‘ಕೃಷ್ಣ ಎನಬಾರದೆ’ ಬಿಡುಗಡೆ: ಸಂಸ್ಕೃತಿ ಮತ್ತು ಆಧುನಿಕ ತಂತ್ರಜ್ಞಾನದ ಅಪೂರ್ವ ಸಂಗಮ.
ಹೊಂಬಾಳೆ ಸಂಸ್ಥೆ “ಕೃಷ್ಣ ಎನಬಾರದೇ” ಎಂಬ ಮ್ಯೂಸಿಕ್ ವಿಡಿಯೊ ಬಿಡುಗಡೆ ಮಾಡಿದೆ. ಇದು ಕೇವಲ ಹಾಡಲ್ಲ, ನಮ್ಮ ಸಂಸ್ಕೃತಿ ಮತ್ತು ಆಧುನಿಕ ತಂತ್ರಜ್ಞಾನದ ಅಪೂರ್ವ ಸಂಗಮ.

ಸಾಂಪ್ರದಾಯಿಕ ಪುರಾಣ ಕಥೆಗಳಿಗೆ ಕಲ್ಪನಾತೀತ ‘ಫ್ಯೂಚರಿಸ್ಟಿಕ್’ ಸ್ಪರ್ಶ ನೀಡಲಾಗಿದೆ. ಇದರಲ್ಲಿ ಕಲ್ಕಿ ಅವತಾರದ ಕೃಷ್ಣ ಹಾಗೂ ಪ್ರಸಿದ್ಧ ಕಾಳಿಂಗ ಮರ್ದನ ಪ್ರಸಂಗಗಳನ್ನು ಅತ್ಯಾಧುನಿಕ ವಿಎಫ್‍ಎಕ್ಸ್ ತಂತ್ರಜ್ಞಾನದ ಮೂಲಕ ತೆರೆಯ ಮೇಲೆ ತರಲಾಗಿದೆ. ಹಳೆಯ ಬೇರು ಹೊಸ ಚಿಗುರು ಎಂಬಂತೆ, ಪುರಾಣಗಳನ್ನು ಇಂದಿನ ಪೀಳಿಗೆಗೆ ಹತ್ತಿರವಾಗುವಂತೆ ಇಲ್ಲಿ ಚಿತ್ರಿಸಲಾಗಿದೆ.
ಕೃಷ್ಣ ಭೂಮಿಯ ಮೇಲೆ ಕಳೆದ 125 ವರ್ಷಗಳ ಸಂಕೇತ ಹಾಗೂ ಶ್ರೀರಾಮನ ಜನ್ಮ ಸಮಯವಾದ ಮಧ್ಯಾಹ್ನದ ಮುಹೂರ್ತಕ್ಕೆ ಹೊಂದಿಕೆಯಾಗುವಂತೆ ಯೋಜಿಸಲಾಗಿದೆ.
ಅನಿರುದ್ಧ ಶಾಸ್ತ್ರಿ ಸಂಗೀತ ಸಂಯೋಜನೆ ಮತ್ತು ನಿರ್ವಹಣೆ ಮಾಡಿದ್ದಾರೆ.ಖ್ಯಾತ ಗಾಯಕ ವಿಜಯ್ ಪ್ರಕಾಶ್, ಅನಿರುದ್ಧ ಶಾಸ್ತ್ರಿ ಮತ್ತು ನರಹರಿ ಆಚಾರ್ ಹಾಡಿದ್ದಾರೆ
ಮೇಘರಾಜ್ ಮತ್ತು ಸುನೀತ್ ಶೆಟ್ಟಿ ಕ್ರಿಯೇಟಿವ್ ಡೈರೆಕ್ಷನ್‍ನಲ್ಲಿ, ಅಸ್ತ್ರ ಸ್ಟುಡಿಯೋಸ್ ದೃಶ್ಯಗಳನ್ನು ಸಿದ್ಧಪಡಿಸಿದೆ.ಭಾರತೀಯ ಪುರಾಣಗಳನ್ನು ಜಾಗತಿಕ ಮಟ್ಟದ ಗುಣಮಟ್ಟದಲ್ಲಿ ಕಟ್ಟಿಕೊಡುವ ಹೊಂಬಾಳೆ ಸಂಸ್ಥೆಯ ಈಪ್ರಯತ್ನಕ್ಕೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

