"Premi" directed by Pradeep Varma releases on April 3rd

ಪ್ರದೀಪ್ ವರ್ಮಾ ನಿರ್ದೇಶನದ “ಪ್ರೇಮಿ” ಏಪ್ರಿಲ್ 3 ರಂದು ಬಿಡುಗಡೆ - CineNewsKannada.com

ಪ್ರದೀಪ್ ವರ್ಮಾ ನಿರ್ದೇಶನದ “ಪ್ರೇಮಿ” ಏಪ್ರಿಲ್ 3 ರಂದು ಬಿಡುಗಡೆ

“ಪ್ರೇಮಿ” ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ, ನಿರ್ಮಾಪಕ ಭಾ.ಮ.ಹರೀಶ್, ನಿರ್ದೇಶಕ ಸತ್ಯ ಹಾಗೂ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ,ನೃತ್ಯ ನಿರ್ದೇಶಕ ಟಗರು ರಾಜು ಮಾಸ್ಟರ್ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಬಿ.ಸಿದ್ದಲಿಂಗಯ್ಯ ನಿರ್ಮಿಸಿ ಹಾಗೂ ಎಸ್ ಪ್ರದೀಪ್ ವರ್ಮ ನಿರ್ದೇಶಿಸಿರುವ ಹಾಗೂ ಅದ್ವಿಕ್ ನಾಯಕನಾಗಿ ನಟಿಸಿದ್ದಾರೆ. ಚಿತ್ರ ಏಪ್ರಿಲ್ 3 ರಂದು ಬಿಡುಗಡೆಯಾಗುತ್ತಿದೆ.

ನಿರ್ದೇಶಕ ಪ್ರದೀಪ್ ಮಾತನಾಡಿ ಸಂಗೀತ ನಿರ್ದೇಶಕನಾಗಿ ಚಿತ್ರಕ್ಕೆ ಬಂದು ನಿರ್ದೇಶಕನಾದೆ. ನಾಯಕ ಅದ್ವಿಕ್ ತಾಯಿ ಅಕ್ಕಮಹಾದೇವಿ ಕಥೆ ಬರೆದಿದ್ದಾರೆ. ಚಿತ್ರಕಥೆ ಬರೆದಿದ್ದೇನೆ. 90 ರ ದಶಕದ ಪ್ರೇಮಕಥೆ ಇದು. 80 ರಿಂದ 90ರ ಪ್ರೀತಿಯೇ ಬೇರೆ. ಈಗಿನ ಪ್ರೀತಿಯೇ ಬೇರೆ. ಇದೇ ಚಿತ್ರದ ಪ್ರಮುಖ ಕಥಾಹಂದರ. ಚಿತ್ರತಂಡದ ಸದಸ್ಯರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಏಪ್ರಿಲ್ 3 ರಂದು ಚಿತ್ರ ಬಿಡುಗಡೆಯಾಗುತ್ತಿದೆ ಎಂದರು

ನಾಯಕ ಅದ್ವಿಕ್ ಮಾತನಾಡಿ ಕಳೆದ ಕೆಲವು ವರ್ಷಗಳಿಂದ ಕೆಲವು ಚಿತ್ರಗಳಲ್ಲಿ ನಟಿಸಿದ್ದೇನೆ. ನಾಯಕನಾಗಿ ಮೊದಲ ಚಿತ್ರ. ನಾಯಕನಾಗಲು ಬೇಕಾದ ಎಲ್ಲಾ ತಯಾರಿ ಮಾಡಿಕೊಂಡು ಚಿತ್ರದಲ್ಲಿ ಅಭಿನಯಿಸಿದ್ದೇನೆ. ತಂದೆ ನಿರ್ಮಾಣ ಮಾಡಿದ್ದಾರೆ. ಸುಂದರ ಪ್ರೇಮ ಕಥಾನಕವನ್ನು ಪ್ರದೀಪ್ ವರ್ಮ ಮನ ಮುಟ್ಟುವಂತೆ ನಿರ್ದೇಶನ ಮಾಡಿದ್ದಾರೆ. ಸಾತ್ವಿಕ ಹಾಗೂ ಶೋಭಿತ ನಾಯಕಿಯರಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕ ವೀರೇಶ್ ಎರೆಕುಪ್ಪಿ ಹಾಗೂ ಲೈನ್ ಪ್ರೊಡ್ಯೂಸರ್ ಹರೀಶ್ ಉಕ್ಕಡಗಾತ್ರಿ ಕೈಜೋಡಿಸಿದ್ದಾರೆ ಎಂದು ಹೇಳಿದರು

ನಿರ್ಮಾಪಕ ಸಿದ್ದಲಿಂಗಯ್ಯ ಮಾತನಾಡಿ ಸಿನಿಮಾ ರಂಗ ಹೊಸತು. ಮಗನಿಗಾಗಿ ಸಿನಿಮಾ ನಿರ್ಮಾಣ ಮಾಡಿರುವುದಾಗಿ ಹೇಳಿದರು.

ಎರಡನೇ ನಾಯಕಿ ಶೋಭಿತ, ಕಲಾವಿದರಾದ, ದ್ವಿತ ಗೌಡ, ಸಂತೃಪ್ತಿ, ಹರ್ಷಿತಾ, ನೃತ್ಯ ನಿರ್ದೇಶಕ ರಾಜು ಮಾಸ್ಟರ್ ಹಾಗೂ ವಿತರಕ ಬಸಪ್ಪ ಮುಂತಾದವರು “ಪ್ರೇಮಿ” ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin