Actors, we are all the same... why do you discriminate?: Actor, director Vijay Kumar

ನಟರು ನಾವೆಲ್ಲಾ ಒಂದೇ … ವಿಂಗಡಣೆ ಯಾಕೆ ಮಾಡ್ತೀರಾ; ನಟ,ನಿರ್ದೇಶಕ ವಿಜಯ್ ಕುಮಾರ್ - CineNewsKannada.com

ನಟರು ನಾವೆಲ್ಲಾ ಒಂದೇ … ವಿಂಗಡಣೆ ಯಾಕೆ ಮಾಡ್ತೀರಾ; ನಟ,ನಿರ್ದೇಶಕ ವಿಜಯ್ ಕುಮಾರ್

“ಕರಾವಳಿಯ ಶೆಟ್ಟರ ಗ್ಯಾಂಗು, ಬೆಂಗಳೂರಿನಲ್ಲಿ ಮತ್ತೊಂದು , ಮಗದೊಂದು ಅಂತ ಯಾಕೆ ವಿಂಗಡಣೆ ಮಾಡ್ತೀರಾ,, ನಟರು ನಾವೆಲ್ಲಾ ಒಂದೇ.. ನಮ್ಮ ಉದ್ದೇಶ ಮತ್ತು ಗುರಿ ಕನ್ನಡ ಚಿತ್ರರಂಗವನ್ನು ಎತ್ತರಕ್ಕೆ ಕೊಂಡೊಯ್ಯಬೇಕು ಮತ್ತು ಮೆರೆಸಬೇಕು ಎನ್ನುವುದಷ್ಟೇ ನೆಮ್ಮೆಲ್ಲರ ಕನಸು….”

ಹೀಗಂತ ನೇರವಾಗಿ ಕಡ್ಡಿ ಮುರಿದಂತೆ ಹೇಳಿದರು ಸ್ಯಾಂಡಲ್‍ವುಡ್ ಸಲಗ ವಿಜಯ್ ಕುಮಾರ್. ಪಕ್ಕದಲ್ಲಿಯೇ ಇದ್ದ ನಟ, ರಾಜ್ ಬಿ ಶೆಟ್ಟಿ ಹೌದು ಎನ್ನುವ ಸಮ್ಮತಿ ನೀಡಿದರು.

ನಟ ವಿಜಯ್ ಕುಮಾರ್ ಅವರ ಬಹುನಿರೀಕ್ಷಿತ ಚಿತ್ರ “ ಲಾಂಡ್ ಲಾರ್ಡ್” ಚಿತ್ರದ ರೂಲರ್ ಟೀಸರ್ ಬಿಡುಗಡೆ ಮಾಡಿದ ಬಳಿಕ ಪತ್ರಕರ್ತರಿಂದ ಎದುರಾದ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ,,.

ಎದುರಿಗೆ ಖಳನಟ ಅಬ್ಬರಿಸುತ್ತಿದ್ದರೆ ಕೆಲ ನಟರಿಗೆ ಆಗೋಲ್ಲ.. ಆದರೆ ನಾನು ಹಾಗಲ್ಲ, ಎದುರಿಗೆ ಇರುವ ಖಳನಟ ಅಬ್ಬರಿಸಿದರೆ ನಾಯಕನಿಗೆ ಮತ್ತಷ್ಟು ಶಕ್ತಿ ಮತ್ತು ಚಿತ್ರಮಂದಿರದಲ್ಲಿ ವಿಶಲ್ ಬೀಳೋದು.. ಲಾಂಡ್ ಲಾರ್ಡ್ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ನಾನಾಗಲಿ, ರಾಜ್ ಶೆಟ್ಟಿ ಆಗಲಿ, ಹಿರೋ ವೈಭವೀಕರಣಕ್ಕಿಂತ ಹೆಚ್ಚಾಗಿ ಪಾತ್ರಕ್ಕೆ ಹೆಚ್ಚು ಒತ್ತು ಮತ್ತು ಮಹತ್ವ ನೀಡಿದವರು. ಹೀಗಾಗಿಯೇ ನಮ್ಮ ಚಿತ್ರದಲ್ಲಿ ವಿಜೃಂಭಣೆಗಿಂತ ಮಿಗಿಲಾಗಿ ಪಾತ್ರಗಳ ಪೋಷಣೆ ಹೆಚ್ಚಿರುತ್ತದೆ ಎಂದರು.

ಎರಡು ಟಮೋಟೋ, ಮೊಟ್ಟೆ ಇಟ್ಟುಕೊಂಡು ಬಂದವರು

ಇಪ್ಪತ್ತು ವರ್ಷಗಳ ಹಿಂದೆ “ನನ್ತಾವ ಇರೋದು ಎರಡೇ ಎರಡು ಟೊಮೆಟೊ, ಹದಿನೈದೇ ರೂಪಾಯಿ ಕಾಣ್ಣಣ್ಣ” ಅಂತ ಬಂದೆ. ರಾಜ್ ಬಿ ಶೆಟ್ಟಿ ಒಂದು ಮೊಟ್ಟೆ ಇಟ್ಟುಕೊಂಡು ಬಂದವರು. ಆಗ ನಮ್ಮನ್ನು ಎಷ್ಟು ಜನ ಆಡಿಕೊಂಡಿದ್ದಾರೆ. ಕೊನೆಗೆ ನಾನೇ “ಸರ್ವೈವರ್”, ಅವರೆ “ರೂಲರ್” ಆಗಿದ್ದೀವಿ. ಆಡಿಕೊಂಡವರಿಗೆಲ್ಲಾ ತುಂಬು ಹೃದಯದ ಧನ್ಯವಾದ.

ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬ ಕಲಾವಿದರು ಉತ್ತಮವಾಗಿ ನಟಿಸಿದ್ದಾರೆ. ಜಡೇಶ್ ಅವರ ಕಥೆ ಕೇಳಿ ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಚೆನ್ನಾಗಿದೆ ಎಂದರು.

ಬೆಣ್ಣೆ- ಗುಲ್ಕನ್ ಇದ್ದಂತೆ

ನಾನು ಮತ್ತು ರಾಜ್ ಬಿ ಶೆಟ್ಟಿ ಅವರು ಒಂದು ರೀತಿ ಬೆಣ್ಣ ಮತ್ತು ಗಲ್ಕನ್ ಇದ್ದಂತೆ, ಒಮ್ಮೊಮ್ಮೆ ನಾನ ಬೆಣ್ಣ ಆದರೆ ಅವರು ಗುಲ್ಕನ್, ಮತ್ತೊಮ್ಮೆ ನಾನು ಗುಲ್ಕನ್ ಆದರೆ ಅವರು ಬೆಣ್ಣೆ,, ಈ ಕಾರಣಕ್ಕಾಗಿಯೇ ಲಾಂಡ್‍ಲಾರ್ಡ್ ಚಿತ್ರದಲ್ಲಿ ಇಬ್ಬರ ಪಾತ್ರವೂ ಚೆನ್ನಾಗಿ ಮೂಡಿ ಬಂದಿದೆ.

ನಾವಿಬ್ಬರೂ ನಿರ್ದೇಶಕರಾಗಿದ್ದರೂ ಮತ್ತೊಬ್ಬ ನಿರ್ದೇಶಕನ ಕೈಕೆಳಗೆ ಏನೂ ಗೊತ್ತಿಲ್ಲದವರಂತೆ ನಟರಾಗಿ ಕೆಲಸ ಮಾಡಿದ್ದೇವೆ. ಲಾಂಡ್ ಲಾರ್ಡ್ ನಲ್ಲಿ ನಟಿಸುವಾಗ ಸಾಕಷ್ಟು ಸಿದ್ದತೆ ಮಾಡಿಕೊಂಡಿದ್ದೆವು, ರಾಜ್ ಬಿ ಶೆಟ್ಟಿ ಮತ್ತು ನಾನು ನಾಯಕ, ಖಳನಾಯಕನಾಗಿ ಕಾಣಿಸಿಕೊಂಡಿದ್ದರೂ ಪಾತ್ರಕ್ಕೆ ಮುನ್ನ ತಯಾರಿ ಮಾಡಿಕೊಳ್ಳುತ್ತಿದ್ದೆವು. ಸನ್ನಿವೇಶ ಮುಗಿದ ನಂತರ ಎಂಜಾಯ್ ಮಾಡುತ್ತಿದ್ದೆವು ಎಂದರು

ಜನವರಿ 23ಕ್ಕೆ ಲಾಂಡ್ ಲಾರ್ಡ್ ತೆರೆಗೆ

ಸಾಂಡಲ್‍ವುಲ್ ಸಲಗ ವಿಜಯ್ ಕುಮಾರ್ ಚಿತ್ರ ಜೀವನದಲ್ಲಿ ವಿಭಿನ್ನ ಪಾತ್ರವೆಂದೇ ಹೇಳಲಾದ “ಲಾಂಡ್ ಲಾರ್ಡ್” ಚಿತ್ರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಜನವರಿ 23ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ನಟಿ ರಚಿತಾ ರಾಮ್, ಪುತ್ರಿ ರಿತನ್ಯ ಸೇರಿದಂತೆ ಹಿರಿ ಕಿರಿಯ ಕಲಾವಿದರ ದಂಡೇ ಇದೆ.

ಚಿತ್ರ ಬಿಡುಗಡೆಗೆ ಮುನ್ನೆ ಟ್ರೈಲರ್ ಬಿಡುಗಡೆ ,ಪುತ್ರಿ ಕಾಣಿಸಿಕೊಂಡಿರುವ ಹಾಡು ಬಿಡುಡಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಇರಲಿವೆ. ನಿರ್ದೇಶಕ ಜಡೇಶ್ ಹಂಪಿ ಒಳ್ಳೆಯ ಕಥೆ ಮಾಡಿದ್ದಾರೆ. ಚಿತ್ರ ಗೆಲ್ಲಬೇಕು ಎಂದರು

ನಿರ್ಮಾಪಕರಿಗೆ ಸಲಹೆ:

ನಿರ್ದೇಶಕ ಜಡೇಶ್ ಹಂಪಿ ಅವರ ಉತ್ತಮ ರೈಟರ್ ಜೊತೆಗೆ ನಿರ್ದೇಶಕ ಕೂಡ. ಅವರ ಜೊತೆ ಲಾಂಡ್ ಲಾರ್ಡ್ ನಂತರ ಇನ್ನೂ ಮೂರು ಚಿತ್ರಗಳಿಗೆ ಈಗಲೇ ಬುಕ್ ಮಾಡಿಕೊಳ್ಳಿ ಎಂದು ನಿರ್ಮಾಪಕ ಕೆ,ವಿ ಸತ್ಯಪ್ರಕಾಶ್ ಮತ್ತು ಕೆಸದ ಹೇಮಖತ್ ಗೌಡ ಅವರಿಗೆ ದುನಿಯಾ ವಿಜಯ್ ಸಲಹೆ ನೀಡಿದರು,ಅದಕ್ಕೆ ನಿರ್ಮಾಪಕರಿಬ್ಬರೂ ತಲೆದೂಗಿ ಸಮ್ಮತಿ ನೀಡಿದರು.

ಸಕ್ಸಸ್ ಆದ ತಂಡ ಮತ್ತೆ ಒಂದು ಎರಡು ಚಿತ್ರ ಮಾಡಿದರೆ ಕನ್ನಡಕ್ಕೆ ಒಳ್ಳೆಯ ಚಿತ್ರ ನೀಡಬಹುದು, ಆದರೆ ಒಂದು ಚಿತ್ರ ಆದ ನಂತರ ನಿರ್ದೇಶಕ ಒಂದು ಕಡೆ, ನಿರ್ಮಾಪಕ, ನಾಯಕ, ಕಲಾವಿದರು ಒಂದೊಂದು ಕಡೆ ಹೋದರೆ ಒಳ್ಳೆಯ ತಂಡ ಕಟ್ಟಲು ಆಗುವುದಿಲ್ಲ ಹೀಗಾಗಿ ನಿರ್ದೇಶಕರನ್ನು ಬಿಡಬೇಡಿ ಎಂದು ಸಲಹೆ ನೀಡಿದರು

ಮಾಮೂಲಿ ಬಳಸುವ ಪದ: ಜಡೇಶ್ ಹಂಪಿ

ಲಾಂಡ್ ಲಾರ್ಡ್ ಅನ್ನುವುದು ಮಾಮೂಲಿಯಾಗಿ ಬಳಸುವ ಪದ, ಹೀಗಾಗಿ ಚಿತ್ರಕ್ಕೆ ಅದೇ ಶೀರ್ಷಿಕೆ ಇಡಲಾಗಿದೆ. ಜಮೀನ್ದಾರು ಅಂತ ಹಿಡಬಹುದಿತ್ತು ಆದರೆ ಅಷ್ಟು ಸೂಕ್ತ ಅನ್ನಿಸುತ್ತಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು ನಿರ್ದೇಶಕ ಜಡೇಶ್ ಹಂಪಿ.
ಶೋಷಣೆ ಮಾಡುವುವರು ಮತ್ತು ಶೋಷಣೆಗೆ ಒಳಗಾದವರ ಕತೆ, ಜೊತೆಗೆ ಇದು ರೈತರ ಕಥೆಯೂ ಕೂಡ, ಎಲ್ಲ ಕಲಾವಿದರು ಮತ್ತು ನಿರ್ಮಾಪಕರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ ಜನವರಿ 23ಕ್ಕೆ ಬಿಡುಗಡೆ ಮಾಡಲಾಗುತ್ತಿದೆ ಎಂದರು

ಸಹಕಾರವಿರಲಿ ಎಂದ ನಿರ್ಮಾಪಕ

ಸಾರಥಿ ಚಿತ್ರ ನಿರ್ಮಾಣ ಮಾಡಿದ 14 ವರ್ಷದ ನಂತರ ಲಾಂಡ್ ಲಾಂಡ್ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಒಳ್ಳೆಯ ಕತೆ ಸಿಕ್ಕಿರಲಿಲ್ಲ. ನಿರ್ದೇಶಕ ಜಡೇಶ್ ಹೇಳಿದ ಕಥೆ ಇಷ್ಟವಾಯಿತು ನಿರ್ಮಾಣ ಮಾಡಿದ್ದೇವೆ ಮುಂದೆಯೂ ಒಳ್ಳೆಯ ಚಿತ್ರ ನೀಡುವ ಉದ್ದೇಶವಿದೆ ಎಂದು ನಿರ್ಮಾಪಕ ಕೆ,ಎಸ್ ಹೇಮಂತ್ ಗೌಡ.

ನಟಿ ಭಾವನಾ ರಾವ್ ಮಾತನಾಡಿ ಚಿತ್ರದಲ್ಲಿ ನಟ ರಾಜ್ ಬಿ ಶೆಟ್ಟಿ ಅವರ ಜೋಡಿಯಾಗಿ ಕಾಣಿಸಿಕೊಂಡಿದ್ದೇನೆ. ಅದು ಹೆಂಡತಿನಾ, ಲವ್ವರ್ ನಾ ಅಥವಾ ಮತ್ತೇನು ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು, ಪಾತ್ರ ಅಚ್ಚುಕಟ್ಟಾಗಿ ಮತ್ತು ನೀಟಾಗಿ ಬಂದಿದೆ, ಚಿತ್ರ ನೋಡಿದ ಎಲ್ಲರೂ ಖುಷಿ ಪಡ್ತಾರೆ ಎಂದು ತಮ್ಮ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿಸಿದರು

ಚಿತ್ರಕ್ಕೆ ಸಂಭಾಷಣೆ ಬರೆದಿರುವ ಮಾಸ್ತಿ, ಕಲಾವಿದರಾದ ಮಿತ್ರ, ಶಿಶಿರ್, ಮಹಂತೇಶ್, ರಾಕೇಶ್ ಸೇರಿದಂತೆ ಹಲವರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin