Cult Movie Review : ಪ್ರೀತಿ, ಪ್ರೇಮ, ದೋಖಾ ನಡುವೆ ಮನಮುಟ್ಟುವ ಸೆಂಟಿಮೆಂಟ್
ಚಿತ್ರ ; ಕಲ್ಟ್
ನಿರ್ದೇಶನ ; ಅನಿಲ್ ಕುಮಾರ್
ತಾರಾಗಣ: ಝೈದ್ ಖಾನ್, ರಚಿತಾ ರಾಮ್, ಮಲೈಕಾ ವಸುಪಾಲ್, ರಂಗಾಯಣ ರಘು, ಅಚ್ಯುತ್ ಕುಮಾರ್, ಆಲ್ ಓಕೆ, ಕಿಶನ್ ಬೆಳಗಲಿ ಮತ್ತಿತರರು
ರೇಟಿಂಗ್ : *** 3/5
ಎಲ್ಲರೂ ಓಡೋಗಿ ಪ್ರೀತಿ ಮಾಡ್ತಾರೆ.. ನಾವು ಒಡೋಡಿ ಬಂದು ಪ್ರೀತಿ ಮಾಡ್ತೇವೆ ಅಲ್ವಾ ಗೀತಾ..
ಹದಿನಾಲ್ಕು ವರ್ಷ ಅಲ್ಲ ಜೀವನ ಪೂರ ಪ್ರೀತಿಸುತ್ತೇನೆ ಮಾದ್ಬ…”
ಸೊಂಟ ತಿರುಗುಸಿ ತಲೆ ಸುಸ್ತು ಬಿದ್ದಿದ್ದಾಳೆ.
ಸ್ವಾತಂತ್ರ್ಯ ಹೋರಟಗಾರರು ಇದಕ್ಕಾ ಸ್ವಾತಂತ್ರ್ಯ ಕೊಡಿಸಿದ್ದು ಅನ್ಸಿಸುತ್ತೆ.
ನಿನ್ನ ನೋಡಿದ್ರೂ ನನಗೆ ಹಾಗೆ ಅನ್ನಿಸುತ್ತೆ.
ಕೈ ಹಾಕು ಎತ್ತೋಣ
ಮೋಟೆ ಇದ್ದಂಗೆ ಅವಳ್ವೆ…ಇವಳನ್ನಾ…
ಅತಿಯಾಗಿ ಪ್ರೀತಿ ಮಾಡುವ ಯುವ ಜೋಡಿಗಳ ಮನದ ಮಾತು ಒಂದಡೆ..
ಮತ್ತೊಂದು ಕಂಠಪೂರ ಕುಡಿದು ಬಾತ್ ರೂಮ್ ನಲ್ಲಿ ಬಿದ್ದಿದ್ದ ಇತಿಯನ್ನು ಕರೆದುಕೊಂಡು ಹೋಗಲು ಜಾಯ್ ಮತ್ತು ಮಾದವನ ಸಂಭಾಷಣೆ..
ಈ ವಾರ ತೆರೆಗೆ ಬಂದಿರುವ ಕಲ್ಟ್ ಚಿತ್ರದ ತ್ರಿಕೋನ ಪ್ರೇಮದ ಝಲಕ್.
ಕಲ್ಟ್ ಚಿತ್ರದಲ್ಲಿ ಪರಿಶುದ್ದ ಪ್ರೇಮವಿದೆ. ತಾಯಿ – ಮಗನ ಬಾಂಧವ್ಯವೂ ಇದೆ. ಜೊತೆಗೆ ಅಪ್ಪ- ಮಗಳ ವಾತ್ಸಲ್ಯ ಮನ ಮಿಡಿಯುತ್ತದೆ. ಇದರ ಜೊತೆಗೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಹುಡುಗಿಯ ವೇದನೆಯೂ ಇದೆ. ಜೊತೆಗೆ ಹಣದಾಸೆಗೆ ಪ್ರೀತಿಸಿದ ಹುಡುಗನಿಗೆ ನಾಮ ಹಾಕುವ ಈಗಿನ ಕಾಲದ ಹುಡುಗ- ಹುಡುಗಿಯರ ಮನಸ್ಥಿತಿಯನ್ನು ತೆರೆಗೆ ಕಟ್ಟಿಕೊಡಲಾಗಿದೆ.
ಕಾಲೇಜಿನಲ್ಲಿ ಓದಿನಲ್ಲಿರುವ ಮುಂದಿರುವ ಮಾದವ – (ಝೈದ್ ಖಾನ್) ತಾನು ಪ್ರೀತಿಸಿದ ಹುಡುಗಿ ಗೀತಾ ( ಮಲೈಕಾ ವಸುಪಾಲ್) ಳನ್ನು ಅತಿಯಾಗಿ ಇಷ್ಟಪಡ್ತಾನೆ. ಇಂಜಿನಿಯರ್ ಮಾಡಲು ಮಣಿಪಾಲ್ ಗೆ ಬಂದರೆ ಇತ್ತ ಗೀತಾ ಬೆಂಗಳೂರಿನತ್ತ ಮುಖ ಮಾಡ್ತಾಳೆ .ಆದರೆ ಮಾದವನ ಪ್ರೀತಿ ಕಿಂಚಿತ್ತೂ ಕಡಿಮೆಯಾಗದು.
ಹಂಪಿಯಲ್ಲಿ ಬೆಳದ ಇತಿಹಾಸಿನಿ ( ರಚಿತಾ ರಾಮ್) ಗೆ ಅಪ್ಪನೇ ಸರ್ವಸ್ವ.ಅಪ್ಪನ ಅಕಾಲಿಕ ನಿಧನದಿಂದ ಒಬ್ಬಂಟಿಯಾಗುವ ಇತಿ ಕುಡಿತದ ಚಟಕ್ಕೆ ಬೀಳ್ತಾಳೆ. ಇತ್ತ ಪ್ರೀತಿಸಿದ ಹುಡುಗಿಯಿಂದ ಮೋಸ ಹೋಗಿ ಮಾದವ ಕುಡಿತವನ್ನೇ ಸರ್ವಸ್ವ ಮಾಡಿಕೊಂಡ ಇಬ್ಬರ ಬಾಳಲ್ಲಿ ಏನು ನಡೆಯಿತು.. ಮನಸಾರೆ ಪ್ರೀತಿಸಿದ ಹುಡುಗಿ ಯಾಕೆ ಕೈಕೊಟ್ಟಳು. ಮುಂದೇನಾಗುತ್ತದೆ ಎನ್ನುವುದು ಕಥನ ಕುತೂಹಲ.
ಆಕ್ಷನ್ ,ಪ್ರೀತಿ, ಪ್ರೇಮ,ಕಾಮ, ಮೋಸ ಕುಡಿತದ ಹಿನ್ನೆಲೆಯಲ್ಲಿ ನಿರ್ದೇಶಕ ಅನಿಲ್ ಕುಮಾರ್ ಕಲ್ಟ್ ಚಿತ್ರವನ್ನು ಕಟ್ಟಿ ಪ್ರೇಪಕ್ಷಕರ ಮುಂದಿಟ್ಟಿದ್ದಾರೆ.
ನಟ ಝೈದ್ ಖಾನ್ ನಟನೆಯಲ್ಲಿ ಇನ್ನಷ್ಟು ಪಳಗಬೇಕಾಗಿದೆ. ಪೈಟ್ ನಲ್ಲಿ ಗಮನ ಸೆಳೆಯುತ್ತಾರೆ.
ನಟಿ ರಚಿತಾ ರಾಮ್ ಅವರದು ವಯಸ್ಸಿಗೆ ಮೀರಿದ ಪಾತ್ರ, ಕುಡುಕಿ, ಧಮ್ ಎಳೆಯುವುದರಲ್ಲಿ ಮೈ ಚಳಿ ಬಿಟ್ಟು ನಟಿಸಿದ್ದಾರೆ. ಮತ್ತೊಂದು ಶೇಡ್ ನಲ್ಲಿ ಪಾತ್ರ ಗಮನ ಸೆಳೆದಿದ್ದಾರೆ. ಒಂದೊಂದು ಕಡೆ ಹಿರಿಯ ನಟಿ ಮಾಲಾಶ್ರೀ ಕಂಡ ರೀತಿ ತೆರೆಯ ಮೇಲೆ ಕಾಣಿಸುತ್ತಾರೆ.
ಮತ್ತೊಬ್ಬ ನಟಿ ಮಲೈಕಾ ವಸುಪಾಲ್ ಮುಗ್ದತೆ ಮತ್ತು ಹಣದಾಸೆಯ ಹುಡುಗಿಯ ಪಾತ್ರದಲ್ಲಿ ಸಿಕ್ಕ ಪಾತ್ರಕ್ಕೆ ನಿರ್ವಹಿಸಿದ್ದಾರೆ.
ರಂಗಾಯಣ ರಘು, ಅಚ್ಯುತ್ ಕುಮಾರ್ , ಹಾಗು ಆಲ್ ಒಕೆ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

