಕಲಾವಿದ. ತಾವಿರುವಲ್ಲಿ ಹಾಸ್ಯದ ಹೊನಲು ಹರಿಸುವ ನಟ.
• ಕಿರುತೆರೆ ಮತ್ತು ಸಿನಿಮಾ ನಟಿ ಸ್ಪಂದನ: ಸಿನಿಮಾ ಮತ್ತು ಸೀರಿಯಲ್‍ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸ್ಪಂದನ ಸೋಮಣ್ಣ ಅವರು ಈ ಭಾರಿ ದೊಡ್ಮನೆಗೆ ಬಂದಿದ್ಧಾರೆ
• ಜಾನಪದ ಗಾಯಕ ಮಾಳು ನಿಪ್ಪನಾಳ್ : ಉತ್ತರ ಕರ್ನಾಟಕದ ಜಾನಪದ ಕಲಾವಿದ, ನಾ ಡ್ರೈವರಾ ನೀ ನನ್ನ ಲವ್ವರಾ ಸೇರಿದಂತೆ ಅನೇಕ ಹಾಡಿನ ಮೂಲಕ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದ ಹಾಡುಗಾರ
• ಅಂತರಾಷ್ಟ್ರೀಯ ದೇಹದಾದ್ಯ ಸ್ಪರ್ಧಿ ಕರಿಬಸಪ್ಪ : ಅಂತರಾಷ್ಟ್ರೀಯ ದೇಹದಾಢ್ಯ ಸ್ಪರ್ಧಿ ಕರಿಬಸಪ್ಪ, ತಮ್ಮ ಲುಕ್ ಮತ್ತು ನೋಟದಿಂದಲೇ ಎದುರುಗಡೆ ಇರುವ ಸ್ಫರ್ಧಿಯನ್ನು ನಡುಕ ಹುಟ್ಟಿಸುವ ಸ್ಪರ್ಧಿ
• ರಕ್ಷಿತಾ ಶೆಟ್ಟಿ : ವ್ಲಾಗರ್ ಕನ್ನಡ ,ಹಿಂದಿ, ತುಳು ಮಿಶ್ರಿತ ಭಾಷೆಯಲ್ಲಿ ವ್ಲಾಗ್ ಮಾಡುವ ರಕ್ಷಿತಾ ಶೆಟ್ಟಿ ತಾವು ಆಡುವ ಭಾಷೆಯಿಂದಲೇ ಆಗಾಗ ಟ್ರೋಲ್ ಆಗ್ತಾ ಇರುತ್ತಾರೆ.
• ಕಿರುತೆರೆ ನಟಧ್ರುವಂತ್, ಅರಮನೆ ನಗರಿಯ ಅಶ್ವಿನಿ ಎಂ.ಎಸ್, ಕಿರುತೆರೆ ನಟ ಅಭಿಷೇಕ್,ಹುಡುಗರ ಮನಗೆದ್ದ ರಾಶಿಕಾ, ಆರ್ ಜೆ ಅಮಿತ್, ನಟ ಧನುಷ್, 50 ಕೋಟಿ ಬೆಲೆ ಬಾಳುವ ನಾಯಿ ಇಟ್ಟುಕೊಂಡಿರುವ ಸತೀಶ್ ಹಾಗು ಕಿರುತೆರೆ ಹಾಗು ಸಿನಿಮಾ ನಟಿ ಕಾವ್ಯ ಶೈವಾ ಈ ಭಾರಿಯ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ

