Sanchit Sanjeev starrer "Mango Pachcha" teaser released: The actor sets the mood at first glance

ಸಂಚಿತ್ ಸಂಜಿವ್ ನಟನೆಯ “ಮ್ಯಾಂಗೋ ಪಚ್ಚ” ಟೀಸರ್ ಬಿಡುಗಡೆ: ಮೊದಲ ನೋಟದಲ್ಲಿ ಕಿಚ್ಚು ಹಚ್ಚಿದ ನಟ - CineNewsKannada.com

ಸಂಚಿತ್ ಸಂಜಿವ್ ನಟನೆಯ “ಮ್ಯಾಂಗೋ ಪಚ್ಚ” ಟೀಸರ್ ಬಿಡುಗಡೆ: ಮೊದಲ ನೋಟದಲ್ಲಿ ಕಿಚ್ಚು ಹಚ್ಚಿದ ನಟ

ಜೂನಿಯರ್ ಕಿಚ್ಚ ಸಂಚಿತ್ ಸಂಜೀವ್ ” ಮ್ಯಾಂಗೋ ಪಚ್ಚ ” ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಗೊತ್ತಿರುವ ಸಂಗತಿ. ಸಂಚಿತ್ ಅಭಿನಯದ ಮೊದಲ ಸಿನಿಮಾ ಟೀಸರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿ ಸೋದರಳಿಯನ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದ್ದಾರೆ

ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಅಭಿನಯದ ಬಹುನಿರೀಕ್ಷೆಯ ಚೊಚ್ಚಲ ಮ್ಯಾಂಗೋ ಪಚ್ಚ. ಆಯುಧ ಪೂಜೆಯ ದಿನವೇ ಸಂಚಿತ್ ಮೊದಲ ಸಿನಿಮಾದ ಟೀಸರ್ ಬಿಡುಗಡೆ ಆಗಿರುವುದು ಚಿತ್ರರಂಗಕ್ಕೆ ಹೊಸ ಆಯುಧ ಸಿಕ್ಕಂತೆ ಆಗಿದೆ.

ಮ್ಯಾಂಗೋ ಪಚ್ಚ ಮೈಸೂರು ಭಾಗದ ಕಥೆ. ದಸರ ಸಂಭ್ರಮದಲ್ಲೇ ಮೈಸೂರು ಭಾಗದ ಕಥೆಯ ಝಲಕ್ ತೋರಿಸಿರುವುದು ಸಿನಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಈಗಾಗಲೇ ಚಿತ್ರದ ಇಂಟ್ರಡಕ್ಷನ್ ಟೀಸರ್ ರಿಲೀಸ್ ಮಾಡಲಾಗಿದ್ದು ಸಂಚಿತ್ ರೆಟ್ರೋ ಲುಕ್‌ ಅಭಿಮಾನಿಗಳ ಹೃದಯ ಗೆದ್ದಿತ್ತು. ಇದೀಗ ಭರ್ಜರಿ ಟೀಸರ್ ಅಭಿಮಾನಿಗಳ ನಿದ್ದೆಗೆಡಿಸುವಂತಿದೆ.

ಗಮನ ಸೆಳೆದ ಟೀಸರ್ :

ಮ್ಯಾಂಗೋ ಪಚ್ಚ ಮೈಸೂರು ಮೂಲಕ ಕ್ರೈಂ ಥ್ರಿಲ್ಲರ್ ಸಿನಿಮಾ. ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ಮಾಡಲಾಗಿದೆ. ಸಂಚಿತ್ ಹೂವಿನ ಮಾರ್ಕೆಟ್‌ನಲ್ಲಿ ಸಿಗರೇಟ್ ಸೇಯುತ್ತ ಎಂಟ್ರಿ ಕೊಡುವ ದೃಶ್ಯ ಗಮನ ಸೆಳೆಯುತ್ತಿದೆ.

ಪಕ್ಕ ಮಾಸ್ ಎಂಟಟೈನ್ಮೆಂಟ್ ಸಿನಿಮಾ ಇದಾಗಿದ್ದು ಸಂಚಿತ್ ಮೊದಲ ಪುಟ್ಟ ಟೀಸರ್‌‌ನಲ್ಲೇ ನಿರೀಕ್ಷೆ ದುಪ್ಪಟ್ಟು ಮಾಡಿದ್ದಾರೆ. ಮಾವನ ಹಾಗೆ ಸಂಚಿತ್ ಕೂಡ ಚಿತ್ರರಂಗದಲ್ಲಿ ಆರಡಿ ಕಟೌಟ್ ಆಗಿ ಮೆರೆಯುವ ಎಲ್ಲಾ ಲಕ್ಷಣಗಳು ಈ ಟೀಸರ್‌ನಲ್ಲಿ ಗೋಚರಿಸುತ್ತಿದೆ.

ಅಂದಹಾಗೆ ಮ್ಯಾಂಗೋ ಪಚ್ಚ ವಿವೇಕ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. 2001 ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿದೆ. ಮ್ಯಾಂಗೋ ಪಚ್ಚ ಚಿತ್ರಕ್ಕೆ ಕೆಆರ್‌ಜಿ ಮತ್ತು ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವುದು ವಿಶೇಷ.

ವಿವೇಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಸಂಚಿತ್ ಮೊದಲ ಸಿನಿಮಾಗೆ ನಾಯಕಿಯಾಗಿ ನಟಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಉಳಿದಂತೆ ಈ ಸಿನಿಮಾದಲ್ಲಿ ನಟ ಮಯೂರ್ ಪಟೇಲ್, ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜೇಯ್, ಬಿಗ್ ಬಾಸ್ ಖ್ಯಾತಿಯ ನಟಿ ಹಂಸ, ಮಾಲಾಶ್ರೀ ಸೇರಿದಂತೆ ದೊಡ್ಡ ತಾರಾಬಳಗವೆ ಇದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಶೇಖರ್ ಚಂದ್ರ ಛಾಯಾಗ್ರಾಹಣ, ವಿಶ್ವಾಸ್ ಆರ್ಟ್ ವರ್ಕ್ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin