If I had hair on my head, I wouldn't have become an actor - Actor Raj B Shetty

ತಲೆಯಲ್ಲಿ ಕೂದಲು ಇದ್ದಿದ್ದರೆ ನಟನಾಗುತ್ತಿರಲಿಲ್ಲ- ನಟ ರಾಜ್ ಬಿ ಶೆಟ್ಟಿ - CineNewsKannada.com

ತಲೆಯಲ್ಲಿ ಕೂದಲು ಇದ್ದಿದ್ದರೆ ನಟನಾಗುತ್ತಿರಲಿಲ್ಲ- ನಟ ರಾಜ್ ಬಿ ಶೆಟ್ಟಿ

“ತಲೆಯಲ್ಲಿ ಕೂದಲು ಇಲ್ಲದಿರುವುದು ವೀಕ್ನೆಸ್ ಅಲ್ಲ. ಅದು ನನ್ನ ಸ್ಟ್ರೆಂಥ್. ಹಾಗಾಗಿಯೇ ಇಲ್ಲಿ ಇಲ್ಲಿ ಕುಳಿತಿದ್ದೇನೆ. ಕೂದಲು ಇದ್ದಿದ್ದರೆ ನಾನು “ ಒಂದು ಮೊಟ್ಟೆಯ ಕಥೆ” ಚಿತ್ರ ಮಾಡಲು ಆಗುತ್ತಿರಲಿಲ್ಲ ಜೊತೆಗೆ ನಾಯಕ ಆಗುತ್ತಿರಲಿಲ್ಲ..,”

ಹೀಗಂತ ನೇರವಾಗಿ ಮನಸ್ಸಿನಲ್ಲಿದ್ದನ್ನು ಎಲ್ಲೆರೆದುರು ಬಿಚ್ಚಿಟ್ಟರು , ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ,,

ಸಾರಥಿ ಸತ್ಯ ಪ್ರಕಾಶ್ , ಕೆಎಸ್ ಹೇಮಂತ್ ಗೌಡ ನಿರ್ಮಾಣದಲ್ಲಿ ಮೂಡಿ ಬಂದಿರುವ ಜಡೇಶ್ ಹಂಪಿ ನಿರ್ದೇಶನದಲ್ಲಿ ದುನಿಯಾ ವಿಜಯ್ ಮತ್ತು ರಚಿತಾ ರಾಮ್ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿರುವ “ಲಾಂಡ್ ಲಾರ್ಡ್ “ ಚಿತ್ರದಲ್ಲಿ ರೂಲರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಜ್ ಬಿ ಶೆಟ್ಟಿ ಅವರು ಟೀಸರ್ ಬಿಡುಗಡೆ ವೇಳೆ ಮಾತು ಹಂಚಿಕೊಂಡಿದ್ದು ಹೀಗೆ..

ಲಾಂಡ್ ಲಾರ್ಡ್ ಚಿತ್ರದಲ್ಲಿ ನಿರ್ದೇಶಕ ಜಡೇಶ್ ಹಂಪಿ ವಿಗ್ ಹಾಕಿಕೊಳ್ಳಬೇಕು ಅಂದಾಗ ಬೇರೆ ನಟರನ್ನು ನೋಡಿಕೊಳ್ಳಿ, ನಾನು ನಟಿಸಿದರೆ ವಿಗ್ ಒಂದು ಕಡೆ ನಾನು ಒಂದು ಕಡೆ ನಟಿಸಬೇಕಾಗುತ್ತದೆ ಎಂದು ಹೇಳಿದ್ರು, ಆದರೆ ಅವರು ಹಠ ಹಿಡಿದು ನೀವೇ ಪಾತ್ರ ಮಾಡಬೇಕು ಎಂದಾಗ ಒಪ್ಪಿಕೊಂಡೆ, ಜೊತೆಗೆ ವಿಗ್ ಗೆ ಸಾಕಷ್ಟು ಖರ್ಚು ಮಾಡಿದ್ದಾರೆ ಕೂಡ. ಒಂದು ವೇಳೆ ನನಗೆ ಕೂದಲು ಇದ್ದಿದ್ದರೆ ನಾನು ನಾಯಕ ಆಗ್ತಾ ಇರಲಿಲ್ಲ. ಕೂದಲು ಇಲ್ಲದಿದ್ದುದರಿಂದಲೇ “ಒಂದು ಮೊಟ್ಟೆಯ ಕಥೆ” ಚಿತ್ರ ಮಾಡಲು ಸಾಧ್ಯವಾಯಿತು.

ನಿರ್ದೇಶಕರ ಕನಸಿಗೆ ಸಾಥ್:

ನಿರ್ದೇಶಕರು ಮನಸ್ಸಿನಲ್ಲಿ ಪಾತ್ರವಿಟ್ಟುಕೊಂಡಾಗ ಅವರು ಯಾವ ರೀತಿ ಊಹೆ ಮಾಡಿಕೊಂಡಿದ್ದಾರೆ, ಅದಕ್ಕೆ ನಾವು ನ್ಯಾಯ ಒದಗಿಸುವುದು ನಮ್ಮ ಉದ್ದೇಶ. ನಿರ್ದೇಶಕರಾಗಿದ್ದರೂ ಮೂಗು ತೂರಿಸುವ ಕೆಲಸ ಮಾಡಿಲ್ಲ, ಸನ್ನಿವೇಶ, ಸಂಭಾಷಣೆಯಲ್ಲಿ ಗೊಂದಲ ಅನ್ನಿಸಿದಾಗ ನಿರ್ದೇಶಕ ಜಡೇಶ್ ಹಂಪಿ ಅವರ ಬಳಿ ಕೇಳಿದ್ದೇವೆ. ಅದಕ್ಕೆ ಅವರು ಸಮಂಜಸವಾಗಿಯೇ ಉತ್ತರ ನೀಡಿದ್ದಾರೆ ಎಂದು ಖಳನಟನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ರಾಜ್ ಬಿ,ಶೆಟ್ಟಿ.

ನಿರ್ದೇಶಕ ಜಡೇಶ್ ಹಂಪಿ ಕಥೆ ಹೇಳಿ, ಎಮೋಷನಲ್ ಆಗಿ ಬ್ಲಾಕ್ ಮೇಲ್ ಮಾಡಿದರು, ಹೀಗಾಗಿ ಕಥೆಯೂ ಇಷ್ಟವಾಗಿದ್ದರಿಂದ ನಟಿಸಲು ಒಪ್ಪಿಕೊಂಡೆ, ಚಿತ್ರದಲ್ಲಿ ನಟಿಸಲು ನಿರ್ದೇಶಕರೇ ಕಾರಣ ಅವರಿಗೆ ಒಳ್ಳೆಯದಾಗಬೇಕು ಎಂದು ಮನದುಂಬಿ ಹಾರೈಸಿದರು

ಶೋಷಣೆ ಮಾಡುವ ಪಾತ್ರ:

ಲಾಂಡ್ ಲಾರ್ಡ್ ಚಿತ್ರದಲ್ಲಿ ಒಂದು ರೀತಿ ಶೋಷಣೆ ಮಾಡುವ ಪಾತ್ರ ನನ್ನದು, ನೀವು ಈಗ ಅಕ್ಷರ ಕಲಿತಿರಬಹುದು ಆದರೆ ತಂದೆ, ತಾತನ ಕಾಲದಿಂದ ದಬ್ಬಾಳಿಕೆ ಮಾಡಿಕೊಂಡು ಬಂದವರು ಎನ್ನುವುದನ್ನು ಬಿಂಬಿಸುವ ಪಾತ್ರ ನನ್ನದು. ಮಲೆಯಾಳಂನಲ್ಲಿ ಖಳನಟನಾಗಿ ಕಾಣಿಸಿಕೊಂಡಿದೆ. ಕನ್ನಡದಲ್ಲಿ ಚಿತ್ರಗಳಿಗೆ ಒಳ್ಳೆಯದಾಗುತ್ತದೆ ಅಂದರೆ , ಪಾತ್ರ ಹಿಡಿಸಿದರೆ ಮಾಡಲು ಅಭ್ಯಂತರವಿಲ್ಲ ಎಂದರು.

ದುನಿಯಾ ವಿಜಯ್ ಅವರು ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಳುವ ಉದ್ದೇಶ ಹೊಂದಿದವರು, ನಾನು ಮಂಗಳೂರಿನಲ್ಲಿ ಇದ್ದವನು ಸಿನಿಮಾದಲ್ಲಿ ನಟಿಸಬೇಕು ಎನ್ನುವ ಯಾವುದೇ ಆಸೆ ಇರಲಿಲ್ಲ..ಆದರೆ ಇದ್ದೇಶ ಒಂದೇ ಸಿನಿಮಾದಲ್ಲಿ ಇದುವಗೂ ಯಾರೂ ಮಾಡಲು ಆಗದ ಸಿನಿಮಾ ಮಾಡಬೇಕು ಎನ್ನುವುದು, ಪಾತ್ರದಲ್ಲಿ ನಟಿಸುವ ಮುನ್ನ ನಾವಿಬ್ಬರೂ ಚರ್ಚೆ ನಡೆಸುತ್ತಿದ್ದೆವು ಎಂದು ಮಾಹಿತಿ ಹಂಚಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin