KV Satyaprakash invests in director PC Shekhar's film: Actor Mitra joined hands

ನಿರ್ದೇಶಕ ಪಿಸಿ ಶೇಖರ್ ಸಿನಿಮಾಗೆ ಕೆವಿ ಸತ್ಯಪ್ರಕಾಶ್ ಬಂಡವಾಳ: ಕೈಜೋಡಿಸಿದ ಮಿತ್ರ - CineNewsKannada.com

ನಿರ್ದೇಶಕ ಪಿಸಿ ಶೇಖರ್ ಸಿನಿಮಾಗೆ ಕೆವಿ ಸತ್ಯಪ್ರಕಾಶ್ ಬಂಡವಾಳ: ಕೈಜೋಡಿಸಿದ ಮಿತ್ರ

ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ ಪಿಸಿ ಶೇಖರ್ ನಿರ್ದೇಶನದ ಹೊಸ ಸಿನಿಮಾಗೆ ‘ಲ್ಯಾಂಡ್‍ಲಾರ್ಡ್’ ನಿರ್ಮಾಪಕ ಕೆವಿ ಸತ್ಯಪ್ರಕಾಶ್ ಬಂಡವಾಳ ಹೂಡಲು ಮುಂದಾಗಿದ್ದು ಯುಗಾದಿ ಹಬ್ಬಕ್ಕೆ ಹೊಸ ಸಿನಿಮಾ ಘೋಷಣೆಯಾಗಲಿದೆ

PC Shekar

ರಾಗಾ, ರೊಮಿಯೋ ಅಂತಹ ಅದ್ಭುತ ಸಿನಿಮಾ ನೀಡಿರುವ ನಿರ್ದೇಶಕ ಪಿಸಿ ಶೇಖರ್ ಇದೀಗ ತಮ್ಮ 12ನೇ ಸಿನಿಮಾ ನಿರ್ದೇಶನ ಮಾಡಲು ತಯಾರಾಗಿದ್ದಾರೆ. ಈ ಬಾರಿ ಪಿಸಿ ಶೇಖರ್ ಗೆ ಸಾರಥಿ, ಲ್ಯಾಂಡ್‍ಲಾರ್ಡ್ ಸಿನಿಮಾ ನಿರ್ಮಾಪಕ ಕೆವಿ ಸತ್ಯಪ್ರಕಾಶ್ ಜೊತೆ ಕೈ ಜೋಡಿಸಿದ್ದಾರೆ.

ಈಗಾಲೇ ಸಿನಿಮಾದ ಎಲ್ಲಾ ತಾಯಾರಿಗಳು ಮುಗಿದಿದ್ದು ಇನ್ನೇನು ಚಿತ್ರ ಸೆಟ್ಟೇರಬೇಕಿದೆ. ಸದ್ಯ ಮಹಾನ್ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಇರುವ ಪಿಸಿ ಶೇಖರ್ ಆ ಸಿನಿಮಾ ರಿಲೀಸ್‍ಗೂ ಮೊದಲೇ ಮತ್ತೊಂದು ಸಿನಿಮಾಗೆ ಸಜ್ಜಾಗಿದ್ದಾರೆ.

ನಿರ್ದೇಶಕ ಪಿಸಿ ಶೇಖರ್ ಮಾಹಿತಿ ನೀಡಿ ದೊಡ್ಡ ಮಟ್ಟದಲ್ಲಿ ಸಿನಿಮಾ ತಯಾರಾಗಲಿದೆ ಸಾರಥಿ, ಲ್ಯಾಂಡ್‍ಲಾರ್ಡ್ ಅಂತ ದೊಡ್ಡ ಸಿನಿಮಾಗಳನ್ನು ಮಾಡಿರುವ ನಿರ್ಮಾಪಕರು ಅವಕಾಶ ಕೊಟ್ಟಿದ್ದು ತುಂಬಾ ಖುಷಿಯಾಗುತ್ತೆ. ಸದ್ಯದಲ್ಲೇ ಸಿನಿಮಾದ ಶೀರ್ಷಿಕೆ, ತಾರಾಗಣದ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು

KV Satya Prakash

ಇನ್ನೊಂದು ವಿಶೇಷ ಎಂದರೆ ಕೆವಿ ಸತ್ಯಪ್ರಕಾಶ್ ಹಾಗೂ ಪಿಸಿ ಶೇಖರ್ ಅವರ ಗೆಳೆಯ ನಟ ನಿರ್ಮಾಪಕ ಮಿತ್ರ ಅವರು ಈ ಸಿನಿಮಾದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪಿಸಿ ಶೇಖರ್ ರಾಗಾದಲ್ಲಿ ಮಿತ್ರ ಹೀರೋ ಆಗಿ ಕಾಣಿಸಿಕೊಂಡಿದ್ದರು. ಆದರೆ ಸಿನಿಮಾದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕ್ಯಾಮರಾ ಹಿಂದೆ ಕೆಲಸ ಮಾಡುತ್ತಿರುವುದು ವಿಶೇಷ..

ರಾಗಾ ಸಿನಿಮಾದಲ್ಲಿ ನಟ ಮಿತ್ರ ಮತ್ತು ಪಿಸಿ ಶೇಖರ್ ಕಾಂಬಿನೇಷನ್ ತುಂಬಾ ಚೆನ್ನಾಗಿ ವರ್ಕೌಟ್ ಆಗಿತ್ತು. ಹಾಗಾಗಿ ಇದೀಗ ಮತ್ತೆ ಒಟ್ಟಿಗೆ ಸೇರಿರುವುದರಿಂದ ಸಿನಿಮಾದ ಮೇಲು ನಿರೀಕ್ಷೆ ಹೆಚ್ಚಾಗಿದೆ. ಸದ್ಯದಲ್ಲೇ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ ಸಿನಿಮಾತಂಡ.

Mitra

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin