Teaser of Gen Zhe era film Indira unveiled

ಜೆನ್ ಜ್ಹೀ ಕಾಲಘಟ್ಟದ ಸಿನಿಮಾ ಇಂದಿರಾ ಟೀಸರ್ ಅನಾವರಣ - CineNewsKannada.com

ಜೆನ್ ಜ್ಹೀ ಕಾಲಘಟ್ಟದ ಸಿನಿಮಾ ಇಂದಿರಾ ಟೀಸರ್ ಅನಾವರಣ

ಒಂದೊಂದು ಕಾಲದಲ್ಲಿ ಒಂದೊಂದು ವಿಷಯಗಳು ಪ್ರಸ್ತುತ ಕಾಲಘಟ್ಟದಲ್ಲಿ ಗಮನ ಸೆಳೆಯುತ್ತಿದೆ, ಈ ಬಾರಿ ?ಜೆನ್ ಜ್ಹೀ? ಕಾಲಘಟ್ಟ. ಇಂತಹ ಕಾಳಘಟ್ಟಕ್ಕೆ ಅನುಕೂಲವಾಗುವ ಕಥೆಯನ್ನು ಸಿದ್ದಪಡಿಸಿ ಜನರ ಮುಂದಿಡಲು ಹೊಸ ತಂಡ ಮುಂದಾಗಿದೆ.ಅದಕ್ಕೆ ಇಂದಿರಾ ಎಂದು ಹೆಸರಿಡಲಾಗಿದೆ

‘ರಾವೆನ್’ ಚಿತ್ರ ನಿರ್ದೇಶಿಸಿದ್ದ ವೇದ್, ‘ಇಂದಿರಾ’ ನಿರ್ದೇಶನ ಮಾಡುತ್ತಿದ್ದು, ಕಿರಣ್ ಕುಮಾರ್ ಎಂ. ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ‘ಇಂದಿರಾ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಕರ್ನಾಟಕ ಪ್ರಮುಖ ತಾಣಗಳು ಮತ್ತು ಹೊರರಾಜ್ಯಗಳಲ್ಲೂ ‘ಇಂದಿರಾ’ ಚಿತ್ರದ ಚಿತ್ರೀಕರಣ ನಡೆಯಲಿದೆ. ‘ಇಂದಿರಾ’ ಚಿತ್ರದ ಮಹಿಳಾ ಪ್ರಧಾನ ಪಾತ್ರಕ್ಕೆ ಕನ್ನಡದ ಜನಪ್ರಿಯ ನಟಿಯೊಬ್ಬರನ್ನು ಕರೆತರುವ ಯೋಜನೆಯಲ್ಲಿದೆ ಚಿತ್ರತಂಡ.

ಇಂದಿರಾ ಚಿತ್ರದ ಶೀರ್ಷಿಕೆ ಪೊಸ್ಟರ್ ಮತ್ತು ಟೀಸರ್ ಅನ್ನು ವಾಣಿಜ್ಯ ಮಂಡಳಿ’ ಮಾಜಿ ಅಧ್ಯಕ್ಷ ಭಾ. ಮ. ಹರೀಶ್, ನಿರ್ಮಾಪಕರಾದ ಟಿ. ಪಿ. ಸಿದ್ಧರಾಜು, ನಿತ್ಯಾನಂದ ಪ್ರಭು, ‘ಕನ್ನಡ ಚಲನಚಿತ್ರ ನಿರ್ಮಾಪಕ ಸಂಘ’ದ ಗೌರವ ಕಾರ್ಯದರ್ಶಿ ಭಾ. ಮ. ಗಿರೀಶ್, ನಟ ದೇವ್ ದೇವಯ್ಯ ಸೇರಿದಂತೆ ಮತ್ತಿತರರು ಅನಾವರಣ ಮಾಡಿದರು

ನಿರ್ದೇಶಕ ವೇದ್ ಮಾತನಾಡಿ ಇಂದಿನ ತಲೆಮಾರಿನ ಜನತೆಗೆ ಕನೆಕ್ಟ್ ಆಗುವ ಸಿನಿಮಾ. ಜಗತ್ತಿನ ಅನೇಕ ದೇಶಗಳಲ್ಲಿ ‘ಜೆನ್ ಜ್ಹೀ’ ಯಿಂದ ಏನೇನು ಆಗುತ್ತಿದೆ. ಯುವ ಜನಾಂಗ ಹೇಗೆಲ್ಲ ಯೋಚಿಸುತ್ತದೆ. ಅವರಿಂದ ಏನೆಲ್ಲ ಆಗಬಹುದು, ಎನ್ನುವ ವಿಷಯಗಳನ್ನು ಈ ಸಿನಿಮಾದಲ್ಲಿ ಹೇಳುತ್ತಿದ್ದೇವೆ.ಮಹಿಳಾ ಪ್ರಧಾನ ಕಥಾಹಂದರದ ಸಿನಿಮಾವಾಗಿದ್ದು, ಹಾಗಾಗಿ ಸಿನಿಮಾಕ್ಕೆ ‘ಇಂದಿರಾ’ ಎಂದು ಹೆಸರಿಟ್ಟಿದ್ದೇವೆ. ಮನರಂಜನೆಯ ಜೊತೆಗೆ ಸಮಾಜಕ್ಕೆ ಸಂದೇಶ ಕೂಡ ಇರಲಿದೆ. ಸದ್ಯದಲ್ಲಿಯೇ ಚಿತ್ರೀಕರಣ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು

ನಿರ್ಮಾಪಕ ಕಿರಣ್ ಕುಮಾರ್ ಮಾತನಾಡಿ ಇಂದಿರಾ ಗಾಂಧಿಯವರಿಗೂ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ರಾಜಕೀಯ ಕಥೆಯಾಧಾರಿತ ಸಿನಿಮಾವಲ್ಲ.. ಸಿನಿಮಾದ ಕಥೆಗೆ ತಕ್ಕಂತೆ ಪವರ್‍ಫುಲ್ ಟೈಟಲ್ ಇರಬೇಕೆಂಬ ಕಾರಣಕ್ಕೆ ಹೆಸರಿಡಲಾಗಿದೆ ವರ್ಷಾಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದ್ದೇವೆ’ ಎಂದರು

ಚಿತ್ರಕ್ಕೆ ರವಿವರ್ಮ ಛಾಯಾಗ್ರಹಣ, ಧನುಶ್ ಸಂಕಲನ ಕಾರ್ಯವಿದೆ.ಮಾರ್ಚ್ ತಿಂಗಳ ಕೊನೆಯೊಳಗೆ ‘ಇಂದಿರಾ’ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರನ್ನು ಅಂತಿಮಗೊಳಿಸಿ, ಚಿತ್ರೀಕರಣ ನಡೆಸುವ ಉದ್ದೇಶವಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin