Balayya's Akhand-2 to release on December 5th

ಡಿಸೆಂಬರ್ 5 ರಂದು ಬಾಲಯ್ಯ ನಟನೆಯ ಅಖಂಡ-2 ಚಿತ್ರ ಬಿಡುಗಡೆ - CineNewsKannada.com

ಡಿಸೆಂಬರ್ 5 ರಂದು ಬಾಲಯ್ಯ ನಟನೆಯ ಅಖಂಡ-2 ಚಿತ್ರ ಬಿಡುಗಡೆ

ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಬಹು ನಿರೀಕ್ಷಿತ `ಅಖಂಡ 2′ ಸಿನಿಮಾ 2025ರ ಡಿಸೆಂಬರ್ 5, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.

ಬೊಯಪಾಟಿ ಶ್ರೀನು ಹಾಗೂ ಬಾಲಕೃಷ್ಣ ಕಾಂಬಿನೇಷನ್‍ನ ನಾಲ್ಕನೇ ಸಿನಿಮಾ ಇದಾಗಿದೆ. ಹಿಂದೆ ಬಂದಿದ್ದ ಸಿಂಹ, ಲೆಜೆಂಡ್ ಹಾಗೂ 2021ರಲ್ಲಿ ಬಿಡುಗಡೆ ಆಗಿದ್ದ ಅಖಂಡ ಸಿನಿಮಾಗಳು ಭಾರಿ ಯಶಸ್ಸುಗಳಿಸಿವೆ. ಇದೀಗ `ಅಖಂಡ-2’ರ ನಿರ್ದೇಶನದಲ್ಲಿ ಬೊಯಪಾಟಿ ತೊಡಗಿದ್ದಾರೆ. ಪ್ರತಿಷ್ಠಿತ 14 ರೀಲ್ಸ್ ಪ್ಲಸ್ ಬ್ಯಾನರ್ ಅಡಿಯಲ್ಲಿ ರಾಮ್ ಅಚಂತ ಮತ್ತು ಗೋಪಿಚಂದ್ ಅಚಂತ ನಿರ್ಮಿಸಿರುವ ಈ ಚಿತ್ರವನ್ನು ಎಂ ತೇಜಸ್ವಿನಿ ನಂದಮೂರಿ ಪ್ರಸ್ತುತಪಡಿಸಿದ್ದಾರೆ.

ಅಖಂಡ-2 ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಭರದಿಂದ ಸಾಗುತ್ತಿದೆ.ಚಿತ್ರದಲ್ಲಿ ಬಾಲಯ್ಯಗೆ ಜೋಡಿಯಾಗಿ ಸಂಯುಕ್ತಾ ನಟಿಸುತ್ತಿದ್ದು, ಆದಿ ಪಿನಿಸೆಟ್ಟಿ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ.

ಹೈ ಬಜೆಟ್‍ನಲ್ಲಿ ನಿರ್ಮಾಣವಾಗುತ್ತಿರುವ ಅಖಂಡ-2 ಸಿನಿಮಾಗೆ ಎಸ್ ಥಮನ್ ಸಂಗೀತ ನಿರ್ದೇಶನ, ಸಿ ರಾಮಪ್ರಸಾದ್, ಸಂತೋಷ್ ಡಿ ಡೆಟಕೆ ಛಾಯಾಗ್ರಹಣ, ಎ.ಎಸ್ ಪ್ರಕಾಶ್ ಕಲಾ ನಿರ್ದೇಶನ, ತಮ್ಮಿರಾಜು ಸಂಕಲನ, ರಾಮ್-ಲಕ್ಷ್ಮಣ್ ಫೈಟ್ ಚಿತ್ರಕ್ಕಿರಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin