ಸಿನಿಮಾದೊಳಗೊಂದು ಸಿನಿಮಾ “ಟೈಮ್ ಪಾಸ್” ಚಿತ್ರ ಅಕ್ಟೋಬರ್ 17 ಪ್ರೇಕ್ಷಕರ ಮುಂದೆ
ಕೆ.ಚೇತನ್ ಜೋಡಿದಾರ್ ಆಕ್ಷನ್ಕಟ್ ಹೇಳಿರುವ “ಮನರಂಜನೆಯನ್ನೇ ಪ್ರಧಾನವಾಗಿರಿಸಿಕೊಂಡಿರುವ “ಟೈಮ್ ಪಾಸ್” ಚಿತ್ರ ಅಕ್ಟೋಬರ್ 17 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.
ಸಿನಿಮಾ ಮಾಡಿ ಎಲ್ಲವನ್ನೂ ಕಳೆದುಕೊಂಡ ಫೆಲ್ಯೂರ್ ನಿರ್ಮಾಪಕ, ನಾಯಕನಾಗುವ ತನಕ ಬಟ್ಟೆ ಹಾಕಲ್ಲ ಎಂದು ಶಪಥ ಮನೆ ಬಿಟ್ಟು ಬಂದ ಹುಡುಡಗನ ಸುತ್ತ ಸಾಗುವ ಸಿನಿಮಾದೊಳಗೊಂದು ಸಿನಿಮಾ ಕಥೆಹೊಂದಿರುವ ಚಿತ್ರಕ್ಕೆ ಗುಂಡೂರು ಶೇಖರ್ ,ಕಿರಣ್ ಕುಮಾರ್ ಶೆಟ್ಟಿ, ಎಂ.ಎಚ್ ಕೃಷ್ಣ ಮೂರ್ತಿ ಬಂಡವಾಳ ಹಾಕಿದ್ದಾರೆ.
ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದೆ, ಈ ವೇಳೆ ಮಾತಿಗಿಳಿಸಿದ ನಿರ್ದೇಶಕ ಕೆ.ಚೇತನ್ ಜೋಡಿದಾರ್, ಮೊದಲು ಟೈಮ್ ಪಾಸ್ ಹೆಸರಲ್ಲಿ ಚಿಕ್ಕ ಮೊತ್ತದಲ್ಲಿ ಕಿರುಚಿತ್ರ ಮಾಡಿದ್ದವು, ಅದಕ್ಕೆ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಕಿರುಚಿತ್ರದಲ್ಲಿ ನಟಿಸಿದ್ದ ಕಲಾವಿದರನ್ನು ಬಳಸಿಕೊಂಡು ಸಿನಿಮಾ ಮಾಡಿದ್ದೇವೆ. ಆರಂಭದಲ್ಲಿ ಹಣಕಾಸಿನ ತೊಂದರೆ ಎದುರಾದಾಗ ತಂದೆ ಕೃಷ್ಣಮೂರ್ತಿ ಬೆಂಬಲಕ್ಕೆ ನಿಂತರು, ಒಂದು ಹಂತದವರೆಗೆ ಹಣ ನೀಡಿ ಆ ಮೇಲೆ ದುಡ್ಡಿಲ್ಲ ಎಂದರು.

ಸಿನಿಮಾ ಅಲ್ಲಿಗೆ ನಿಂತು ಹೋಯಿತು, ಆಗ ಗುಂಡೂರು ಶೇಖರ್ ಜೊತೆಯಾದರು ಅವರು ಒಂದಷ್ಟು ಹಣ ಹಾಕಿ ಇರುವುದು ಇಷ್ಟ ಇಷ್ಟೊರಳೆಗೆ ಸಿನಿಮಾ ಮಾಡಿ, ಇಲ್ಲ ಏನು ಮಾಡಿದ್ದರೋ ಹಾಗೆ ಬಿಡುಗಡೆ ಮಾಡಿ ಎಂದರು, ಇಂತಹ ಸಮಯದಲ್ಲಿ ನೆರವಿಗೆ ಬಂದವರು ಕಿರಣ್ ಕುಮಾರ್ ಶೆಟ್ಟಿ, ಹೀಗೆ ಮೂರು ಮಂದಿ ನಿರ್ಮಾಪಕರ ಸಹಕಾರದಿಂದ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ, ಯುವಕರ ತಂಡ ಚಿತ್ರದ ಮೇಲೆ ಕನಸಿಟ್ಟು ಸಿನಿಮಾ ಮಾಡಿದ್ದೇವೆ ಎಲ್ಲರ ಪ್ರೀತಿ ಪ್ರೋತ್ಸಾಹ ಬೆಂಬಲವಿರಲಿ ಎಂದು ಕೇಳಿಕೊಂಡರು
ನಿರ್ಮಾಪಕರಲ್ಲಿ ಒಬ್ಬರಾದ ಕಿರಣ್ ಕುಮಾರ್ ಶೆಟ್ಟಿ ಮಾತನಾಡಿ ಚಿತ್ರಕ್ಕೆ ಇಲ್ಲಿಯತನಕ ಹೆಚ್ಚು ಕಡಿಮೆ ಎರಡು ಕೋಟಿ ರೂಪಾಯಿ ವೆಚ್ಚವಾಗಿದೆ, ಇದೇ 17ನೇ ತಾರೀಖು ಸಿನಿಮಾ ಬಿಡುಗಡೆಯಾಗುತ್ತಿದೆ ಎಲ್ಲರ ಸಹಕಾರವಿರಲಿ ಎಂದರು
ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ರತ್ಶಾರಾಮ್, ಸಿನಿಮಾ ,ಸೀರಿಯಲ್ನಲ್ಲಿ ನಟಿಸದ್ದೇನೆ. ಚಿತ್ರದಲ್ಲಿ ಎಗ್ ರೈಸ್ ಮಂಜ ಪಾತ್ರ ಮಾಡಲು ಎಲ್ಲಾ ಎಗ್ ರೈಸ್ ಅಂಗಡಿಗೆ ಹೋಗಿ ಕಲಿತಿದಿದ್ದೇನೆ. ಚಿತ್ರದಲ್ಲಿ ಮತ್ತೊಂದು ಪಾತ್ರ ಪಾತ್ರವೂ ಕೂಡ ಇದೆ ಅದನ್ನು ಚಿತ್ರದಲ್ಲಿ ನೋಡಬೇಕು ಎಂದರು

ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇಮ್ರಾನ್ ಪಾಷ ಮಾತನಾಡಿ, ಈ ಮುಂಚೆ ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದೆ. ಟೈಮ್ ಪಾಸ್ ಚಿತ್ರದಲ್ಲಿ ಪ್ರಮುಖ ಪಾತ್ರ ಸಿಕ್ಕಿದೆ, ಸಿನಿಮಾಬಗ್ಗೆ ಕನಸು ಕಂಡು ಗುರಿ ಸಾಧನೆಗೆ ಅಪ್ಪನ ಮೇಲೆ ಕೋಪ ಮಾಡಿಕೊಂಡು ಮನೆ ಬಿಟ್ಟು ಬರುವ ಪಾತ್ರ, ಅದರಲ್ಲಿ ಯಶಸ್ಸು ಗಳಿಸುತ್ತಾನಾ, ಇಲ್ಲವೇ ಎನ್ನುವುದನ್ನು ಚಿತ್ರದಲ್ಲಿ ನೋಡಿ ಎಂದು ಕುತೂಹಲ ಹೆಚ್ಚು ಮಾಡಿದರು
ಚಿತ್ರದಲ್ಲಿ ಹಲವು ವಿಭಾಗಳಲ್ಲಿ ಕೆಲಸ ಮಾಡಿರುವ ವೈಷ್ಣವಿ ಸತ್ಯನಾರಾಯಣ್ , ಮೊದಲು ಚಿತ್ರದ ಸಹ ನಿರ್ದೇಶಕಿಯಾಗಿ ನಿರ್ದೇಶಕರು ಆಯ್ಕೆ ಮಾಡಿಕೊಂಡರು, ನಂತರ, ಪಾತ್ರ ಕೊಟ್ಟರು, ಜೊತೆಗೆ ಚಿತ್ರದಲ್ಲಿ ಎರಡು ಹಾಡು ಬರೆಯುವ ಜೊತೆಗೆ ನೃತ್ಯ ಸಂಯೋಜನೆಯನ್ನೂ ಮಾಡಿದ್ದೇನೆ, ಹೊಸಬರ ತಂಡಕ್ಕೆ ಪ್ರೋತ್ಸಾಹ ಇರಲಿ ಎಂದರು
ಕಲಾವಿದ ನವೀನ್ ಮಾತನಾಡಿ, ಸಿನಿಮಾದಲ್ಲಿ ಮ್ಯಾನೇಜರ್ ಪಾತ್ರ ಮಾಡಿದ್ದೇನೆ. ಎಲ್ಲರ ಸಹಕಾರವಿರಲಿ ಎಂದರೆ ಪ್ರಭಾಕರ್ ರಾವ್ ಕಥೆಗಾರನ ಪಾತ್ರ, ಸಿನಿಮಾ ಯಾವ ರೀತಿ ಬಂದಿದೆ ಎನ್ನುವುದನ್ನು ನೋಡಲು ಕಾತುರರಾಗಿದ್ದೇನೆ ಎಂದು ಹೇಳಿದರು
ಓಂಶ್ರೀ ಯಕ್ಷ್, ಸಂಪತ್ ಕುಮಾರ್,ಅಶ್ವಿನಿ ಶ್ರೀನಿವಾಸ್ ಸೇರಿದಂತೆ ಮತ್ತಿತರು ಚಿತ್ರದ ತಾರಾಬಳಗದಲ್ಲಿದ್ದಾರೆ.


