ಡಾ.ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ “ಪುನೀತ್ ನಿವಾಸ” ಬಿಡುಗಡೆ
ಪುನೀತ್ ರಾಜ್ ಕುಮಾರ್ ಕನ್ನಡಿಗರ ಆರಾಧ್ಯ ದೈವ, ಪುನೀತ್ ಆದರ್ಶಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ‘ಪುನೀತ್ ನಿವಾಸ’ ಕಟ್ಟಿದ ಬಡ ಅಭಿಮಾನಿಯೊಬ್ಬನ ಕಥೆಂ ಹೇಳುವ ಚಿತ್ರ “ಪುನೀತ್ ನಿವಾಸ” ಏಪ್ರಿಲ್ 24ರಂದು ಡಾ.ರಾಜ್ ಕುಮಾರ್ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ.

ಪುನೀತ್ ಅಪ್ಪಟ ಅಭಿಮಾನಿಯೂ ಆದ ಎಸ್.ಮೋಹನ್ ಚಿತ್ರ ನಿರ್ಮಿಸಿದ್ದಾರೆ. ಚಿತ್ರಕ್ಕೆ ನಾಗೇಂದ್ರ ಪ್ರಸಾದ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡ ರಾಜು ಇಡೀ ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.
ಪುನೀತ್, ಅಪ್ಪಟ ಅಭಿಮಾನಿ ಮಲ್ಲು ಅನಾಥ ಹುಡುಗ. ಕಟ್ಟಡ ಕೂಲಿ ಕೆಲಸ ಮಾಡಿಕೊಂಡಿದ್ದ, ಆತ ತನ್ನ ಮಾಲೀಕನ ಮನೆ ಸೇಲ್ ಮಾಡಿಸಿಕೊಡುತ್ತಾನೆ. ಆಗ ಮಾಲೀಕ ನೀಡಿದ 5 ಲಕ್ಷ ಕಮೀಷನ್ ಹಣದಲ್ಲಿ ಕನಸಿನ ಪುನೀತ್ ನಿವಾಸವನ್ನು ನಿರ್ಮಿಸುತ್ತಾನೆ. ನಂತರ ಪುನೀತ್ ನಿವಾಸದ ಒಳಗೆ ಬಂದಾಗ ಅಲ್ಲಿ ಆತನಿಗೆ ಪುನೀತ್ ಅವರೇ ಕಾಣಿಸ್ತಾರೆ. ಹೇಗೆ ಕಾಣಿಸುತ್ತಾರೆ ಅನ್ನೋದೇ ಚಿತ್ರದ ಕುತೂಹಲ.
ಅಲ್ಲೇ ತಾನೊಂದು ಸಿನಿಮಾ ಮಾಡಬೇಕೆಂದು ಹೊರಟ ಆತ ಸಿನಿಮಾ ಮಾಡಿದನೇ, ಇಲ್ಲವೇ, ಪುನೀತ್‍ರ ಆದರ್ಶಗಳನ್ನೇ ಪಾಲಿಸಿಕೊಂಡು ಬಂದ ಆತನ ಕನಸು ನನಸಾಯಿತೇ ಇಲ್ಲವೇ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ
ನಿರ್ಮಾಪಕ ಎಸ್. ಮೋಹನ್ ಕೂಡ ರಾಜ್‍ಕುಮಾರ್, ಪುನೀತ್ ಆದರ್ಶಗಳಿಂದ ಪ್ರೇರಿತರಾದವರು. ಶೀರ್ಷಿಕೆಗಾಗಿಯೇ ಅವರು 50 ಕಥೆಗಳನ್ನು ಮಾಡಿಕೊಂಡಿದ್ದಾರೆ, ಕೊನೆಗೆ ಈ ಕಥೆ ಸೂಕ್ತ ಎಂದು ಫೈನಲ್ ಮಾಡಿದ್ದಾರೆ. ಪುನೀತ್ ನಿವಾಸದ ಒಳಗೆ ಬಂದಾಗ ಅಲ್ಲಿ ಪುನೀತ್ ಅವರೇ ಕಾಣಿಸುತ್ತಾರೆ.
ಹಣ ಕೂಡಿಟ್ಟುಕೊಂಡಿದ್ದ ಒಬ್ಬ ಬಡ ಹುಡುಗ ಕೊನೆಗೆ ತನ್ನ ಕನಸಿನ ಚಿತ್ರವನ್ನು ಹೇಗೆ ನಿರ್ಮಿಸುತ್ತಾನೆ ಅನ್ನೋದೇ ಕಥಾಹಂದರ, ಈ ಚಿತ್ರಕ್ಕಾಗಿ ಕೆಲವು ದೃಶ್ಯಗಳನ್ನು ಸೆಟ್ ನಲ್ಲೇ ನಾನು, ನಿರ್ದೇಶಕರು ಸೇರಿ ರೆಡಿ ಮಾಡಿಕೊಂಡಿದ್ದೆವು ಎಂದು ನಿರ್ಮಾಪಕ ಮೋಹನ್ ಹೇಳಿಕೊಂಡಿದ್ದಾರೆ,
ಪ್ರಮುಖ ಪಾತ್ರದಲ್ಲಿ ಹಿರಿಯ ನಟ ಅಭಿಜಿತ್ ಕಾಣಿಸಿಕೊಂಡಿದ್ದಾರೆ. ಪುನೀತ್‍ರ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ನಿರ್ಮಾಪಕ ಮೋಹನ್ ಚಿತ್ರೀಕರಣಕ್ಕಾಗಿ ನಿಜವಾದ ಮನೆಯನ್ನೇ ಕಟ್ಟಿಸಿದ್ದಾರೆ. ಮಲ್ಲು ಪಾತ್ರದಲ್ಲಿ ಮಾಸ್ಟರ್ ವಿಠ್ಠಲ್ ಕಾಣಿಸಿಕೊಂಡಿದ್ದಾರೆ, ಹಿರಿಯನಟ ಶಂಕರ್ ಭಟ್, ಗಂಡಸಿ ಸದಾನಂದಸ್ವಾಮಿ, ಕರಿಸುಬ್ಬು ಶ್ರೇಯಸ್, ಐಶ್ವರ್ಯ, ಎಂ.ಎಸ್. ಉಮೇಶ್, ಡಿಂಗ್ರಿ ನಾಗರಾಜ್, ಟೆನ್ನಿಸ್ ಕೃಷ್ಣ, ರೇಖಾದಾಸ್, ಗಣೇಶ್‍ರಾವ್ ಕೇಸರಕರ್ ಹಾಗೂ ಇತರರು ಪುನೀತ್ ನಿವಾಸ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಎಸ್, ಬಾಲು ಛಾಯಾಗ್ರಹಣ, ಎಂ.ಎನ್. ಕೃಪಾಕರ್ ಸಂಗೀತ ನಿರ್ದೇಶನ, ಜೆಮ್ ಶಿವು ಸಂಭಾಷಣೆ, ಮುತ್ತುರಾಜ್ ಸಂಕಲನ ಈ ಚಿತ್ರಕ್ಕಿದೆ.

