ಮಿಲನಾ ಮತ್ತು ಡಾಲಿಂಗ್ ಕೃಷ್ಣ ತಾರಾ ದಂಪತಿಯ “ಲವ್ ಮಾಕ್ಟೇಲ್-3” ಬಿಡುಗಡೆಗೆ ಸಜ್ಜು
ಚಂದನವನದ ತಾರಾ ದಂಪತಿ ಮಿಲನಾ ಮತ್ತು ಡಾಲಿಂಗ್ ಕೃಷ್ಣ ಅವರ “ಲವ್ ಮಾಕ್ಟೇಲ್” ಸರಣಿಯ ಮುಂದುವರಿದ ಭಾಗ -3 ಮಾರ್ಚ್ 19 ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಜ್ಜಾಗಿದೆ, ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡಿದೆ.

ಕನ್ನಡದ ಮಟ್ಟಿಗೆ ಹೇಳುವುದಾದರೆ ಚಿತ್ರದ ಸರಣಿ ಒಂದು ಎರಡು ಭಾಗ ಬರುವುದು ಸಾಮಾನ್ಯ. ಕೃಷ್ಣ ದಂಪತಿ ಲವ್ ಮಾಕ್ಟೈಲ್ ಚಿತ್ರದ ಭಾಗ -3 ನಿರ್ಮಾಣ ಮಾಡಿ ಬಿಡುಗಡೆಗೆ ಅಣಿಗೊಳಿಸಿದ್ದಾರೆ, ಭಾಗ-4 ಬರುತ್ತದೇ ಸದ್ಯದ ಮಟ್ಟಿಗೆ ಕುತೂಹಲದ ಸಂಗತಿ.
“ಲವ್ ಮಾಕ್ಟೇಲ್” ಮೊದಲ ಆವೃತ್ತಿಯ ಟ್ರೈಲರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆಗೊಳಿಸಿದ್ದರು. ಎರಡನೇ ಆವೃತ್ತಿಯ ಟ್ರೈಲರ್ ಕ್ರೇಜಿಸ್ಟಾರ್ ರವಿಚಂದ್ರನ್ ಇದೀಗ , ಮೂರನೇ ಭಾಗದ ಚಿತ್ರದ ಈ ಟ್ರೈಲರ್ ಅನ್ನು ಡಾರ್ಲಿಂಗ್ ಕೃಷ್ಣ ಮಿಲನಾ ಪುತ್ರಿ ಪರಿ ಬಿಡುಗಡೆ ಮಾಡಿರುವುದು ಚಿತ್ರದ ವಿಶೇಷ.
ಟ್ರೈಲರ್ ಬಿಡುಗಡೆ ವೇಳೆ ಚಿತ್ರಕ್ಕೆ ಹಾಡು ಬರೆದಿರುವ ಶಶಾಂಕ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಸುಪ್ರೀತ್ ಆಗಮಿಸಿ ಚಿತ್ರಕ್ಕೆ ಶುಭ ಹಾರೈಸಿದರು.
ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮಾತನಾಡಿ `ಯಾವುದೋ ಕ್ಷಣದಲ್ಲಿ ಸಿನಿಮಾದ ಒಂದೆಳೆ ಕಥೆ ಹೊಳೆಯಿತು. ಅದರ ಗುಂಗುಹತ್ತಿಸಿಕೊಂಡ ನಂತರ ಮನೆಯಲ್ಲಿ ಕಥೆ ಬರೆಯಲು ಸಾಧ್ಯವಿಲ್ಲವೆನ್ನಿಸಿ ಮೂರು ದಿನಗಳ ಕಾಲ ಗೋವಾಕ್ಕೆ ಹೋಗಿದ್ದೆ. ಅಲ್ಲಿಯೇ ಕಥೆ ಚಿತ್ರಕಥೆಗೊಂದು ರೂಪುರೇಷೆ ಕೊಟ್ಟು ಮತ್ತೆ ಮರಳಿದ್ದೆ ಮಾರ್ಚ್ 19 ರಂದು ಚಿತ್ರ ಬಿಡುಗಡೆಯಾಗುತ್ತಿz. ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬರ ಪಾತ್ರವೂ ಚೆನ್ನಾಗಿ ಮೂಡಿಬಂದಿದೆ ಎಂದು ಮಾಹಿತಿ ನೀಡಿದರು.

ನಿರ್ಮಾಪಕಿ ಮಿಲನಾ ನಾಗರಾಜ್ ಮಾತನಾಡಿ ಎಲ್ಲರೂ ಇಷ್ಟೊಂದು ಆತ್ಮವಿಶ್ವಾಸದಿಂದ ದೊಡ್ಡ ಸಿನಿಮಾದ ಮುಂದೆ ತೆರೆಗಾಣಲು ಸಿದ್ಧವಾದ ಬಗ್ಗೆ ಅಚ್ಚರಿಯಿಂದ ಪ್ರಶ್ನಿಸುತ್ತಿದ್ದಾರೆ. ಅದಕ್ಕೆ ಕಾರಣ ಸಿನಿಮಾ ಮೂಡಿ ಬಂದಿರುವ ಪರಿ.ಈ ಹಿಂದಿನ ಎರಡು ಸರಣಿಗಳಿಗೆ ಕೊಟ್ಟಷ್ಟೇ ಪ್ರೀತಿ, ಪ್ರೋತ್ಸಾಹ ಕೊಡುತ್ತಾರೆಂಬ ನಂಬಿಕೆ ಇದೆ’ ಎಂದರು.
ನಟಿಯರಾದ ಅಮೃತಾ ಅಯ್ಯಂಗಾರ್, ರೆಚೆಲ್ ಡೇವೀಡ್, ಶ್ವೇತಾ ಪ್ರಸಾದ್ , ನಟ ದಿಲೀಪ್ ರಾಜ್, ಮುಂತಾದವರು ಈ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿ ಅವಕಾಶ ದಕ್ಕಿದ ಬಗ್ಗೆ ಡಾಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.
ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಚಿತ್ರಕ್ಕಿದೆ.


