Promotional vehicle for the film "Congratulations Brother" travels across the state

ರಾಜ್ಯದ ಉದ್ದಗಲಕ್ಕೂ “ಕಂಗ್ರಾಜುಲೇಷನ್ ಬ್ರದರ್ ” ಚಿತ್ರದ ಪ್ರಚಾರ ವಾಹನ ಸಂಚಾರ - CineNewsKannada.com

ರಾಜ್ಯದ ಉದ್ದಗಲಕ್ಕೂ “ಕಂಗ್ರಾಜುಲೇಷನ್ ಬ್ರದರ್ ” ಚಿತ್ರದ ಪ್ರಚಾರ ವಾಹನ ಸಂಚಾರ

ಪ್ರಶಾಂತ್ ಕಲ್ಲೂರ್ ನಿರ್ಮಿಸಿರುವ, ಪ್ರತಾಪ್ ಗಂಧರ್ವ ನಿರ್ದೇಶನವಿರುವ ಚಿತ್ರಕ್ಕೆ ನಿರ್ದೇಶಕ ಹರಿ ಸಂತೋಷ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಯುವ ನಟ ರಕ್ಷಿತ್ ನಾಗ್ ಹಾಗೂ ಸಂಜನ್ ದಾಸ್ ,ಅನೂಷಾ ನಾಯಕ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ಹರೀಶ್ ರೆಡ್ಡಿ ಸಹ ನಿರ್ಮಾಣವಿರುವ ಚಿತ್ರ ನವೆಂಬರ್ 21 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಚಿತ್ರತಂಡ ವಿನೂತನ ಪ್ರಚಾರಕ್ಕೆ ಮುಂದಾಗಿದೆ. ಬೀದರ್ ನಿಂದ ಚಾಮರಾಜನಗರದವರೆಗೂ ಚಿತ್ರತಂಡ ಕರ್ನಾಟಕದ ಪ್ರತಿಯೊಂದು ಜಿಲ್ಲೆಗಳಿಗೂ ಭೇಟಿ ನೀಡಿ ಜನರಿಗೆ ಚಿತ್ರದ ಬಗ್ಗೆ ಮಾಹಿತಿ ನೀಡಲಿದೆ. ಪ್ರಚಾರದ ವಾಹನ ಸಿದ್ಧವಾಗಿದೆ. ಕನ್ನಡಪರ ಹೋರಾಟಗಾರಸಾ.ರಾ‌.ಗೋವಿಂದು ಚಾಲನೆ ನೀಡಿ ಹರಸಿದ್ದಾರೆ.

ಈ ವೇಳೆ ಮಾತನಾಡಿದ ಸಾ ರಾ ಗೋವಿಂದು
,ಮೊದಲಿನಿಂದಲೂ ಸಂತು ಒಪ್ಪಿಕೊಂಡ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಚಿತ್ರದ ಎಲ್ಲಾ ಕಲಾವಿದರು ಭಾಗವಹಿಸಿರುವುದು ನೋಡಿ ಖುಷಿಯಾಗಿದೆ. ಚಿತ್ರ ಯಶಸ್ವಿಯಾಗಲಿ ಎಂದು ಸಾ ಹಾರೈಸಿದರು.

ಚಿತ್ರದ ಕಥೆಗಾರ ಹಾಗೂ ಕ್ರಿಯೇಟಿವ್ ಹೆಡ್ ಹರಿ ಸಂತೋಷ್ ಮಾತನಾಡಿ ನವೆಂಬರ್ 21 ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಪೂರ್ವಭಾವಿಯಾಗಿ ಕಲಾವಿದರು ಕರ್ನಾಟಕದಾದ್ಯಂತ ಪ್ರವಾಸ ಮಾಡಲಿದ್ದಾರೆ. ಎಲ್ಲಾ ಜಿಲ್ಲೆಗಳಿಗೂ ತೆರಳಿ ಅಲ್ಲಿನ ಜನರನ್ನು, ವಿಶೇಷವಾಗಿ ಯುವ ಸಮುದಾಯವನ್ನು ಭೇಟಿ ಮಾಡಿ ಮಾತನಾಡಲಿದ್ದಾರೆ‌. . ಮುನೀಂದ್ರ ಚಿತ್ರ ವಿತರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು

ನಿರ್ಮಾಪಕ‌ ಪ್ರಶಾಂತ್ ಕಲ್ಲೂರ್, ಸಹ ನಿರ್ಮಾಪಕ‌ ಹರೀಶ್ ರೆಡ್ಡಿ, ಕಾರ್ಯಕಾರಿ ನಿರ್ಮಾಪಕ ಶ್ರೀಕಾಂತ್ ಕಶ್ಯಪ್, ನಾಯಕ ರಕ್ಷಿತ್ ನಾಗ್, ನಾಯಕಿಯರಾದ ಸಂಜನದಾಸ್, ಅನೂಷ, ಕಲಾವಿದ ರಕ್ಷಿತ್ ಕಾಪು, ಸುದರ್ಶನ್, ಚೇತನ್ ದುರ್ಗ ಮುಂತಾದವರು ಹಾಜರಿದ್ದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin