Nenapugala Maatu Madhura Movie Review: ಸ್ನೇಹಿತರ ಕಥೆಗೆ ಪ್ರೀತಿ,ಕಾಮದ ಲೇಪನ ಹಚ್ಚಿರುವ ಚಿತ್ರ
ಚಿತ್ರ: ನೆನಪುಗಳ ಮಾತುಮಧುರ
ನಿರ್ದೇಶನ : ಅಫ್ಜಲ್
ತಾರಾಗಣ: ಅಫ್ಜಲ್, ರೆಡ್ ಅಂಡ್ ವೈಟ್ ಸೆವೆನ್ ರಾಜ್, ವಸಿಷ್ಠ ಬಂಟನೂರು, ರಣವೀರ್, ರಾಜಪ್ರಭು, ವಿನಯ್, ಅಂಜಲಿ, ಸೌಮ್ಯ, ರೇಖಾ ರಮೇಶ್, ಶುಭ ತೀರ್ಥ, ವಾದ್ಯಾ, ಗುಬ್ಬಚ್ಚಿ, ನಾಗೇಂದ್ರ ಅರಸ್ ಮತ್ತಿತರರು
ರೇಟಿಂಗ್ : *** 3/5
ಕನ್ನಡದಲ್ಲಿ ಇತ್ತೀಚೆಗೆ ಬಗೆ ಬಗೆಯ ಕಂಟೆಂಟು ಇರುವ ಸಿನಿಮಾಗಳು ತೆರೆಗೆ ಬರುತ್ತಿವೆ, ಅದರ ಸಾಲಿಗೆ ಮತ್ತೊಂದು ಸೇರ್ಪಡೆ “ನೆನಪುಗಳ ಮಾತು ಮಧುರ”.
ನಿರ್ದೇಶಕ ಅಪ್ಜಲ್ ಸುಂದರವಾದ ಶೀರ್ಷಿಕೆ ಇಟ್ಟುಕೊಂಡು ಪ್ರೀತಿಗಿಂತ ಹೆಚ್ಚಾಗಿ ಕಾಮ, ಮೋಹದ ಸುತ್ತಲೇ ಸುತ್ತಿಸಿದ್ದಾರೆ, ಹೀಗಾಗಿ ಚಿತ್ರಕ್ಕೆ ನೆನಪುಗಳ ಮಾತುಮಧುರ ಎನ್ನುವುದಕ್ಕಿಂತ ಹೆಚ್ಚಾಗಿ ಕಾಮದ ಸುತ್ತ ಸಾಗುವ ಎನ್ನುವ ಶೀರ್ಷಿಕೆ ಇದ್ದಿದ್ದರೆ ಒಳ್ಳೆಯದಿತ್ತು.
ಒಂದೊಂದು ಕೆಲಸ ಮಾಡಿಕೊಂಡು ಬದುಕು ಸಾಗಿಸುವ ನಾಲ್ಕು ಹುಡುಗರ ಕಥೆಯನ್ನು ನಿರ್ದೇಶಕ ಅಪ್ಜಲ್, ಮೋಜು ಮಸ್ತಿಯನ್ನೇ ಬಂಡವಾಳವಾಗಿಸಿರಿಕೊಂಡು ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ. ನಾಲ್ಕು ಹುಡುಗರಾದ ದೇವ್, ವಿಮಲ್, ರೋಹಿತ್, ಮನೋಜ್ ಅನಿರೀಕ್ಷಿತವಾಗಿ ಹುಡುಗಿಯರ ಭೇಟಿ ಅವರದೊಂದಿಗೆ ಸರಸ ಸಲ್ಲಾಪದಲ್ಲಿ ಇಡೀ ಸಿನಿಮಾ ಕಳೆದುಹೋಗಿದೆ.
ಮದುವೆಯಾಗಿ ಹಣ ಪಡೆದು ಮದುವೆಯೂ ಆಗದೆ ಹಣ ತೀರಿಸಲಾಗದ ದೇವ್ ವೇಶ್ಯೆಯನ್ನಯ ಕರೆತಂದು ಮದುವೆಯಾಗಿದ್ದೇನೆ ಎಂದು ಸಾಲ ಪಡೆದವನಿಗೆ ಅಡವಿಡುವ ಕೆಲಸ, ಸೇರಿದಂತೆ ಕಾಮದ ಸುತ್ತಾ ಇಡೀ ಚಿತ್ರ ಸಾಗಿದೆ
ವಸಿಷ್ಠ ಬಂಟನೂರು, ರಣವೀರ್, ರಾಜಪ್ರಭು, ವಿನಯ್ ನಾಲ್ಕು ಹುಡುಗರು ಮತ್ತು ಅವರ ಬದುಕು, ಜೀವನ ಮತ್ತು ಹಿಂದೆ ನಡೆದ ಘಟನೆಗಳ ಅನಾವರ ಚಿತ್ರ. ನಾಲ್ಕು ಕತೆಗಳನ್ನು ಬೇರೆ ಬೇರೆ ಜಾನರ್‍ನಲ್ಲಿ ಹೇಳಿದ್ದರೆ ಚಿತ್ರದ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಬಹುದಿತ್ತು
ಜೊತೆಗೆ ನಿರ್ಮಾಪಕ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಪ್ರಮುಖ ಪಾತದಲ್ಲಿ ಕಾಣಿಸಿಕೊಂಡಿದ್ದು ಯುವಕರಿಗೆ ನಾನೇನು ಕಡಿಮೆ ಇಲ್ಲದಂತೆ ರೊಮಾನ್ಸ್ ಮಾಡಿದ್ದಾರೆ.ನೆನಪುಗಳ ಮಾತು ಮಧುರ ಎನ್ನವುದಕ್ಕಿಂತ ರೋಮಾನ್ಸ್ ಚಿತ್ರ.
ಹುಡುಗರ ಕಥಾ ಹಂದರದ ಜೊತೆಗೆ ಮರ್ಡರ್ ಮಿಸ್ಟ್ರಿ, ಹಾರರ್ , ಹಾಸ್ಯ, ಈಗಿನ ಕಾಲದ ಯುವಕರ ಜೀವನದಲ್ಲಿ ನಡೆಯುತ್ತಿರುವ ಕೆಲವು ವಿಭಿನ್ನ ವಿಷಯಗಗಳನ್ನು ನಿರ್ದೇಶಕ ಅಫ್ಜಲ್ ತೆರೆಗೆ ಕಟ್ಟಿಕೊಟ್ಟಿದ್ದಾರೆ
ಸ್ವಾಮಿ ಮೈಸೂರು ಛಾಯಾಗ್ರಹಣ, ರಾಜು ಎಮ್ಮಿಗನೂರು ಸಂಗೀತ ಚಿತ್ರಕ್ಕಿದೆ
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

