“ತಿಕ್ಲು ರಾಮ” ಶೀರ್ಷಿಕೆ ,ಪೋಸ್ಟರ್ ಬಿಡುಗಡೆ: ಕುತೂಹಲ ಹೆಚ್ಚಳ
ಹೆಸರಿನಲ್ಲೆ ನಗು ತರಿಸುವ “ತಿಕ್ಲು ರಾಮ” ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಬಿಡುಗಡೆಯಾಗಿದೆ. ಶೃತಿ.ಜಿ.ಬಿ ಮತ್ತು ಕೋಮಲ ನಟರಾಜು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಮಂಜುಕವಿ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಕಾಡಿನಲ್ಲಿ ನಾನು ನಿನ್ನ ಉಸಿರು ನಿಲ್ಲಸದೆ ಹೋದರೆ ನನ್ನ ಹೆಸರು ಅಂತ ಗರ್ಜಿಸುತ್ತಾ ನಗುವ ಸುಚೇಂದ್ರ ಪ್ರಸಾದ್ ಹಿನ್ನಲೆ ಧ್ವನಿಯ ಒಂದು ನಿಮಿಷದ ಟೈಟಲ್ ಟೀಸರ್ ಗಮನ ಸೆಳೆದಿದೆ.ಡಾ.ರಾಜ್‍ಕುಮಾರ್ ಮೊಮ್ಮಗ ಷಣ್ಮುಗ ಗೋವಿಂದರಾಜ್ ಮತ್ತು ಬಡವರ ಮಕ್ಕಳು ಬೆಳೀಬೇಕು ಕಂಡ್ರಯ್ಯ ಚಿತ್ರದ ನಿರ್ಮಾಪಕ ಸಿ.ಎಸ್.ವೆಂಕಟೇಶ್ ಉಪಸ್ತಿತರಿದ್ದರು.
ತಾರಾಗಣದಲ್ಲಿ ಡಾ.ರಾಜ್‍ವೀರ್, ಸಂಗೀತ, ಮಿತ್ರ, ಭಾಗ್ಯಶ್ರೀ, ಶೃತಿ.ಬಿ, ಗೋವಿಂದೇಗೌಡ, ವಿನೋದ್ ಗೊಬ್ಬರಗಾಲ, ಸುಚೇಂದ್ರ ಪ್ರಸಾದ್, ಮಂಡ್ಯ ಸಿದ್ದು, ಪವಿತ್ರ ಅನೇಕ ಕಲಾವಿದರು ನಟಿಸುತ್ತಿದ್ದಾರೆ. ಹಿನ್ನಲೆ ಸಂಗೀತ ವಿನು ಮನಸು, ಛಾಯಾಗ್ರಹಣ ರಾಜ್ ಕಡೂರು-ನಾಗರಾಜಮೂರ್ತಿ, ಸಂಕಲನ ವೆಂಕಿ.ಯುಡಿವಿ, ಸಾಹಸ ಅಲ್ಟಿಮೇಟ್ ಶಿವು, ನೃತ್ಯ ಜಗ್ಗು ಅವರದಾಗಿದೆ.

ಚೇತನ್, ಸಂಪೂರ್ಣ ಕಲಾವಿದರು, ಸಾಹಿತ್ಯ ಒಲವು ಮಂಜುಕವಿ ಅವರಿಂದ ಮಾತ್ರ, ಇಂತಹ ಚಿತ್ರ ಮಾಡಲು ಸಾಧ್ಯ. ಚಿತ್ರರಂಗ ಅಭಿವೃದ್ದಿಗೊಳ್ಳಬೇಕಾದರೆ ಕ್ರಿಯಾಶೀಲತೆ ಇರುವ ತಂಡದಿಂದ ಆಗುತ್ತದೆ. ಅಂತಹುದೆ ಟೀಂನ್ನು ಕಟ್ಟಿಕೊಂಡಿದ್ದಾರೆ ತಿಕ್ಲು ರಾಮ ಹಾಸ್ಯಾಸ್ಪದ ಸಿನಿಮಾ ಅನಿಸಿದರೂ, ಸಮಾಜಕ್ಕೆ ಸಂದೇಶ, ಕುಟುಂಬ ಹಾಗೂ ಭಾವನಾತ್ಮಕ ವಿಷಯಗಳನ್ನು ಹೇಳ ಹೊರಟಿದ್ದಾರೆ. ಇವುಗಳು ಜನರ ಮನಸ್ಸಿಗೆ ನಾಟಲಿ ಎಂದರು.
ನಿರ್ದೇಶಕ ಮಂಜುಕವಿ ಮಾತನಾಡಿ, ಮೊದಲರ್ಧ ಹಳ್ಳಿ ಸೊಗಡು ಇರಲಿದ್ದು, ದ್ವಿತೀಯಾರ್ಧ ನೋಡುಗರನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಎಲ್ಲೆಲ್ಲಿ ಪ್ರಾಣಿಗಳ ಅವಶ್ಯಕತೆ ಇದೆಯೋ, ಅದನ್ನು ಉತ್ತಮವಾದ ತಂತ್ರಜ್ಞಾನ ಬಳಸಿಕೊಂಡು, ನಿಜವಾದ ಪ್ರಾಣಿಗಳನ್ನೇ ನೋಡ್ರಿದಂತೆ ಭಾಸವಾಗುವ ದೃಶ್ಯಗಳು ಇರಲಿದೆ. ಸತ್ಯ ಘಟನೆಯಲ್ಲಿ ಆತ ಶ್ರೀರಾಮ. ಮುಂದೆ ತಿಕ್ಲು ರಾಮ ಆಗುವುದಕ್ಕೆ ಕಾರಣ ಎಂಬುದಕ್ಕೆ ಉತ್ತರ ಚಿತ್ರಮಂದಿರಕ್ಕೆ ಬರಬೇಕು. ಹಾಸನ, ಫಲವತ್ತಾದ ಹಸಿರು ಇರುವ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ ಎಂದು ಹೇಳಿದ್ದಾರೆ

ನಾಯಕ ಡಾ.ರಾಜ್ ವೀರ್ ಮಾತನಾಡಿ ಬಾಲ್ಯದಲ್ಲಿ ಬುದ್ದನನ್ನು ಹುಚ್ಚ ಅಂತಲೂ, ಸ್ವಾಮಿ ವಿವೇಕಾನಂದರನ್ನು ಪಾಗಲ್ ಬಿಲ್ಲೆ ಎಂದು ಕರೆಯುತ್ತಿದ್ದು, ಮುಂದೆ ಅವರುಗಳು ದೇಶಕ್ಕೆ ಮಾದರಿಯಾದರು. ಸ್ಪೂರ್ತಿಯಿಂದಲೇ ಇದೇ ಹೆಸರನ್ನು ಇಡಲಾಯಿತು. ಚಿತ್ರದಲ್ಲಿ ಪರಿಸರ, ಸಾಮಾಜಿಕ ಕಳಕಳಿ, ಸಂಸಾರ ನಡೆಸುವ ಹೆಣ್ಣು ಮಕ್ಕಳಿಗೆ ಒಂದಾಗಿ ಬಾಳುವಂತ ಸನ್ನಿವೇಶಗಳು ಇರಲಿದೆ. ರಾಮ, ಕೊಡಲಿ ಹಿಡಿದರೆ ತಿಕ್ಲು ರಾಮ. ಹಾಗಂತ ರಕ್ತಪಾತವನ್ನು ವೈಭವಿಕರಿಸುವುದಿಲ್ಲ. ಪ್ರಸಕ್ತ ಎಷ್ಟೋ ಜನ ವಿದ್ಯಾವಂತರಾಗಿದ್ದರೂ, ಅವಿದ್ಯಾವಂತರಾಗಿ ವರ್ತಿಸುತ್ತಿದ್ದಾರೆ ಎಂದುರು

