Bengaluru International Children's Film Festival: Puppy wins first place
ಬೆಂಗಳೂರು ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ: ಪಪ್ಪಿ ಚಿತ್ರಕ್ಕೆ ಮೊದಲ ಸ್ಥಾನ
ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ಆಯೋಜಿಸಿದ್ದ ಎರಡನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ ತೆರೆ ಬಿದ್ದಿದೆ. ಮಕ್ಕಳ ಚಿತ್ರಕ್ಕೆ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ಚಿತ್ರೋತ್ಸವ ಆಯೋಜನೆ ಮಾಡಲಾಗುತ್ತದೆ. ಈ ಬಾರಿ ಒಟ್ಟು 9 ಸಿನಿಮಾಗಳ ಪ್ರದರ್ಶನ ನಡೆದಿದೆ. ಆಯ್ದ ಮಕ್ಕಳ ಸಿನಿಮಾಗಳಿಗೆ 18 ಬೇರೆ ಬೇರೆ ವಿಭಾಗದಲ್ಲಿ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.

ಪ್ರಶಸ್ತಿ ಪಡೆದ ಸಿನಿಮಾ
- ವಿನ್ನರ್-ಪಪ್ಪಿ ಸಿನಿಮಾ
- ಮೊದಲ ರನ್ನರ್ ಅಪ್-ಕರಡಿಗುಡ್ಡ ಸಿನಿಮಾ
- 2ನೇ ರನ್ನರ್ ಅಪ್-ಬಾಲ್ಯ ಸಿನಿಮಾ
- ಅತ್ಯುತ್ತಮ ಬಾಲ ಕಲಾವಿದ- ಪುರುಷ ವಿಭಾಗ ವರುಣ್ ಗಂಗಾಧರ್ – ಸ್ವರಾಜ್ಯ
*ಅತ್ಯುತ್ತಮ ಬಾಲ ಕಲಾವಿದೆ _ ರುತು – ಟೇಕ್ವಾಂಡೋ ಗರ್ಲ್
- ಅತ್ಯುತ್ತಮ ಬಾಲ ಕಲಾವಿದ : ಮಾಸ್ಟರ್ ಶ್ರೇಯಸ್ – ಜೀನಿಯಸ್ ಮುತ್ತಾ
- ಅತ್ಯುತ್ತಮ ಬಾಲ ಕಲಾವಿದೆ : ಇದು ನಮ್ಮ ಶಾಲೆ -ಪುಣ್ಯಶ್ರೀ
- ಅತ್ಯುತ್ತಮ ನಟ : ವಿಜಯ್ ರಾಘವೇಂದ್ರ -ಜೀನಿಯಾಸ್ ಮುತ್ತಾ
- ಅತ್ಯುತ್ತಮ ನಟಿ : ವೀಣಾ ಸುಂದರ್- ಸ್ವರಾಜ್ಯ
- ಅತ್ಯುತ್ತಮ ಪೋಷಕ ನಟ : ಸುಮನ್ – ಏಕಲವ್ಯ
- ಅತ್ಯುತ್ತಮ ಪೋಷಕ ನಟಿ : ಪದ್ಮ ವಾಸಂತಿ – ಜೀನೀಸ್ ಮುತ್ತಾ
- ಅತ್ಯುತ್ತಮ ನಿರ್ದೇಶಕ : ನಾಗಿಣಿ ಭರಣ-ಜೀನೀಸ್ ಮುತ್ತಾ
• ಅತ್ಯುತ್ತಮ ಸಂಕಲನ : ರವಿಚಂದ್ರನ್ – ಟೇಕ್ವಾಂಡೋ ಗರ್ಲ್
- ಅತ್ಯುತ್ತಮ ಗಾಯಕಿ : ಶಮಿತಾ ಮಲ್ನಾಡ್- ಚಿಣ್ಣರ ಚಂದ್ರ
- ಅತ್ಯುತ್ತಮ ಛಾಯಾಗ್ರಹಣ : ವಿ. ಪವನ್ ಕುಮಾರ್ -ಕರಡಿ ಗುಡ್ಡ
- ಅತ್ಯುತ್ತಮ ಚಿತ್ರಕಥೆ : ಅಮ್ಮಿತ್ ರಾವ್ – ಕರಡಿ ಗುಡ್ಡ
- ಅತ್ಯುತ್ತಮ ಪಿಆರ್ ಓ: ಸುಧೀಂದ್ರ ವೆಂಕಟೇಶ್
- ಅತ್ಯುತ್ತಮ ಪೆÇ್ರಡಕ್ಷನ್ ಹೌಸ್ : ವೈ ಮೂವೀಸ್ ಸ್ವರಾಜ್ಯ


