"Koragajja" is not influenced by Kantara cinema - Director Sudhir Attavar

“ಕೊರಗಜ್ಜ” ಚಿತ್ರ ಕಾಂತಾರ ಸಿನಿಮಾದಿಂದ ಪ್ರಭಾವಿತರಾಗಿಲ್ಲ – ನಿರ್ದೇಶಕ ಸುಧೀರ್ ಅತ್ತಾವರ್ - CineNewsKannada.com

“ಕೊರಗಜ್ಜ” ಚಿತ್ರ ಕಾಂತಾರ ಸಿನಿಮಾದಿಂದ ಪ್ರಭಾವಿತರಾಗಿಲ್ಲ – ನಿರ್ದೇಶಕ ಸುಧೀರ್ ಅತ್ತಾವರ್

“ಕೊರಗಜ್ಜ” ಚಿತ್ರ ಅಡೆ ತಡೆದಾಟಿ ಎದುರಾದ ಸಂಕಷ್ಠಗಳ ಸರಮಾಲೆ ಹಿಂದಿಕ್ಕಿ ಬಿಡುಗಡೆಯ ಹಂತಕ್ಕೆ ಬಂದಿದೆ. ಎಲ್ಲಾ ಅಂದುಕೊಂಡಂತೆ ಆದರೆ ನವಂಬರ್ 28ರಂದು ಚಿತ್ರ ತೆರೆಗೆ ಬರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಮಾಜಿ ಸಚಿವೆ ಮೋಟಮ್ಮ , ಹಿರಿಯ ಕಲಾವಿದರಾದ ವಿಜಯಲಕ್ಷ್ಮಿ ಸಿಂಗ್, ಶೃತಿ, ಭವ್ಯ ಸೇರಿದಂತೆ ಚಿತ್ರತಂಡ ಹಾಜರಿದ್ದು ಚಿತ್ರಕ್ಕೆ ಮತ್ತು ತಂಡಕ್ಕೆ ಶುಭ ಹಾರೈಸಿದರು

ಬಳಿಕ ಮಾತಿಗಿಳಿದ ನಿರ್ದೇಶಕ ಸುಧೀರ್ ಅತ್ತಾವರ್. ಕೊರಗಜ್ಜ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. 12 ವರ್ಷ ಕೆಳಗೆ “ಪರಿಯೆ” ಚಿತ್ರ ಮಾಡಿದ್ದೆ, ಆ ಚಿತ್ರ ರಾಜಸ್ತಾನ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಂದಿತ್ತು. ಆ ಚಿತ್ರದಲ್ಲಿ ಭೂತದ ಕತೆ ಇಟ್ಟು ಸಿನಿಮಾ ಮಾಡಿದ್ದೆ. ಕಾಂತಾರ ಚಿತ್ರ ಬರುವ ಮುನ್ನವೇ ಕೊರಗಜ್ಜ ಚಿತ್ರದ ಕಥೆ ಮಾಡಿ ನಿರ್ಮಾಪಕನ್ನು ಭೇಟಿ ಮಾಡಿದ್ದೆ, ಕಾಂತಾರ ಚಿತ್ರದಿಂದ ಎಲ್ಲಿಯೂ ಪ್ರಭಾವಿತರಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಚಿತ್ರವನ್ನು ಕೇರಳದ ಕೊಚ್ಚಿ, ತಿರಪಾಳ್ಳಿ, ರಾಜ್ಯದ ಗಗನಚುಕ್ಕಿ, ಕಗ್ಗಲೀಪುರ, ಸೋಮೇಶ್ವರ, ಬೆಳ್ತಂಗಡಿ ಸೇರಿದಂತ 13 ಜಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಕೊರಗಜ್ಜನ ಬಗ್ಗೆ ಕಥೆ ಇರಲಿಲ್ಲ. ಬಹಳಷ್ಟು ಜನರಲ್ಲಿ ತಪ್ಪು ಕಲ್ಪನೆಗಳಿವೆ. ಕುತ್ತಾರ್‍ನಲ್ಲಿರುವ ಕೊರಗಜ್ಜನ ಮೂಲ ಸ್ತಾನದಲ್ಲಿ ಎರಡು ಕಲ್ಲುಗಳಿವೆ ಅದನ್ನು ಸಮಾಧಿ ಅನ್ನುತ್ತಾರೆ. ಅವುಗಳನ್ನು ಹೆಂಡತಿ ಎನ್ನುವರೂ ಇದ್ದಾರೆ, ಕೊರಗಜ್ಜನಿಗೆ 7 ಹೆಂಡ್ತಿ ಇದ್ದಾರೆ ಎನ್ನುವ ಮಾತುಗಳೂ ಇವೆ ಎಂದರು

ಕೊರಗ ಭಾಷಿಕರು ಕಾಡಿನಲ್ಲಿ ಸೇರಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಅವರಿಗೆ ಅವರದೇ ಆದ ಭಾಷೆ, ಲಿಪಿ, ಸಾಹಿತ್ಯ ಎಲ್ಲವೂ ಇದೆ ಎನ್ನುವುದು ಇತ್ತೀಚೆಗೆ ತಿಳಿದಿದೆ, ಆದರೆ ತುಳುನಾಡಿನಲ್ಲಿ ಸಮುದಾಯಕ್ಕೊಂದು ದೈವ ಇವೆ, ಆದರೆ ಇತ್ತೀಚೆಗೆ ಕೆಲವರು ಕೊರಗಜ್ಜನನ್ನು ಹೈಜಾಕ್ ಮಾಡುವ ಮೂಲಕ ಕೊರಗ ಸಮುದಾಯವನ್ನು ಕಡೆಗಣಿಸುತ್ತಿದ್ದಾರೆ ಇದು ಸರಿಯಲ್ಲ ಎಂದು ಮಾಹಿತಿ ಹಂಚಿಕೊಂಡರು.

ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಮಾತನಾಡಿ, ಮೂರು ವರ್ಷದ ಹಿಂದೆ ನಿರ್ದೇಶಕರು ಕೊರಗಜ್ಜ ಸಿನಿಮಾ ಮಾಡೋಣ ಎಂದು ನಿರ್ದೇಶಕರು ಬಂದಿದ್ದರು ಕತೆ ಕೇಳಿ ಅರ್ದ ಗಂಟೆಯಲ್ಲಿ ಸಿನಿಮಾ ಮಾಡಲು ಒಪ್ಪಿಕೊಂಡೆ ನಾನು ಕೊರಗಜ್ಜನ ಆರಾಧಕ ಕುಟುಂಬದದಿಂದ ಬಂದವನು, ತಾಯ್ನೆಲದ ಜಲ, ಪರಂಪರೆ, ಪದ್ದತಿ, ನೆಲ ಇದನ್ನು ಪ್ರಪಂಚಾದಾದ್ಯಂತ ಕೊರಗಜ್ಜ ಆರಾಧಕರ ಭಾವನೆಗಳಿಗೆ ಧಕ್ಕೆ ತರದೆ ಚಿತ್ರೀಕರಿಸಿ ತೋರಿಸುವ ಆಸೆ, ಇತ್ತು, ಹೀಗಾಗಿ ಚಿತ್ರ ಮಾಡಿದ್ದೇನೆ 15 ಬಾರಿ ಸಿನಿಮಾ ನೋಡಿದ್ದೇನೆ, ಪ್ರತಿಯೊಂದು ಕಷ್ಟ ಅದ್ಬುವಾಗಿ ಮೂಡಿಬಂದಿದೆ ಎಂದರು.

ಚಿತ್ರದಲ್ಲಿ ಅಪ್ಪ- ಮಗನ ಬಾಂಧವ್ಯ, ಪೇಮಕಥೆ ಇಲ್ಲ. ಆದರೆ ಭಕ್ತರ ಭಾವನೆಗಳಿವೆ. ಸಿನಿಮಾ ಮಾಡಲು ನಿರ್ದೇಶಕರು 6 ತಿಂಗಳೂ ಶ್ರಮಪಟ್ಟಿದ್ದಾರೆ. 800 ವರ್ಷದ ಕಾಸ್ಟೂಮ್ ಸಿದ್ದಪಡಿಸಲು 2 ರಿಂದ 3 ತಿಂಗಳು ತೆಗೆದುಕೊಂಡಿದ್ದಾರೆ. ನವಂಬರ್ 28 ರಂದು ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ ಎಲ್ಲರ ಸಹಕಾರ ಮತ್ತು ಬೆಂಬಲವಿರಲಿ ಎಂದು ಹೇಳಿದರು

ಹಿರಿಯ ನಟಿ ಶೃತಿ ಮಾತನಾಡಿ ಮೋಷನ್ ಪಿಕ್ಚರ್ ವಿಶೇಷವಾಗಿ ಮಾಡಿದ್ದಿದ್ದು ಸಿನಿಮಾ ಕೂಡ ಅದ್ದೂರಿಯಾಗಿ ಮೂಡಿ ಬಂದಿದೆ ಎನ್ನುವುದು ಚಿತ್ರದಲ್ಲಿ ತಿಳಿಯಲಿದೆ, ಸಿನಿಮಾ ಮುಗಿದ ಮೇಲೂ ಅಡೆತಡೆ ಜೊತೆಗೆ ವಿವಾದಗಳು ಎದುರಾಗಿದ್ದವು, ವಿಭಿನ್ನ ಕಥೆಯ ಚಿತ್ರವನ್ನು ಕೈಗೆತ್ತಿಕೊಂಡು ಸಿನಿಮಾ ಮಾಡಲಾಗಿದೆ, ಅಡಚಣೆ ಎದುರಾಗುತ್ತಿದ್ದರೂ ಎಲ್ಲವೂ ಸರಿ ಹೋಗುತ್ತಿತ್ತು. ನಿರ್ದೇಶಕ ಸುಧೀರ್ ಅತ್ತಾವರ ಮೈಮೇಲೆ ಪಂಜುರ್ಲಿ ದೈವ, ಬೈರಕ್ಕೆ ಸೇರಿದಂತೆ ಚಿತ್ರದಲ್ಲಿರುವ ಅಷ್ಟು ಪಾತ್ರಗಳ ದೇವರು ಮೈಮೇಲೆ ಬಂದಿದ್ದವು, ಕನ್ನಡದ ವಿಶೇಷ ಸಿನಿಮಾಗಳಲ್ಲಿ ಒಂದಾಗಲಿದೆ. ಚಿತ್ರದಲ್ಲಿ ಕೊರಗಜ್ಜನ ಸಾಕು ತಾಯಿ ಪಾತ್ರ. ಇಂತಹ ಪಾತ್ರ ಮಾಡಲು ಪುಣ್ಯ ಮಾಡಿರಬೇಕು ಹೇಳಿಕೊಂಡರು

ಹಿರಿಯ ನಟ ಭವ್ಯ ಮಾತನಾಡಿ, ಕೊರಗಜ್ಜನ ಕೃಪೆಯಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರೆ ಮತ್ತೊಬ್ಬ ಹಿರಿಯ ನಟಿ ವಿಜಯಲಕ್ಷ್ಮಿ ಸಿಂಗ್, ಮಾಜಿ ಸಚಿವೆ ಮೋಟಮ್ಮ ಸೇರಿದಂತೆ ಚಿತ್ರತಂಡದ ಅನೇಕರು ಈ ವೇಳೆ ಉಪಸ್ಥಿತರಿದ್ದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin