Vrusshabha Film Review:: ಅಪ್ಪ- ಮಗನ ಪುನರ್ ಜನ್ಮದ ಸೇಡಿನ ಕುತೂಲಕಾರಿ ಕಥನ ವೃಷಭ
ಚಿತ್ರ: ವೃಷಭ (ಮಲೆಯಾಳಂ)
ನಿರ್ದೇಶನ : ನಂದಕಿಶೋರ್
ತಾರಾಗಣ: ಮೋಹನ್ ಲಾಲ್, ರಾಗಿಣಿ, ಸಮರ್ಜಿತ್ ಲಂಕೇಶ್,ನಯನ್ ಸಾರಿಕಾ, ಗರುಡಾ ರಾಮ್,ಪಾವನಿ ಗೌಡ, ಕಿಶೋರ್ ಕುಮಾರ್, ಭಾಸ್ಕರ್, ಅಯ್ಯಪ್ಪ ಶರ್ಮಾ, ನೇಹಾ ಸಕ್ಸೇನಾ, ಮೊಹಮ್ಮದ್ ಆಲಿ ಮತ್ತಿತರರು
ರೇಟಿಂಗ್ : *** 3/5
ಪುನರ್ ಜನ್ಮದ ಕಥೆಗೆ ಅಪ್ಪ-ಮಗನ ಬಾಂಧವ್ಯ, ಪ್ರೀತಿ,ಮಮತೆ,ವಾತ್ಸಲ್ಯದ ಜೊತೆಗೆ ಸೇಡಿನ ಕುತೂಹಲಕಾರಿ ಘಟನೆಯನ್ನು ಹದಗೊಳಿಸಿ ತೆರೆಗೆ ತಂದಿರುವ ಚಿತ್ರ ವೃಷಭ.
ಮಲೆಯಾಳಂ ಭಾಷೆಯಲ್ಲಿ ಮೂಡಿಬಂದಿರುವ ಚಿತ್ರವನ್ನು ಕನ್ನಡದ ನಿರ್ದೇಶಕ ನಂದಕಿಶೋರ್ ಆಕ್ಷನ್ ಕಟ್ ಹೇಳಿದ್ದಾರೆ. ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಹಾಗು ಒಂದಿಬ್ಬರು ಪ್ರಮುಖ ಕಲಾವಿದರನ್ನು ಹೊರತು ಪಡಿಸಿದರೆ ಬಹುತೇಕ ಕನ್ನಡದ ಕಲಾವಿದರೇ ಇರುವ ಸಿನಿಮಾ. ಹೀಗಾಗಿ ಮಲೆಯಾಳಂನಲ್ಲಿ ಮೂಡಿಬಂದಿರುವ ಕನ್ನಡದ ಸಿನಿಮಾ ಎಂದರೆ ಅಡ್ಡಿಯಾಗಲಾರದು.
ಒಂದು ಮಹಾರಾಜ ಮತ್ತು ಪ್ರಸ್ತುತ ಸನ್ನಿವೇಶದ ಎರಡು ಕಾಲಘಟ್ಟವನ್ನು ಸನ್ನಿವೇಶಕ್ಕೆ ತಕ್ಕಂತೆ ನಿರ್ದೇಶಕ ನಂದಕಿಶೋರ್ ತೆರೆಗೆ ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ಕನ್ನಡದ ಬಾವುಟವನ್ನು ಪರಭಾಷೆಯಲ್ಲಿಯೂ ಹಾರಿಸಿದ್ದಾರೆ. ಜೊತೆಗೆ ಕನ್ನಡದ ಯುವ ನಟ ಸಮರ್ಜಿತ್ ಲಂಕೇಶ್ ಚಿತ್ರರಂಗದಲ್ಲಿ ಮತ್ತೊಬ್ಬ ಆಕ್ಷನ್ ಹಿರೋ ಆಗುವ ಎಲ್ಲಾ ಲಕ್ಷಣ ತೋರಿಸಿದ್ದಾರೆ
ರಾಜ ವಿಜಯೇಂದ್ರ ವೃಷಭ ( ಮೋಹನ್ ಲಾಲ್) ತನ್ನ ಸಂಸ್ಥಾನದಲ್ಲಿ ಜನರನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಂಡವ, ಸ್ಪಟಿಕ ಲಿಂಗಕ್ಕೆ ಆಸೆ ಬಂದ ದುಷ್ಟನ್ನು ಸಂಹಾರ ಮಾಡುವ ವೇಳೆ ಅಚಾನಕ್ ಆಗಿ ಮಗುವೊಂದು ಸಾವನ್ನಪ್ಪಿ ಬಿಡುತ್ತದೆ. ಆ ತಾಯಿ ರಾಜನಿಗೆ ಶಾಪ ಹಾಕಿ ಬಿಡುತ್ತಾಳೆ, ಇತ್ತ ರಾಣಿ ತ್ರಿಲೋಚನಾ ದೇವಿ ( ರಾಗಿಣಿ ದ್ವಿವೇದಿ) ಗಂಡು ಮಗು ಹಯಗ್ರೀವ (ಸಮರ್ಜಿತ್ ಲಂಕೇಶ್)ಗೆ ಜನ್ಮ ನೀಡುತ್ತಾಳೆ. ಮಗು ಕಳೆದುಕೊಂಡ ತಾಯಿಯ ಶಾಪ ರಾಜ ವಿಜಯೇಂದ್ರ ವೃಷಭನನ್ನು ಬಿಟ್ಟುಬಿಡದೆ ಕಾಡುತ್ತದೆ. ಈ ನಡುವೆ ಮಗು ಇದ್ದಕ್ಕಿದ್ದಂತೆ ನೀರಿನಲ್ಲಿ ಬಿದ್ದು ಹೋಗುತ್ತದೆ.
ಮತ್ತೊಂದೆಡೆ ಮಗ ತೇಜ್ (ಸಮರ್ಜಿತ್ ಲಂಕೇಶ್) ಉದ್ಯಮಿ ಆದಿತ್ಯ ವರ್ಮಾ ( ಮೋಹನ್ ಲಾಲ್) ಪ್ರೀತಿಯಿಂದ ಸಾಕಿದವ. ಈ ನಡುವೆ ದಾಮಿನಿ- (ನಯನ್ ಸಾರಿಕಾ) ಮೇಲೆ ಪ್ರೀತಿ ಚಿಗುರೊಡೆಯುತ್ತದೆ ಅದನ್ನು ಹೇಳಿಕೊಂಡು ಮನೆಗೆ ಕರೆದುಕೊಂಡು ಬರುವಷ್ಟರಲ್ಲಿ ಆಕೆ ಕೋಪಗೊಳುತ್ತಾಳೆ ಈ ನಡುವೆ ಪೂರ್ವಜನ್ಮದ ನಾಡಿಗೆ ಬಂದಾಗ ಅಲ್ಲಿ ತಾಯಿಯ ದರ್ಶನವಾಗುತ್ತದೆ. ಅಲ್ಲಿನ ಕಥೆ ಮತ್ತೊಂದು ರೋಚಕ ಪಡೆಯುತ್ತದೆ. ಪ್ರೀತಿಯಿಂದ ಸಾಕಿದ ಅಪ್ಪನಿಗೆ ಮಗ ಚಾಕು ಹಾಕಿ ಬಿಡ್ತಾನೆ.ಅದು ಯಾಕೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು.
ಮೋಹನ್ ಲಾಲ್ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಸಮರ್ಜಿತ್ ಲಂಕೇಶ್ ಎರಡು ಪಾತ್ರಗಳಲ್ಲಿ ಮಿಂಚಿದ್ದಾರೆ.ಅದರಲ್ಲಿಯೂ ಆಕ್ಷನ್ ಸನ್ನಿವೇಶದಲ್ಲಿ ಗಮನ ಸೆಳೆದಿದ್ದಾರೆ. ಬಾಲಿವುಡ್ ನಟ ರೀತಿ ಕಾಣುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಉತ್ತಮ ನಟನಾಗುವ ಭರವಸೆ ಮೂಡಿಸಿದ್ದಾರೆ.
ನಟಿ ರಾಗಿಣಿ ಮಹಾರಾಣಿ ತ್ರಿಲೋಚನಾದೇವಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿಕ್ಕ ಪಾತ್ರವಾದರೂ ಭರತ್, ಕಿಶೋರ್, ಪಾವನಿ ಗೌಡ ನ್ಯಾಯ ಒದಗಿಸಿದ್ದಾರೆ. ಕನ್ನಡದ ಕಲಾವಿದರು ಪರಭಾಷೆಯಲ್ಲಿಯೂ ತಮ್ಮ ಸಾಮರ್ಥ ನಿರೂಪಿಸಿದ್ದಾರೆ. ಉಳಿದಂತೆ ನೇಹಾ ಸಕ್ಸೇನಾ, ಆಲಿ,ನಯನ್ ಸಾರಿಕಾ ಸಿಕ್ಕ ಅವಕಾಶ ನಿಬಾಯಿಸಿದ್ದಾರೆ
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

