Review: A visually stunning story about the lives of forest dwellers revolving around the storms of life, "Kantara Chapter 1

Review : ವನವಾಸಿಗಳ ಬದುಕು ಬವಣೆ ಸುತ್ತಾ ಸಾಗುವ ವಿಭಿನ್ನ ಕಥೆಯ ದೃಶ್ಯವೈಭವ ” ಕಾಂತಾರ ಚಾಪ್ಟರ್ 1 - CineNewsKannada.com

Review : ವನವಾಸಿಗಳ ಬದುಕು ಬವಣೆ ಸುತ್ತಾ ಸಾಗುವ ವಿಭಿನ್ನ ಕಥೆಯ ದೃಶ್ಯವೈಭವ ” ಕಾಂತಾರ ಚಾಪ್ಟರ್ 1

ಚಿತ್ರ : ಕಾಂತಾರ ಅಧ್ಯಾಯ 1
ನಿರ್ದೇಶನ : ರಿಷಬ್ ಶೆಟ್ಟಿ
ತಾರಾಗಣ : ರಿಷಬ್ ಶೆಟ್ಟಿ, ರುಕ್ಷ್ಮಿಣಿ ವಸಂತ್, ಗುಲ್ಮನ್ ದೇವಯ್ಯ, ಜಯರಾಮ್, ಪ್ರಮೋದ್ ಶೆಟ್ಟಿ,ಅಚ್ಯುತ್ ಕುಮಾರ್, ಪ್ರಕಾಶ್ ತುಮಿನಾಡ್, ರಾಕೇಶ್ ಪೂಜಾರಿ, ಬಾಲ ರಾಜವಾಡಿ , ನವೀನ್ ಪಡೀಲು, ದೀಪಕ್ ರೈ ಪಣಾಜೆ,ಮತ್ತಿತರರು
ರೇಟಿಂಗ್ : **** 4/5

ಕಾಡಿನ ಜನರ ಬದುಕು, ಬವಣೆ,ಜೀವನ,ಪಂಜುರ್ಲಿ‌ ದೈವ ಶಕ್ತಿ, ಪುರಾಣ, ಸಂಸ್ಕೃತಿ,ನಂಬಿಕೆ,ಆಚಾರ, ವಿಚಾರ,ಸಾಮಾನ್ಯರು ಮತ್ತು ದುಷ್ಟ‌ ಜನರ ನಡುವಿನ ಕಾಳಗ ಸೇರಿದಂತೆ ಹಲವು ಅಂಶ ಒಳಗೊಂಡಿರುವ ಅದ್ದೂರಿ ಮೇಕಿಂಗ್, ಮನಸೂರೆಗೊಳ್ಳುವ ಜೊತೆಗೆ ಕಣ್ಮನ ಸೆಳೆಯುವ ದೃಶ್ಯ ವೈಭವ ಹೊಂದಿರುವ ಚಿತ್ರ ” ಕಾಂತಾರ‌ ಅಧ್ಯಾಯ -1″.

ಕಾಂತಾರ ಚಿತ್ರಧ ಯಶಸ್ಸಿನ ಬಳಿಕ ನಿರ್ಮಾಪಕ‌ ವಿಜಯ್ ಕಿರಂಗದೂರು ಅದ್ದೂರಿ ಮತ್ತು ಅಪಾರ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಕಾಂತಾರ ಚಾಪ್ಟರ್ 1 ತೆರೆಗೆ ಬಂದಿದೆ.‌ ನಟ,‌ನಿರ್ದೇಶಕ ರಿಷಬ್ ಶೆಟ್ಟಿ ನಟನೆ, ಮತ್ತು ನಿರ್ದೇಶನದಲ್ಲಿ‌ ಮತ್ತೊಮ್ಮೆ ಮೋಡಿ ಮಾಡಿದ್ದಾರೆ.

ಕಾಡು ಜನರಿಗೆ ಸಿಗುವ ಕಾರ್ಣಿಕ ಕಲ್ಲು, ಶಿವನ ಪ್ರತಿರೂಪವಾಗಿ ಪೂಜಿಸುವ ಜನರ ಪಾಲಿಗೆ ಸಾಕ್ಷಾತ್ ಈಶ್ವರನ ಅನುಗ್ರಹ. ಹೀಗಾಗಿ ವನವಾಸಿಗಳಿಗೆ ಈ ಜಾಗ ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ನೆಲೆ.‌ ಈ ನಡುವೆ ಭಂಗರ ಸಾಮ್ರಾಜ್ಯದ ರಾಜ ರಾಜಶೇಖರ ( ಜಯರಾಮ್) ತಮ್ಮ ಪ್ರಾಂತ್ಯದಲ್ಲಿ ಸಿಗುವ ಸಾಂಬಾರ್ ಪದಾರ್ಥದ ಕಚ್ಚಾವಸ್ತುಗಳನ್ನು ಸಮುದ್ರ ಮೂಲಕ ವಿದೇಶಗಳಿಗೆ ಮಾರಾಟ ಮಾಡುತ್ತಾನೆ. ಪುತ್ರ ಕುಲಶೇಖರ (ಗುಲ್ಕನ್ ದೇವಯ್ಯ) ಸಾಮ್ರಾಜ್ಯದ ಸಿಂಹಾಸನಾಧೀಶ್ವರ ಜವಾಬ್ದಾರಿ ಹೊರಿಸಿ ಪುತ್ರಿ ಕನಕವತಿ (ರುಕ್ಕಿಣಿ ವಾಸಂತ್‌)ಗೆ ವ್ಯಾಪಾರ, ವಹಿವಾಟಿನ ಉಸ್ತುವಾರಿಕೆ ವಹಿಸುತ್ತಾನೆ.

ದಟ್ಟ ಕಾನನದ ನಡುವೆ ಬದುಕು ಕಟ್ಟಿಕೊಂಡ ವನವಾಸಿಗಳಿಗೆ ಕಾಂತಾರದ ಈಶ್ವರನ ಹೂತೋಟದ ಮಾಯಕಾರನ ಬೆಂಬಲ. ಅರಣ್ಯವಾಸಿಗಳಿಗೆ ಕಷ್ಡ ಸುಖದಲ್ಲಿ ಭಾಗಿಯಾಗವ ಪೆರುಮೇ ( ರಿಷಬ್ ಶೆಟ್ಟಿ) ಗೆ ಆತನದೇ ಲೋಕ, ಈ ನಡುವೆ ಯುವರಾಣಿ ಕನಕವತಿಯನ್ನು ಅನಿರೀಕ್ಷಿತವಾಗಿ ‌ಭೇಟಿಯಾಗುವ ಸಮಯ ಎದುರಾಗುತ್ತದೆ.

ಪ್ರಾಂತ್ಯದಲ್ಲಿ ಸಿಗುವ ಸಾಂಬಾರು ಪದಾರ್ಥಗಳನ್ನು ತಾವೇ ಮಾರಿ ಜೀವನ ನಡೆಸಬೇಕು ಎಂದು ಪೆರುಮೇ ನಿರ್ಧರಿಸುತ್ತಾನೆ. ಈಶ್ವರನ ಹೂದೋಟದ ಮೇಲೆ ರಾಜರ ಕಣ್ಣು ಒಂದೆಡೆಯಾದರೆ ಕಡಬ ದಿಕ್ಕಿನವರ ತಂತ್ರ ಮತ್ತೊಂದೆಡೆ . ಇಂತಹ ಸಮಯದಲ್ಲಿ ಪೆರುಮೆ ಎಲ್ಲವನ್ನು‌ ಎದುರಿಸುತ್ತಾನೆ. ಈ ನಡುವೆ ಎದುರಾಗುವ ಅಡೆ ತಡೆ ಏನು. ಅದನ್ನು ಹೇಗೆ ಎದುರಿಸುತ್ತಾನೆ.ಈ ನಡುವೆ ಏನೆಲ್ಲಾ ಘಟನೆಗಳು ನಡೆಯಲಿವೆ. ಹೂವಿನ ತೋಟದ ಮಾಯಕಾರ ಯಾರು

ಈ ಮದ್ಯೆ ಪೆರುಮೆ ಪಾಲಿಗೆ ಸಿಗುವ ಶಕ್ತಿ ಯಾವುದು.. ಸಾಂಬಾರು ಪದಾರ್ಥಗಳನ್ನು ಪಡೆಯುವ ಅರಸರ ಹುನ್ನಾರ,ಯುವ ರಾಣಿಯ ವರ್ತನೆ. ತಂತ್ರ, ಕುತಂತ್ರಗಳ ನಡುವೆ ಸಾಗುವ ರೋಚಕ‌ ತಿರುಳು ಹೊಂದಿರುವ ಚಿತ್ರ.ಅದನ್ನು ಚಿತ್ರದಲ್ಲಿಯೇ ನೋಡಿದರೆ ಅದರ ಮಜಾವೇ ಬೇರೆ.

ನಟ ರಿಷಬ್ ಶೆಟ್ಟಿ ನಿರ್ದೇಶನದ ಜೊತೆಗೆ ನಟನೆಯಲ್ಲಿ ಮೋಡಿ ಮಾಡಿದ್ದಾರೆ‌.‌ ಎದುರಾದ ಅಡೆ ತಡೆ ಕಷ್ಟ, ನೋವುಗಳನ್ನು ಎದುರಿಸಿ‌ ಅದನ್ನು ಎಲ್ಲಿಯೂ ತೋರ್ಪಡಿಸಿಕೊಳ್ಳದೆ ಸುಂದರ ದೃಶ್ಯ ಕಾವ್ಯ ಕಟ್ಟಿಕೊಡಲು ಅವರು ಶ್ರಮಿಸಿರುವುದು ಪ್ರತಿಯೊಂದು ಸನ್ನಿವೇಶದಲ್ಲಿ ಕಂಡುಬರುತ್ತದೆ. ಜೊತೆಗೆ ಕೆಲಸ‌ದ ಮೇಲಿನ ಪ್ರೀತಿ, ಅಂದುಕೊಂಡಿದ್ದನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ಕಟ್ಟಿಕೊಡಬೇಕೆನ್ನುವ ಬದ್ದತೆಯೇ ಸಾಕ್ಷಿ.

ರೋಮಾಂಚನಗೊಳಿಸುವ ಸನ್ನಿವೇಶಗಳ‌ ಮೂಲಕ ಕಾಲಘಟ್ಟದ ದೃಶ್ಯಗಳು, ವೈಭವ ಮತ್ತು‌ ಪುರಾಣ, ಸಂಸ್ಕೃತಿ, ಆಚಾರ ವಿಚಾರ ನಂಬಿಕೆಯನ್ನು ಮನಮುಟ್ಟುವ ರೀತಿ ದೇಸಿ‌ ಸೊಗಡಿನಲ್ಲಿ‌ ಎಲ್ಲರಿಗೂ ಹಿಡಿಸುವ ರೀತಿ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ನಟನೆ ಮತ್ತು ನಿರ್ದೇಶನದಲ್ಲಿ ಎಲ್ಲಿಯೂ ಕಿಂಚಿತ್ತೂ ಲೋಪ‌ಬರದಂತೆ ಎಚ್ಚರಿಕೆ ವಹಿಸಿ ಚಿತ್ರವನ್ನು ಜನರ ಮುಂದಿಟ್ಟಿದ್ದಾರೆ.

ಕನಕವತಿಯಾಗಿ ನಟಿ ರುಕ್ಕಿಣಿ ವಸಂತ್ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಗುಲ್ಕನ್ ದೇವಯ್ಯ ನಟನೆಯಲ್ಲಿ ನೈಜತೆ ಕಾಣುತ್ತದೆ. ಉಳಿದಂತೆ ಜಯರಾಮ್, ಹಾಸ್ಯ ಸನ್ನಿವೇಶಗಳಲಚಿಬ ರಾಕೇಶ್ ಪೂಜಾರಿ, ನವೀನ್ ಡಿ ಪಡಿಲ್, ಪ್ರಕಾಶ್ ತುಮ್ಮಿ ನಾಡು, ದೀಪಕ್ ರೈ ಪಾಣಾಜೆ ಸೇರಿದಂತೆ ಅಚ್ಚುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದಾರೆ.

ಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಎಸ್.ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ಕಾಂತಾರ ಚಾಪ್ಟರ್ 1 ಒಮ್ಮೆ‌ಯಾದರೂ ನೋಡಲೇ ಬೇಕು ಎನಿಸುವ ಚಿತ್ರ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin