"D" movie likely to release in February

ಫೆಬ್ರವರಿಯಲ್ಲಿ “ಡಿ” ಚಿತ್ರ ಬಿಡುಗಡೆ ಸಾಧ್ಯತೆ - CineNewsKannada.com

ಫೆಬ್ರವರಿಯಲ್ಲಿ “ಡಿ” ಚಿತ್ರ ಬಿಡುಗಡೆ ಸಾಧ್ಯತೆ

ತಿರುಮಲೇಶ್ ವಿ ನಿರ್ದೇಶನದಲ್ಲಿ ಭಾರ್ಗವಿ ಮುರಳಿ ಹಾಗೂ ರಂಗನಾಥ್ ಬಿ ನಿರ್ಮಿಸಿರುವ “ಆಪರೇಶನ್ ಡಿ” ಚಿತ್ರ ಫೆಬ್ರವರಿ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಚಿತ್ರದ ಟೀಸರ್‍ಗೆ ಆಕ್ಷನ್ ಪ್ರಿನ್ಸ್ ದ್ರುವಸರ್ಜಾ,ನಿರ್ದೇಶಕ ಶ್ರೀನಿ, ನಟ ಸುದರ್ಶನ್ ರಂಗಪ್ರಸಾದ್ ಹಾಗೂ ಸಂಗೀತ ಭಟ್ ಸುದರ್ಶನ್ ತಮ್ಮ ಕಂಠದೊಂದಿಗೆ ಸಾತ್ ನೀಡಿದ್ದರು “ಆಪರೇಷನ್ ಡಿ” ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟರಿ ಕಥೆ ಆಧರಿಸಿದ ಚಿತ್ರ ಬಹುತೇಕ ರಂಗಭೂಮಿ ಕಲಾವಿದರೆ ಇದರಲ್ಲಿ ಅಭಿನಯಿಸಿದ್ದಾರೆ ಎನ್ನುವುದು ವಿಶೇಷ

ಚಿತ್ರದಲ್ಲಿ ನಾಲ್ಕು ಹಾಡುಗಳಿದೆ, ವೇದಿಕ ಕೆಂಪಗಿರಿ ತಿರುಮಲೇಶ್ ಹಾಡನ್ನು ಬರೆದಿದ್ದಾರೆ ,
ಭಗೀರ, ಡೆವಿಲ್, ಮಾರ್ಕ್ ಖ್ಯಾತಿಯ ಗಾಯಕ ಅನಿರುದ್ಧಶಾಸ್ತ್ರಿ ಅವರ ಮೊದಲ ಆಲ್ಬಮ್, ಸಿನಿಮಾದ ಮೂಲಕ ಅವರು ಒಂದೇ ಸಿನಿಮಾದಲ್ಲಿ 4 ಹಾಡನ್ನು ಹಾಡಿದ್ದಾರೆ ಇವರ ಜೊತೆ ಪೃಥ್ವಿಭಟ್ ಹಾಗೂ ವೇದಿಕ ಧ್ವನಿಗೂಡಿಸಿದ್ದಾರೆ

ವೇದಿಕ ಹಾಗೂ ಸಂತೋಷ್ ಆರ್ಮುಗಮ್ ಸಂಗೀತ ನಿರ್ದೇಶನ ಹಾಗೂ ರಾಹುಲ್ ಅರ್ಜ್ ಕಲಾ ಃಉಒ ನೀಡಿದ್ದಾರೆ , ಭಾರ್ಗವಿ ಮುರಳಿ, ರಂಗನಾಥ್ ಹಾಗೂ ಸುರೇಶ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ

ಚಿತ್ರದಲ್ಲಿ ನಟಿಸಿರುವ ರುದ್ರೇಶ್ ಬೂದನೂರು, ಸುಹಾಸ್ ಆತ್ರೇಯಸ್, ವಿನೋದ್ ದೇವ್, ಸ್ನೇಹ ಭಟ್, ಇಂಚರ ಭರತ್ ರಾಜ್, ಮಹೇಶ್ ಎಸ್ ಕಲಿ, ಶ್ರೀಧರ್, ಪೃಥ್ವಿ ಬನವಾಸಿ, ರೂಪ, ಆಶಾ, ಧನಲಕ್ಷ್ಮೀ, ಶಿವಾನಂದ್, ಸಂಚಯ ನಾಗರಾಜ್, ವೆಂಕಟಾಚಲ, ಸೂರ್ಯವಂಶಿ, ಶಿವಮಂಜು, ನಂಜಪ್ಪ ಎಸ್ ದೊಡ್ಡಮದುರೆ, ಶಿವಲಿಂಗು, ಕ್ರೇಜಿ ನಾಗರಾಜ್, ಜೂ.ನರಸಿಂಹರಾಜು ಹಾಗೂ ಮುಂತಾದವರು ನಟಿಸಿದ್ದಾರೆ

ಸಂಕಲನಕಾರ ವಿಕ್ರಮ್ ಶ್ರೀಧರ್, ಛಾಯಾಗ್ರಾಹಕ ಕಾರ್ತಿಕ್ ಪ್ರಸಾದ್, ಸಂಭಾಷಣೆ ರಾಜರವಿಶಂಕರ್, ನೃತ್ಯನಿರ್ದೇಶಕ ಜೈಹರಿಪ್ರಸಾದ್, ಕಲಾ ನಿರ್ದೇಶಕ ತರ್ಮಾಕೋಲ್ ಶ್ರೀನಿವಾಸ್ ಸೇರಿದಂತೆ ಅನೇಕ ತಂತ್ರಜ್ಞರು ಕೆಲಸವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ ಸಿನಿಮಾವು ಫೆಬ್ರವರಿ ಮೊದಲ ವಾರ ತೆರೆಗೆ ತರಲು ಸಿದ್ಧತೆ ನಡೆಯುತ್ತಿದೆ ಎಂದು ನಿರ್ದೇಶಕ ತಿರುಮಲೇಶ್ ವಿ ತಿಳಿಸಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin