JC Movie Review: JC is a film about an unexpected event that changes the course of life.

JC Movie Review : ಬದುಕಿನ ದಿಕ್ಕನ್ನೇ ಬದಲಿಸಿದ ಅನೀರೀಕ್ಷಿತ ಘಟನೆಯ ಕಥಾಹಂದರದ ಚಿತ್ರ ಜೆಸಿ - CineNewsKannada.com

JC Movie Review : ಬದುಕಿನ ದಿಕ್ಕನ್ನೇ ಬದಲಿಸಿದ ಅನೀರೀಕ್ಷಿತ ಘಟನೆಯ ಕಥಾಹಂದರದ ಚಿತ್ರ ಜೆಸಿ

ಚಿತ್ರ: ಜೆಸಿ
ನಿರ್ದೇಶನ ;ಚೇತನ್ ಜಯ್ ರಾಮ್
ತಾರಾಗಣ; ಸೂರ್ಯ ಪ್ರಖ್ಯಾತ್, ಭಾವನಾ, ರಂಗಾಯಣ ರಘು, ಸ್ವಾತಿ, ಥ್ರಿಲ್ಲರ್ ಮಂಜು, ವಿಜಯ್ ಸಿಂಹ, ಹಂಸ, ಮತ್ತಿತರರು
ರೇಟಿಂಗ್ : **** 4 / 5

ಮಗ ಕಿರೀಟ ಹೊತ್ಕೊಳ್ಳದಿದ್ದರೂ ಪರವಾಗಿಲ್ಲ.. ಕಳಂಕ ಹೊತ್ಕೋಬಾರದು ಅಂತ ಪ್ರತಿಯೊಬ್ಬ ಅಪ್ಪನ ಬಯಕೆ…
” ಯಾಕಪ್ಪ.. ನಾವು ಇರಲಿಲ್ವಾ…ಅಪ್ಪ. ಅಮ್ಮ ..
ಯಾವ ತಂದೆನೂ ಮಗ ಹಾಳಾಗಲಿ ಅಂತ ಬಯಸಲ್ಲ. ಒಂದು ಚಾನ್ಸ್ ಕೊಡಿ.. ಬದಲಾಯಿಸಿಕೊಂಡು ಬಿಡ್ತಾನೆ.

ಮುದ್ದಾಗಿ ಬೆಳೆಸಿದ ಮಗ ಅಡ್ಡದಾರಿ ಹಿಡಿದಿದ್ದಾನೆ ಎಂದು ಗೊತ್ತಾದಾಗ ಹೆತ್ತ ಕರಳಿನ ಸಂಕಟ, ತಳಮಲ, ತುಮುಲ ಒಂದೆಡೆಯಾದರೆ ಅನಿರೀಕ್ಷಿತ ಘಟನೆಗಳು ಬದುಕಿನ ದಾರಿಯನ್ನೇ ಬದಲಾಯಿಸುವ ಕಥಾಹಂದರ ಹೊಂದಿರುವ ಚಿತ್ರ ” ಜೆ.ಸಿ”

ಅಪ್ಪ-ಮಗನ ಬಾಂಧವ್ಯ,ಮಗನ ಬಗ್ಗೆ ಅಪ್ಪನಿಗಿರುವ ಕಾಳಜಿ, ಅಮ್ಮನ ಪ್ರೀತಿ, ಪ್ರಿಯತಮೆಯ ಸಾಂಗತ್ಯ, ಸ್ನೇಹಿತರ ನಯವಂಚಕತನ, ಮುದ್ದಾದ ಪ್ರೇಮ ಕಥೆಯ ಜೊತೆಗೆ ರೌಡಿಸಂ, ಆಕ್ಷನ್ ಮಿಶ್ರಣ ಹೊಂದಿರುವ ಜೈಲಿನ ಒಳ ಹೊರಗು ಅನಾವರಣ ಮಾಡುವ ಚಿತ್ರಣ ತೆರೆದಿಡುವ ಚಿತ್ರ ಇದು..

ಬಡವರ ಮಕ್ಕಳು ಬೆಳೀಬೇಕು ಎನ್ನುತ್ತಲೇ ಪ್ರತಿಭೆಗಳಿಗೆ ಪೆÇ್ರೀತ್ಸಾಹ ಸಿಗಬೇಕು ಎನ್ನುವ ಉದ್ದೇಶದಲ್ಲಿ ನಿರ್ಮಾಪಕ ಡಾಲಿ ಧನಂಜಯ ಮತ್ತೊಮ್ಮೆ ಹೊಸ ಹುಡುಗ ಚೇತನ್ ಜಯರಾಮ್ ಅವರಿಗೆ ಚಿತ್ರ ನಿರ್ದೇಶನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.

ಪ್ರತಿ ಬಾರಿಯೂ ಹೊಸ ಕಥೆಯನ್ನು ಆಯ್ಕೆ ಮಾಡಿಕೊಳ್ಳುವ ನಿರ್ಮಾಪಕ ಡಾಲಿ ಧನಂಜಯ, ಮಾತಿನ ಮೂಲಕವೇ ಒಂದಷ್ಟು ಕಚಗುಳಿ ಮೂಲಕ ಪ್ರೇಕ್ಷಕರನ್ನು ಹಿಡಿದಿಡಬಲ್ಲ ಸಾಮರ್ಥ್ಯ ಹೊಂದಿದ ಸಂಭಾಷಣಾಕಾರ ಮಾಸ್ತಿ ಚಿತ್ರದ ನಿಜವಾದ ಹಿರೋಗಳು.

ಹಣ, ಅಧಿಕಾರ ಇದ್ದರೆ ಜೈಲಿನಲ್ಲಿ ಹೆಣ್ಣು, ಹೆಂಡ ಸೇರಿದಂತೆ ಎಲ್ಲವೂ ಸಿಗಲಿದೆ ಎನ್ನುವುದನ್ನು ತೋರಿಸುತ್ತಲೇ.. ಜೈಲಿನೊಳಗಿನ ರಾಜಕೀಯ, ರೌಡಿಗಳ ಅಟ್ಟಹಾಸ, ಅಲ್ಲಿಂದಲೇ ಅವರು ನಡೆಸುವ ವ್ಯವಹಾರ, ಮತ್ತೊಬ್ಬರನ್ನು ಮುಗಿಸಲು ಹಾಕುವ ಸಂಚು, ಹುನ್ನಾರ ಸೇರಿದಂತೆ ಹಲವು ವಿಷಯಗಳನ್ನು ಚಿತ್ರದ ಮೂಲಕ ತೆರೆದಿಡಲಾಗಿದೆ.

ಮಧುಸೂಧನ ಅಲಿಯಾಸ್ ಮ್ಯಾಡಿ (ಸೂರ್ಯ ಪ್ರಖ್ಯಾತ್). ಉತ್ತಮ ವಿದ್ಯಾರ್ಥಿ, ತಾನಾಯಿತು ತನ್ನ ಗೆಳೆರಾಯಿತು ಎಂದು ಇದ್ದವ. ಅದೇ ಕಾಲೇಜಿನ ಹುಡುಗಿ ಮೇಘನಾ ( ಭಾವನಾ) ಮೇಲೆ ಪ್ರೀತಿ ಚಿಗುರೊಡೆಯುತ್ತದೆ. ಹುಡುಗಿಗೆ ಇನ್ಯಾರೋ ಕಿರುಕುಳ ನೀಡುವುದನ್ನು ಸಹಿಸಿಕೊಳ್ಳಲಾಗದ ಮ್ಯಾಡಿ ಆಗ ತೆಗೆದುಕೊಂಡ ನಿರ್ಧಾರ ಆತನ ಬದುಕಿನ ದಿಕ್ಕನ್ನೇ ಬದಲಾಯಿಸಿ ಬಿಡುತ್ತದೆ

ಪುಡಿ ರೌಡಿಯ ಮೇಲೆ ಸೇಡು ತೀರಿಸಿಕೊಳ್ಳಲು ಹೋದ ಮ್ಯಾಡಿ ದೊಡ್ಡ ಡಾನ್ ನನ್ನೇ ಮುಗಿಸಿಬಿಡ್ತಾನೆ. ಅಲ್ಲಿಂದ ಕಥೆ ಮತ್ತೊಂದು ಮಗ್ಗಲು ತೆರೆದುಕೊಳ್ಳಲಿದೆ.ಜೈಲಿನ ವಾಸ, ಸಹವಾಸ, ಅಲ್ಲಿನ ರಾಜಕೀಯ ಸೇರಿದಂತೆ ಇನ್ನಿತರೆ ವಿಷಯಗಳು ಚಿತ್ರದ ಕಥನ ಕುತೂಹಲ ಮೂಡಿಸಿದೆ.

ಡಾನ್ ಮುಗಿಸಿದ ನಂತರ ಮ್ಯಾಡಿ ಸುಮ್ಮನೆ ಇರ್ತಾನಾ, ಅಥವಾ ಡಾನ್ ಕಡೆಯುವರು ಇವನ್ನು ಸುಮ್ಮನೆ ಬಿಡುತ್ತಾರಾ. ಇತ್ತ ಅಪ್ಪ- ಅಮ್ಮ, ಪ್ರೀತಿಗಾಗಿ ಕಾಯುವ ಹುಡುಗಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಏನೆಲ್ಲಾ ಅಗುತ್ತೆ ಎನ್ನುವುದನ್ನು ಚಿತ್ರದಲ್ಲಿಯೇ ನೋಡಿದರೆ ಚೆನ್ನ.

ನಿರ್ದೇಶಕ ಚೇತನ್ ಜಯರಾಮ್, ಜೈಲಿನ ಕಥೆ ಹೇಳು ರೌಡಿಸಂ ತಂದಿದ್ದಾರೆ. ರೌಡಿಗಳ ಕಥೆ ಅನ್ನುವ ಕಾರಣಕ್ಕೋ ಏನೋ ಪಕ್ಕಾ ರಾ ಶೈಲಿಯಲ್ಲಿ ಸಂಭಾಷಣೆ ಬರೆಸಿದ್ದಾರೆ. ಹೀಗಾಗಿ ಚಿತ್ರದುದ್ದಕ್ಕೂ .. ಅಮ್ಮ..ಅಕ್ಕ.. ಹೀಗೆ ಬೇರೆ ಪದಗಳು ಎಗ್ಗಿಲ್ಲದೆ ಸುಳಿದಾಡಿವೆ.

ನಾಯಕ ಸೂರ್ಯ ಪ್ರಖ್ಯಾತ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕೆಲವೊಂದು ಸನ್ನಿವೇಶಗಳಲ್ಲಿ ನಟ ಉಪೇಂದ್ರ ತೆರೆಯ ಮೇಲೆ ಇದ್ದಾರೆಯೋ ಅನ್ನುವಂತೆ ಭಾಸವಾಗುತ್ತದೆ. ನಾಯಕಿ ಭಾವನಾ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ರಂಗಾಯಣ ರಘು ಯಾವುದೇ ಪಾತ್ರ ಕೊಡಿ ನೀರು ಕುಡಿದಷ್ಟು ಸಲೀಸಾಗಿ ಮಾಡುತ್ತೇನೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಅಪ್ಪ- ಮಗನ ಸನ್ನಿವೇಶಗಳು ಮನಮುಟ್ಟುವಂತಿವೆ.

ಹಿರಿಯ ಕಲಾವಿದರಾದ ಸ್ವಾತಿ, ಥ್ರಿಲ್ಲರ್ ಮಂಜು, ಹಂಸ,ಸೇರಿದಂತೆ ಹಲವು ಕಲಾವಿದರು ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸಂಭಾಷಣೆ ಮೂಲಕ. ಜೈಲಿನ ವಿವರ ನೀಡಿದ ಮೇಲೆಯೂ ಅದನ್ಜು ಸನ್ನಿವೇಶಗಳಲ್ಲಿ ತೋರಿಸುವ ಅಗತ್ಯ ಇರಲಿಲ್ಲ.. ಮೊದಲರ್ದದಲ್ಲಿ ಒಂದಷ್ಟು ಟ್ರಿಮ್ ಮಾಡಿದ್ದರೆ ಇನ್ನಷ್ಟು ಪ್ರೇಕ್ಷಕರಿಗೆ ಚಿತ್ರ ಆಪ್ತ ಎನಿಸುತ್ತಿತ್ತು. ರೌಡಿಸಂ,ಆಕ್ಷನ್ ಬಯಸುವ ಮಂದಿಗೆ ಬರಪೂರ ಮನರಂಜನೆ ನೀಡಿದೆ.

ಕಾರ್ತಿಕ್ ಕ್ಯಾಮರಾ ಚಿತ್ರಕ್ಕೆ ಪೂರಕವಾಗಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin