ಧರ್ಮ ರಕ್ಷಣೆಯ ಹೊಣೆ ಹೊತ್ತ “ಪರಶುರಾಮನ ಅಧ್ಯಾಯ” ಸ್ಟಾರ್ ಸುವರ್ಣದಲ್ಲಿ ಆರಂಭ - CineNewsKannada.com

ಧರ್ಮ ರಕ್ಷಣೆಯ ಹೊಣೆ ಹೊತ್ತ “ಪರಶುರಾಮನ ಅಧ್ಯಾಯ” ಸ್ಟಾರ್ ಸುವರ್ಣದಲ್ಲಿ ಆರಂಭ

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿ ವೀಕ್ಷಕರಿಗೆ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕಥೆಗಳನ್ನು ನೀಡುತ್ತಾ ಬಂದಿದೆ. ಪ್ರಸ್ತುತ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ” ಧಾರಾವಾಹಿ ಪ್ರೇಕ್ಷಕರ ಮನಗೆದ್ದು ಯಶಸ್ಸಿನಿಂದ ಸಾಗುತ್ತಿದೆ. ಇನ್ಮುಂದೆ ವಿಷ್ಣುವಿನ ಮಹಾವತಾರ ಪರಶುರಾಮನ ಕಥೆ ಹೇಳಲು ಸಜ್ಜಾಗಿದೆ ಸ್ಟಾರ್ ಸುವರ್ಣ.

ಮನೆಮಾತಾಗಿದ್ದರು ಆದರೆ ಇನ್ಮುಂದೆ ಕಥೆ “ಪರಶುರಾಮನ ಅಧ್ಯಾಯ” ಹೇಳಲು ತಯಾರಾಗಿದೆ. ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ವಿಷ್ಣುವಿನ ಮಹಾವತಾರ ಪರಶುರಾಮನ ಕಥೆ ಹೇಳುತ್ತಿರುವ ಹೆಗ್ಗಳಿಕೆ ಸ್ಟಾರ್ ಸುವರ್ಣ ವಾಹಿನಿಗೆ ಸಲ್ಲುತ್ತದೆ.

ಬಾಲ್ಯದಿಂದಲೂ ಕಷ್ಟಗಳನ್ನೇ ಎದುರಿಸುತ್ತಾ ಬಂದಿರುವ ರೇಣುಕಾ-ಯಲ್ಲಮ್ಮರ ಬಾಳಿನಲ್ಲಿ 10 ವರ್ಷಗಳ ಬಳಿಕ ಏನೆಲ್ಲಾ ಆಗಲಿದೆ ಪರಶುರಾಮನ ಜನನ, ಬಾಲ್ಯ, ವಿದ್ಯಾಭ್ಯಾಸ ಹೇಗೆಲ್ಲ ಸಾಗಲಿದೆ ಕಾರಾಗೃಹದಿಂದ ಹೊರ ಬಂದಿರೋ ಯಲ್ಲಮ್ಮನ ಜೀವನದ ದಿಕ್ಕು ಯಾವೆಲ್ಲ ಸವಾಲಿನಿಂದ ಕೂಡಿರಲಿದೆ ಮೊದಲಿನಂತೆ ರೇಣುಕಾ ಯಲ್ಲಮ್ಮರ ಸ್ನೇಹ ಮುಂದುವರಿಯಲಿದೆಯಾ ಎಂಬುದೇ ಈ ಧಾರಾವಾಹಿಯ ಮುಂದಿನ ರೋಚಕ ಕಥಾಹಂದರ.

ಈಗಾಗಲೇ ಹೊಸ ಅಧ್ಯಾಯದ ಚಿತ್ರೀಕರಣ ಶುರುವಾಗಿದ್ದು, ರೇಣುಕೆಯಾಗಿ ವರ್ಷ, ಯಲ್ಲಮ್ಮನ ಪಾತ್ರದಲ್ಲಿ ಮಾನಸ ಅಭಿನಯಿಸುತ್ತಿದ್ದಾರೆ. ಅಮೋಘ ವಿನ್ಯಾಸದ ಸೆಟ್ ಮತ್ತು ಗ್ರಾಫಿಕ್ಸ್‍ನಿಂದ ಪ್ರಸಾರವಾಗುತ್ತಿರುವ ಧಾರಾವಾಹಿಯ ಪ್ರೊಮೊ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ವಿಷ್ಣುವಿನ ಮಹಾವತಾರ ಪರಶುರಾಮನ ಅಧ್ಯಾಯದ ಜೊತೆ, ಹೊಸ ಉತ್ಸಾಹದೊಂದಿಗೆ ಬರ್ತಿದ್ದಾರೆ ರೇಣುಕಾ-ಯಲ್ಲಮ್ಮ.”ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ – ಪರಶುರಾಮ ಅಧ್ಯಾಯ” ಇದೇ ಸೋಮವಾರದಿಂದ ರಾತ್ರಿ 9 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin