The movie is set to release on February 30th

ಫೆಬ್ರವರಿ 30 ಸಿನಿಮಾ ಬಿಡುಗಡೆಗೆ ಸಿದ್ದ - CineNewsKannada.com

ಫೆಬ್ರವರಿ 30 ಸಿನಿಮಾ ಬಿಡುಗಡೆಗೆ ಸಿದ್ದ

ಬಿಗ್ ಬಾಸ್ ಖ್ಯಾತಿಯ ಅಭಿಷೇಕ್ ಶ್ರೀಕಾಂತ್ ನಟನೆಯ ಫೆಬ್ರವರಿ 30 ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರ ಫೆಬ್ರವರಿ 30. ಮೈಸೂರು ಮೂಲದ ಪ್ರಶಾಂತ್ ಎಂ.ಎಲ್ ನಿರ್ದೇಶನವಿದೆ.

ಜೋಸೆಫ್ ಬೇಬಿ ಬಂಡವಾಳ ಹೂಡಿದ್ದಾರೆ. ಅಭಿಷೇಕ್, ಸಾಹಿತ್ಯಶೆಟ್ಟಿ, ಅಕ್ಷಯ್, ಮನೋಜ್, ಶಿವಕುಮಾರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪಿ.ಎಂ. ಉನ್ನಿಕೃಷ್ಣನ್ ಛಾಯಾಗ್ರಹಣ, ಲಿಜಿನ್ ಪಂಬೋ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ನಿರ್ದೇಶಕ ಎಂ.ಎಲ್.ಪ್ರಶಾಂತ್ ಮಾತನ್ನಾಡಿ ಸಣ್ಣ ಪುಟ್ಟ ಶಾರ್ಟ್ ಮೂವಿ ಮಾಡ್ತಾ ಇದ್ದೆ. ಈ ಸಿನಿಮಾವನ್ನ ಚಿಕ್ಕದಾಗಿ ಮಾಡೋಣಾ ಅಂತಾನೇ ಅಂದುಕೊಂಡಿದ್ದು. ಆದರೆ ಬರೀತಾ ಬರೀತಾ ಸಿನಿಮಾ ಚೆನ್ನಾಗಿ ಬಂದಿದೆ. ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ. ಫೆಬ್ರವರಿ 30 ಅಂದ್ರೆ ಅನ್ ಎಕ್ಸ್ಪೆಕ್ಟೆಡ್ ಡೇಟ್. ಸಿನಿಮಾ ಚೆನ್ನಾಗಿ ಬಂದಿದೆ. ತೆರೆಮೇಲೆ ನೋಡಿದ್ರೆ ಖಂಡಿತ ಇಷ್ಟವಾಗುತ್ತೆ ಎಂದಿದ್ದಾರೆ

ನಟ ಅಭಿಷೇಕ್ ಶ್ರೀಕಾಂತ್ ಮಾತನ್ನಾಡಿ, ಮೊದಲ ಹಾರಾರ್ ಸಿನಿಮಾ. ಪ್ರಶಾಂತ್ ಕಥೆ ಹೇಳಿದಾಗ ಯೂನಿಕ್ ಅನ್ನಿಸ್ತು. ಆಡಿಷನ್ ನಡೆಸುವಾಗ ಪ್ರಶಾಂತ್ ಗೊಂದಲವಿತ್ತು. ಆದ್ರೆ ನನಗೆ ಈ ಅವಕಾಶ ಬಂತು. ಜೋಸೆಫ್ ಬೇರೆ ರಾಜ್ಯದಿಂದ ಬಂದು ನಮ್ಮನ್ನ ನಂಬಿ ಇನ್ವೆಸ್ಟ್ ಮಾಡಿದ್ದಕ್ಕೆ ಥ್ಯಾಂಕ್ಯೂ. ಈ ಸಿನಿಮಾದಿಂದ ಸಾಕಷ್ಟು ಕಲಿತಿದ್ದೀನಿ ಎಂದಿದ್ದಾರೆ.

ಚೇತನ್ ಮಾತನಾಡಿ ಫೆಬ್ರವರಿಯಲ್ಲಿ ಬರೋದೆ 28 ದಿನ. ಆದ್ರೆ ಈ ಸಿನಿಮಾಗೆ ಫೆಬ್ರವರಿ 30 ಅಂತಾನೇ ಯಾಕಿಟ್ವಿ ಅಂದ್ರೆ ಅದಕ್ಕೊಂದು ಒಳ್ಳೆ ಕಾರಣವೂ ಇದೆ. ನಿರ್ದೇಶಕರು ಬಂದು ನಮ್ಮ ಬಳಿ ಒಂದಷ್ಟು ಮಾಹಿತಿಯನ್ನ ಹಂಚಿಕೊಂಡಿದ್ದಾರ ಎಂದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin