Kiccha Sudeep's Mark to be released on OTT in four languages

ಕಿಚ್ಚ ಸುದೀಪ್ ನಟನೆಯ ಮಾರ್ಕ್ ಚಿತ್ರ ನಾಲ್ಕು ಭಾಷೆಗಳಲ್ಲಿ ಒಟಿಟಿಯಲ್ಲಿ ಪ್ರಸಾರ - CineNewsKannada.com

ಕಿಚ್ಚ ಸುದೀಪ್ ನಟನೆಯ ಮಾರ್ಕ್ ಚಿತ್ರ ನಾಲ್ಕು ಭಾಷೆಗಳಲ್ಲಿ ಒಟಿಟಿಯಲ್ಲಿ ಪ್ರಸಾರ

ಕಳೆದ ವರ್ಷದ ಬಹುನಿರೀಕ್ಷೆಯ ಸಿನಿಮಾಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಚಿತ್ರಗಳ ಪೈಕಿ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಹ ಒಂದು. ಅಪಾರ ನಿರೀಕ್ಷೆಯಂತೆ, ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 25ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡಿತ್ತು ಈ ಸಿನಿಮಾ. ಆಕ್ಷನ್ ಥ್ರಿಲ್ಲರ್ ಅಡ್ವೆಂಚರ್ ಜಾನರ್‍ನ ಮಾರ್ಕ್‍ಗೆ ಮೆಚ್ಚುಗೆಯ ಮಾತುಗಳೂ ಕೇಳಿಬಂದಿದ್ದವು.

ಮಾಸ್ ಎಂಟರ್‍ಟೈನರ್ ಎಂಬಂತಹ ಪಾಸಿಟಿವ್ ವಿಮರ್ಶೆಗಳನ್ನೂ ಪಡೆದುಕೊಂಡಿತ್ತು ಈ ಸಿನಿಮಾ. ಇದೀಗ ಇದೇ ಚಿತ್ರ ಥಿಯೇಟರ್‍ಗಳಲ್ಲಿ ಬಿಡುಗಡೆಯಾದ 30 ದಿನಕ್ಕೆ ಅಂದರೆ ಸರಿಯಾಗಿ ಒಂದು ತಿಂಗಳಿಗೆ ಒಟಿಟಿ ಅಂಗಳಕ್ಕೆ ಪ್ರವೇಶ ಪಡೆಯುತ್ತಿದೆ. ಯಾವ ಒಟಿಟಿ, ಯಾವಾಗಿನಿಂದ ಸ್ಟೀಮಿಂಗ್ ಅನ್ನೋ ಮಾಹಿತಿ ಇಲ್ಲಿದೆ.

ಅಜಯ್ ಮಾರ್ಕಂಡೇಯ ಅಲಿಯಾಸ್ ಮಾರ್ಕ್. ಕಥಾನಾಯಕ ಮಾರ್ಕ್ ಸಸ್ಪೆಂಡ್ ಆಗಿರುವ ಎಸಿಪಿ. ಪೆÇಲೀಸ್ ಡಿಪಾರ್ಟ್‍ಮೆಂಟ್‍ನಲ್ಲಿ ದೊಡ್ಡ ಹೆಸರು. ಆತನ ಹೆಸರು ಕೇಳಿದ್ರೆ ಸಾಕು ರಾಜಕೀಯ ನಾಯಕರಿಂದ ಹಿಡಿದು, ರೌಡಿಗಳೂ ಗಡಗಡ ಆ ಮಟ್ಟದ ಖಡಕ್ ಹಿನ್ನೆಲೆ ಇರುವಂಥ ಅಧಿಕಾರಿ.

ಹೀಗಿರುವಾಗ ಇದೇ ಮಾರ್ಕ್‍ಗೆ ಒಂದು ಸಂದಿಗ್ಧ ಪರಿಸ್ಥಿತಿಗೆ ಸಿಲುಕುತ್ತಾನೆ. ಒಂದು ಕಡೆ ರಾಜಕೀಯದ ಷಡ್ಯಂತ್ರ, ಮತ್ತೊಂದು ಕಡೆ ಮಕ್ಕಳ ಟ್ರಾಫಿಕಿಂಗ್ (ಮಕ್ಕಳ ಕಳ್ಳ ಸಾಗಣೆ), ಇದರ ನಡುವೆ ಡ್ರಗ್ಸ್ ಘಾಟು.. ಹೀಗೆ ಹಲವು ಕೋನಗಳಲ್ಲಿ ಪದರಗಳಾಗಿ ಸಿನಿಮಾ ತೆರೆದುಕೊಳ್ಳುತ್ತ ಹೋಗುತ್ತದೆ. ಇದೆಲ್ಲವನ್ನು ಸಂಭಾಳಿಸಲು ಕಥಾನಾಯಕನಿಗೆ ಇರೋದು ಜಸ್ಟ್ 36 ಗಂಟೆ ಮಾತ್ರ. ಆ 36 ಗಂಟೆಯಲ್ಲಿ ಸಿನಿಮಾ ಹೇಗೆಲ್ಲ ಓಟಕ್ಕಿಳಿಯುತ್ತೆ ಅನ್ನೋದೇ ಮಾರ್ಕ್ ಚಿತ್ರದ ಒಂದೆಳೆ.

ಜಿಯೋ ಹಾಟ್‍ಸ್ಟಾರ್‍ನಲ್ಲಿ ಮಾರ್ಕ್

ಕಿಚ್ಚ ಸುದೀಪ್ ಅವರ ಮಾರ್ಕ್ ಸಿನಿಮಾದ ಒಟಿಟಿ ಪ್ರಸಾರದ ಹಕ್ಕುಗಳನ್ನು ಜಿಯೋ ಹಾಟ್‍ಸ್ಟಾರ್ ಪಡೆದುಕೊಂಡಿದೆ. ಅದರಂತೆ, ಜನವರಿ 23ರ ಶುಕ್ರವಾರ ಜಿಯೋ ಹಾಟ್‍ಸ್ಟಾರ್ ಒಟಿಟಿಯಲ್ಲಿ ಮಾರ್ಕ್ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಪ್ರಸಾರ ಆರಂಭಿಸಲಿದೆ. ಥಿಯೇಟರ್‍ಗಳಲ್ಲಿ ಈ ಚಿತ್ರವನ್ನು ಮಿಸ್ ಮಾಡಿಕೊಂಡವರು, ಇನ್ನೊಮ್ಮೆ ಸಿನಿಮಾ ನೋಡಬೇಕೆಂದುಕೊಂಡವರಿಗೆ ಇದೀಗ ಜಿಯೋ ಹಾಟ್‍ಸ್ಟಾರ್ ಸರ್ಪ್ರೈಸ್ ನೀಡಿದೆ. ಹಾಗಾದರೆ ಮತ್ಯಾಕೆ ತಡ, ಈಗಲೇ ಜಿಯೋ ಹಾಟ್‍ಸ್ಟಾರ್ ಅಪ್ಲಿಕೇಷನ್ ಡೌನ್‍ಲೋಡ್ ಮಾಡಿಕೊಂಡು ಸಿನಿಮಾ ವೀಕ್ಷಿಸಿ.

ತಾರಾಗಣ ಮತ್ತು ತಾಂತ್ರಿಕ ವರ್ಗ

ಮಾರ್ಕ್ ಸಿನಿಮಾದಲ್ಲಿ ಹಿರಿ ಕಿರಿ ಕಲಾವಿದರ ದೊಡ್ಡ ಬಳಗವೇ ಇದೆ. ಅದೇ ರೀತಿ ತೆರೆ ಹಿಂದೆ ತಾಂತ್ರಿಕವಾಗಿಯೂ ಸಾಕಷ್ಟು ಮಂದಿ ದುಡಿದಿದ್ದಾರೆ. ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಮೂಡಿ ಬಂದ ಮಾರ್ಕ್ ಸಿನಿಮಾವನ್ನು ಸತ್ಯಜ್ಯೋತಿ ಫಿಲಂಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಾಣ ಮಾಡಿವೆ. ನಾಯಕನಾಗಿ ಕಿಚ್ಚ ಸುದೀಪ್, ಖಳನಾಯಕನಾಗಿ ಬಹುಭಾಷಾ ನಟ ನವೀನ್ ಚಂದ್ರ, ಮಲಯಾಳಂ ನಟ ಶೈನ್ ಟೊಮ್ ಚಾಕೊ, ವಿಕ್ರಾಂತ್, ಯೋಗಿ ಬಾಬು, ಗುರು ಸೋಮಸುಂದರಂ, ಗೋಪಾಲ್ ಕೃಷ್ಣ ದೇಶಪಾಂಡೆ, ರಘು ರಾಮನಕೊಪ್ಪ, ನಿಶ್ವಿಕಾ ನಾಯ್ಡು, ರೋಷನಿ ಪ್ರಕಾಶ್ ಸೇರಿ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ.

ಅಜನೀಶ್ ಲೋಕನಾಥ್ ಸಂಗೀತ, ಶೇಖರ್ ಚಂದ್ರ ಅವರ ಸಿನಿಮಾಟೋಗ್ರಾಫಿ, ಗಣೇಶ್ ಬಾಬು ಅವರ ಸಂಕಲನ, ಈ ಚಿತ್ರಕ್ಕಿದೆ. ಇನ್ನು ಮಾರ್ಕ್ ಸಿನಿಮಾದ ಪ್ರಮುಖ ಆಕರ್ಷಣೆ ಎಂದರೆ ಅದು ಆಕ್ಷನ್ ಸೀಕ್ವೆನ್ಸ್‍ಗಳು. ಭಾರತೀಯ ಚಿತ್ರರಂಗದ ಖ್ಯಾತ ಸ್ಟಂಟ್ ಡೈರೆಕ್ಟರ್ಸ್‍ಗಳಾದ ಸ್ಟಂಟ್ ಸಿಲ್ವಾ, ಸುಪ್ರೀಮ್ ಸುಂದರ್ ಹಾಗೂ ಕನ್ನಡದ ರವಿವರ್ಮ ಅವರ ಸಾಹಸ ನಿರ್ದೇಶನವಿದೆ. ಇದೀಗ ಇದೇ ಸಿನಿಮಾ ಜನವರಿ 23ರಂದು ಜಿಯೋ ಹಾಟ್‍ಸ್ಟಾರ್ ಒಟಿಟಿಗೆ ಆಗಮಿಸಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin