“’ರಾಜನಿವಾಸ” ಸಿನಿಮಾ ಏಪ್ರಿಲ್ನಲ್ಲಿ ತೆರೆಗೆ ಬರುವ ನಿರೀಕ್ಷೆ
ಭರವಸೆಯ ಕಲಾವಿದರಾದ ರಾಘವ್ ಮತ್ತು ಕೃತ್ತಿಕಾ ರವೀಂದ್ರ ನಾಯಕ ನಾಯಕಿಯರಾಗಿ ಕಾಣಿಸಿಕೊಂಡಿರುವ “ ರಾಜ ನಿವಾಸ” ಚಿತ್ರ ಎಲ್ಲಾ ಅಂದುಕೊಂಡಂತೆ ಆದರೆ ಏಪ್ರಿಲ್ನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಹೆಚ್ಚಾಗಿದೆ.

ದಾ. ಪಿ ಆಂಜನಪ್ಪ ಚಿತ್ರಕ್ಕೆ ಬಂಡವಾಳ ಹೂಡಿದ್ದು ಸಹ ನಿರ್ಮಾಪಕರಾಗಿ ಲೋಕೇಶ್ ಗೌಡ ಕೈಜೋಡಿಸಿದ್ದಾರೆ.ರಾಜ ನಿವಾಸಕ್ಕೆ ಮಿಥುನ್ ಸುವರ್ಣ ಆಕ್ಷನ್ ಕಟ್ ಹೇಳಿದ್ದಾರೆ.
ಈ ಕುರಿತು ನಿರ್ದೇಶಕ ಮಿಥುನ್ ಸುವರ್ಣ ಮಾತನಾಡಿ ರಾಜನಿವಾಸ ಟ್ರೇಲರ್ ಕಾಂತಾರದ ಝಲಕ್ನಂತೆ ಕಾಣಬಹುದು, ಕಾಂತಾರ ಚಿತ್ರ ಆರಂಭಕ್ಕೂ ಮುನ್ನ ನಾವು ಕತೆ ಮಾಡಿಕೊಂಡಿದ್ದೆವು, ತುಳುನಾಡು ಭಾಗದ ಕಥೆಯಾದ ಕಾರಣ ಸಹಜವಾಗಿ ಒಂದಷ್ಟು ಹೋಲಿಕೆಗಳು ಕಾಣುತ್ತವೆ. ಆದರೆ ಚಿತ್ರದಲ್ಲಿ ಬೇರೆಯೇ ಕಥೆ ಇದೆ ಎಂದು ಮಾಹಿತಿ ನೀಡಿದ್ದಾರೆ
ನಾಯಕ ರಾಘವ್ ಆಕ್ಷನ್ ಹಾಗು ಹಾಡಿನ ಸನ್ನಿವೇಶದಲ್ಲಿ ಗಮನ ಸೆಳೆದಿದ್ದಾರೆ.ರಾಜ ನಿವಾಸ ಮಾಸ್ ಸಿನಿಮಾ ಆಗುವ ಎಲ್ಲಾ ಭರವಸೆ ಮೂಡಿಸಿದೆ, ಚಿತ್ರದ ವಿಶೇಷ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದು ಚಿತ್ರದ ಮೇಲೆ ನಿರೀಕ್ಷೆ ಮೂಡಿಸಿದೆ.

ಚಿತ್ರದ ಟ್ರೇಲರ್ ಮತ್ತು ಮೂರು ಹಾಡುಗಳು ಈಗಾಗಲೇ ಸಿನಿಮಾ ಪ್ರಿಯರ ಮನಗೆದ್ದಿದೆ. ಟ್ರೇಲರ್ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಪ್ಯಾನ್ ಇಂಡಿಯಾದಲ್ಲಿ ನಿರೀಕ್ಷೆ ಸೃಷ್ಟಿಸಿದೆ. ಸಿನಿಮಾರಂಗದ ಅನೇಕರು ರಾಜನಿವಾಸ ವರ್ಷದ ಅತ್ಯುತ್ತಮ ಚಿತ್ರವಾಗಲಿದೆ ಎನ್ನುವ ಭರವಸೆ ವ್ಯಕ್ತಪಡಿಸಿದ್ದಾರೆ
ನಿರ್ಮಾಪಕ ಡಾ.ಪಿ ಆಂಜನಪ್ಪ ಮಾತನಾಡಿ ಕನ್ನಡದ ದೊಡ್ಡ ವಿತರಕ ಸಂಸ್ಥೆಗಳು ಸಿನಿಮಾ ಬಿಡುಗಡೆಗೆ ಕೇಳುತ್ತಿದ್ದಾರೆ,ತಮಿಳು , ತೆಲುಗು ಭಾಷೆಯಲ್ಲೂ ಬೇಡಿಕೆ ಇದೆ ಎಂದಿದ್ಧಾರೆ
ಚಿತ್ರದಲ್ಲಿ ಬಲ ರಾಜ್ವಾಡಿ , ಯಮುನಾ ಶ್ರೀನಿಧಿ , ನೀನಾಸಂ ಅಶ್ವಥ್ , ಸಹನ , ಪ್ರಶಾಂತ್ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ವಿಜಯ್ ಯಾರ್ಡ್ಲಿ ಸಂಗೀತ. ಛಾಯಾಗ್ರಹಣ ರಮೇಶ್ ರಾಜ್ ಛಾಯಾಗ್ರಹಣವಿದೆ.


