Review: "I Am God" is a story of love, passion, revenge and revenge.

Review: ಪ್ರೀತಿ, ಮೋಹ, ಸೇಡು, ಪ್ರತೀಕಾರದ ಕಥನ “ಐ ಆಯ್ ಗಾಡ್” - CineNewsKannada.com

Review: ಪ್ರೀತಿ, ಮೋಹ, ಸೇಡು, ಪ್ರತೀಕಾರದ ಕಥನ “ಐ ಆಯ್ ಗಾಡ್”

ಚಿತ್ರ: ಐ ಆಯ್ ಗಾಡ್
ನಿರ್ದೇಶನ: ರವಿಗೌಡ, ವಿಜೇತಾ ಪಾರೇಖ್, ರವಿಶಂಕರ್, ಅವಿನಾಶ್, ಅರುಣಾ ಬಾಲರಾಜ್, ಎಂ.ಎಸ್ ಉಮೇಶ್, ವಿಜಯ್ ಚೆಂಡೂರ್,ಮತ್ತಿತರರು
ರೇಟಿಂಗ್: *** 3.5/5

“ಹೆಣ್ಣನ್ನು ರಕ್ಷಿಸಿ, ಪೂಜಿಸಿ ಆರಾಧಿಸಿ..” ಎನ್ನುವ ಸಾಲಿನ ಮರುಕ್ಷಣವೇ ಕಾಲೇಜಿನ ಕೊಠಡಿಯಲ್ಲಿ ತುಟಿಗೆ ತುಟಿಗೆ ಲಾಕ್ ಮಾಡಿಕೊಂಡ ಜೋಡಿ, ಆ ನಂತರ ಕಾಲೇಜಿನ ಆವರಣದಿಂದ ಹಿಡಿದು, ಪಾರ್ಕ್, ಹಾದಿ ಬೀದಿ, ಎಲ್ಲೆಲ್ಲೆಂದರಲ್ಲೇ, ಪ್ರೀತಿ, ಮೋಹ, ವ್ಯಾಮೋಹ. ಅವರಿಬ್ಬರ ಪಾಲಿಗೆ ಅದು ಇಷ್ಟಪಟ್ಟ ಹುಡುಗ, ಹುಡುಗಿ ಮಾಡುವ ಕೆಲಸ ಎಂದು ಭಾವಿಸಿದರು, ಆದರೆ ಕಾಲೇಜಿನ ಸಹಪಾಠಿಗಳು, ಗುರುಗಳು, ನೋಡುಗರಿಗೆ ಮುಜುಗರದ ಸಂಗತಿ..

ಇಷ್ಟೆಲ್ಲಾ ಇದ್ದಮೇಲೆ ಹೊಡೆದಾಟ ಬಡಿದಾಟವೂ ಇರಬೇಕು. ಇಲ್ಲದಿದ್ದರೆ ಹೆಂಗೆ.. ಇದರ ಜೊತೆಗೆ ಸರಣಿ ಕೊಲೆ, ಎಲ್ಲವೂ ಸುಂದರ ಯುವತಿಯರೇ ಅದು ಒಂದೇ ಮಾದರಿಯಲ್ಲಿ. ಅದನ್ನು ಬೆನ್ನುಹತ್ತುವ ಪೊಲೀಸ್ ಅಧಿಕಾರಿಗಳೀಗೆ ಒಂದಷ್ಟು ಸುಳಿವು. ಅದರ ಜಾಡು ಹಿಡಿದು ಹೊರಟಾಗ ಮತ್ತಷ್ಟು ರೋಚಕ ಕಹಾನಿ. ಇದರ ಜೊತೆಗೆ ಸೇಡು, ಪ್ರತೀಕಾರ.

ಏನದು ಎನ್ನುವುದನ್ನು ತಿಳಿಯಬೇಕಾದರೆ ಈ ವಾರ ತೆರೆಗೆ ಬಂದಿರುವ “ ಐ ಆಮ್ ಗಾಡ್” ಚಿತ್ರ ನೋಡಬೇಕು, ನಿರ್ದೇಶಕ ರವಿಗೌಡ, ಹೇಳಿ ಕೇಳಿ ನಟ ನಿರ್ದೇಶಕ ಉಪೇಂದ್ರ ಅವರ ಶಿಷ್ಯ, ಅವರ ಜೊತೆಯಲ್ಲಿ ಕೆಲಸ ಮಾಡಿದವರು. ಹೀಗಾಗಿ ಚಿತ್ರದುದ್ದಕ್ಕೂ ತಾವು ಏನು ಹೇಳಬೇಕೋ ಅದನ್ನು ಯಾರ ಮುಲಾಜು ಮತ್ತು ಹಂಗಿಗೆ ಒಳಗಾಗದೆ ಹೇಳಿದ್ದಾರೆ. ಚಿತ್ರದ ಪ್ರೇಮ್ ಟು ಪ್ರೇಮ್ ಇದು ನಿರ್ದೇಶಕ ಉಪೇಂದ್ರ ಚಿತ್ರ ಅನ್ನಿಸುವಷ್ಟು ಮಟ್ಟಿಗೆ ಪ್ರೇಕ್ಷಕರಿಗೆ ಕಾಡಿದರೆ ಆಶ್ಚರ್ಯ ಮತ್ತು ಅತಿಯಶೋಕ್ತಿ ಆಗಲಾರದು.

ಉಪೇಂದ್ರ ನಟನೆ ಎ,ಉಪೇಂದ್ರ ಚಿತ್ರಗಳನ್ನು ನೋಡಿದ ಹಾಗೆ ಪ್ರೇಕ್ಷಕರಿಗೆ ಅನ್ನಿಸಿದರೆ ಅದು ಸಹಜಕೂಡ. ಅಷ್ಟರ ಮಟ್ಟಿಗೆ ನಿರ್ದೇಶಕ ರವಿಗೌಡ ಚಿತ್ರದ ಸನ್ನಿವೇಶಗಳನ್ನು ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ, ಜೊತೆಗೆ ನಾಯಕನಾಗಿಯೂ ತಮ್ಮ ಕೆಲಸ ನಿ ರ್ವಹಿಸಿದ್ದಾರೆ. ಗುರುವಿನ ಹಾದಿಯಲ್ಲಿ ಸಾಗುವ ಪ್ರಯತ್ನ ಮಾಡಿದ್ದಾರೆ ರವಿಗೌಡ.

ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ದೇವ (ರವಿಗೌಡ) ಅದೇ ಕಾಲೇಜಿನ ಬಿಂಧೂ ( ವಿಜೇತ ಪಾರೇಖ್) ನಡುವೆ ಪ್ರೀತಿ ಚಿಗುರೊಡೆಯುತ್ತದೆ, ಅದು ಎಷ್ಟರ ಮಟ್ಟಿಗೆ ಅಂದರೆ ಕ್ಲಾಸ್ ರೂಮ್‍ನಲ್ಲಿ ತುಟಿಗೆ ತುಟಿ ಬೆಸದು ಜೇನು ಹೀರುವಂತೆ, ಮಹಿಳೆಯರ ಶೌಚಾಲಯವೂ ಇವರಿಗೆ ಲೆಕ್ಕವಿಲ್ಲ,ಪ್ರೀತಿಸಿದ ಹುಡುಗಿಯನ್ನು ಕಣ್ಣೆತ್ತಿ ನೋಡಿದವರಿಗೆ ಶಿಕ್ಷೆ ಕಟ್ಟಿಟ್ಟಬುತ್ತಿ. ಇಂತಹ ದೇವನ ವರ್ತನೆ, ಆಟೋಟ ಕಾಲೇಜು, ಮನೆಮಂದಿಯ ತನಕ ಬರುತ್ತದೆ. ಆ ನಂತರ ನಡೆಯುವುದೆಲ್ಲಾ ರೋಚಕ ಕಹಾನಿ, ಈ ನಡುವೆ ಸರಣಿ ಕೊಲೆಗಾರನ್ನು ಬೆನ್ನಹತ್ತುವ ಭರತ್ ( ರವಿಶಂಕರ್) ಗೆ ಒಂದಷ್ಟು ಸಂಗತಿ ತಿಳಿಯುತ್ತದೆ, ಆ ಮೇಲೆ ತಿರುಗಳ ಮೇಲೆ ತಿರುವು, ಮುಂದೇನಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು.

ಸೇಡಿಗೆ ಪ್ರತೀಕಾರ ತೀರಿಸಿಕೊಳ್ಳಲು ಕೆಲವೆಡೆ ಅನಗತ್ಯ ಅನ್ನಿಸುವ ಸನ್ನಿವೇಶಗಳು ಚಿತ್ರದಲ್ಲಿವೆ. ಅವುಗಳಿಗೆ ಕತ್ತರಿ ಪ್ರಯೋಗ ಮಾಡಿ ಚಿತ್ರಕಥಾ ನಿರೂಪಣೆಯ ವೇಗೆ ಹೆಚ್ಚಿಸಿದ್ದರೆ ಐ ಆಮ್ ಗಾಡ್ ವಿಭಿನ್ನ ಕಂಟೆಂಟು“`ಉಳ್ಳ ಚಿತ್ರವಾಗುತ್ತಿತ್ತು, ಹಾಗಂತ ಈಗಳು ಚಿತ್ರವನ್ನೂ ಅಲ್ಲಗಳೆಯುವಂತಿಲ್ಲ, ಆದರೆ ಕೆಲವು ಸನ್ನಿವೇಶಗಳಲ್ಲಿ ಹೇಳುವುದನ್ನು ಸಂಭಾಷಣೆಯಲ್ಲಿಯೇ ಹಾಡಿನಲ್ಲಿ ಹೇಳಿ ಮುಗಿಸುವ ಅವಕಾಶವಿತ್ತು. ಅದನ್ನು ಮಾಡಿದ್ದರೆ ಚಿತ್ರದ ಉದ್ದ ಇನ್ನಷ್ಟು ಟ್ರಿಮ್ ಮಾಡಬಹುದಿತ್ತು.

ಇನ್ನುಳಿದಂತೆ ನಾಯಕ, ನಿರ್ದೇಶಕ ಎರಡೂ ಜವಾಬ್ದಾರಿಯನ್ನು ರವಿಗೌಡ ಉತ್ತಮವಾಗಿ ನಿಬಾಯಿಸಿದ್ದಾರೆ. ಗುರು ಉಪೇಂದ್ರ ಅವರನ್ನು ಆರಂಭದಿಂದ ಅಂತ್ಯದವರೆಗೆ ನೆನಪು ಮಾಡಿಸಿದ್ದಾರೆ. ಇನ್ನೂ ರವಿಶಂಕರ್ ಖಡಕ್ ಲುಕ್‍ನಿಂದ ಮತ್ತೊಮ್ಮೆ ಗಮನ ಸೆಳೆದಿದ್ಧಾರೆ. ನಾಯಕಿ ವಿಜೇತಾ ಪಾರೇಖ್ ಕೂಡ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ, ಚುಂಬನ ದೃಶ್ಯಗಳಲ್ಲಿ ಮೈ ಚಳಿಬಿಟ್ಟು ನಟಿಸಿದ್ದಾರೆ.

ಅವಿನಾಶ್, ಅರುಣಾ ಬಾಲರಾಜ್, ಎಂ.ಎಸ್ ಉಮೇಶ್, ವಿಜಯ್ ಚೆಂಡೂರ್ ಮತ್ತಿತರರು ತಮಗೆ ಸಿಕ್ಕ ಪಾತ್ರಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin