`ಗಂಧದ ಗುಡಿ’ ಎಂಟ್ರಿ ಕೊಟ್ಟ ಖ್ಯಾತ ಖಳನಟ ರವಿಕಾಳೆ
ಭಾರತೀಯ ಚಿತ್ರರಂಗದ ಪ್ರಸಿದ್ಧ ಪೋಷಕ ನಟ ರವಿ ಕಾಳೆ ಶ್ರೀಗಂಧದಗುಡಿ’ ಧಾರಾವಾಹಿಯಲ್ಲಿ ಗೌರವ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ.ಶ್ರೀಗಂಧದಗುಡಿ’ಎಂಟ್ರಿ ಕೊಟ್ಟಿದ್ದು ಅವರ ಪಾತ್ರ ಕುತೂಹಲ ಕೆರಳಿಸಿದೆ.ಕಲರ್ಸ್ ಕನ್ನಡದಲ್ಲಿ ಪ್ರತಿ ರಾತ್ರಿ 8 ಕ್ಕೆ ಪ್ರಸಾರವಾಗುತ್ತಿದೆ.

ಧಾರಾವಾಹಿ ಕತೆಯು ಅತ್ಯಂತ ಕುತೂಹಲದ ಘಟ್ಟ ತಲುಪಿದೆ. ಚಂದನಾ ಹೆರಿಗೆ ಮೆನೆಯಲ್ಲಿ ಇರಲಾಗುವುದಿಲ್ಲ ಮತ್ತು ತನ್ನ ಗುರಿ ಸಾಧಿಸಲು ಬೆಂಗಳೂರಿಗೆ ಹೋಗಬೇಕೆಂದು ಹೇಳುತ್ತಾಳೆ. ಆಕೆ ಹರಿಯ ಸಹಾಯ ಕೇಳುತ್ತಾಳೆ. ಹರಿ ಆಕೆಗೆ ರಾತ್ರಿ ಹೋಗುವಂತೆ ಹೇಳುತ್ತಾನೆ ಮತ್ತು ತಾನೇ ಕರೆದುಕೊಂಡು ಹೋಗುವುದಾಗಿ ಹೇಳುತ್ತಾನೆ.
ಬೆಂಗಳೂರಿಗೆ ಹೊರಡುವ ಮಾರ್ಗದಲ್ಲಿ ಚಂದನಾ ಮಾಡಿದ ಒಂದು ತಪ್ಪಿನಿಂದ ಕುಟುಂಬಕ್ಕೆ ಆಕೆ ಮನೆ ಬಿಟ್ಟಿರುವುದು ಗೊತ್ತಾಗುತ್ತದೆ. ಇದರಿಂದ ಒಂದು ಚೇಸ್ ಆರಂಭವಾಗುತ್ತದೆ. ಚಂದನಾಳ ತಂದೆ ಮಹಾಬಲ ತನ್ನ ಸಂಪರ್ಕ ಬಳಸಿ ದಾಳಿ ಮಾಡುತ್ತಾನೆ. ತನ್ನನ್ನು ರಕ್ಷಿಸಿಕೊಳ್ಳಲು ಹರಿ ಪೊಲೀಸ್ ಠಾಣೆಗೆ ಶರಣಾಗುತ್ತಾನೆ. ಅಲ್ಲಿ ಇನ್‍ಸ್ಪೆಕ್ಟರ್ ಕಾಳೆ ಪ್ರತ್ಯಕ್ಷ ಆಗುತ್ತಾರೆ. ಕಾಳೆ ಈ ಧಾರಾವಾಹಿಯ ಕತೆಗೆ ಟರ್ನಿಂಗ್ ಪಾಯಿಂಟ್
ಕಾಳೆ ಹೇಳುವುದು ಏನೆಂದರೆ, ಹರಿಯನ್ನೂ ಚಂದನಾಳನ್ನೂ ಉಳಿಸುವ ಏಕೈಕ ಮಾರ್ಗ ಎಂದರೆ ಅವರಿಬ್ಬರೂ ಮದುವೆಯಾಗಬೇಕು. ಈ ಪರಿಸ್ಥಿತಿ ಹರಿ ತನ್ನ ಪ್ರಯೋಜನಕ್ಕೆ ಬಳಸಿಕೊಳ್ಳುತ್ತಾನೆ ಮತ್ತು ಹೇಗೆ ಅವರ ಮದುವೆ ನಡೆಯುತ್ತದೆ ಎಂಬುದು ಅತ್ಯಂತ ಆಸಕ್ತಿಕರ. ಈ ಕುತೂಹಲಕರ ರೋಮಾಂಚಕ ಎಪಿಸೋಡ್ ಗಳನ್ನು ತಪ್ಪದೇ ನೋಡಿ ಕಲರ್ಸ್ ಕನ್ನಡದಲ್ಲಿ. ವಾರದ ಏಳೂ ದಿನ ಪ್ರತಿ ರಾತ್ರಿ 8 ಕ್ಕೆಪ್ರಸಾರವಾಗಲಿದೆ.

