Chandanavan Special Jury Award for the film `Mouna Raaga`

`ಮೌನಾ ರಾಗ’ ಚಿತ್ರಕ್ಕೆ ಚಂದನವನ ವಿಶೇಷ ಜ್ಯೂರಿ ಪ್ರಶಸ್ತಿ - CineNewsKannada.com

`ಮೌನಾ ರಾಗ’ ಚಿತ್ರಕ್ಕೆ ಚಂದನವನ ವಿಶೇಷ ಜ್ಯೂರಿ ಪ್ರಶಸ್ತಿ

ಪತ್ರಕರ್ತೆ ಹಾಗೂ ನಿರ್ದೇಶಕಿ ಸುನಯನಾ ಸುರೇಶ್ ಮೊದಲ ಚಿತ್ರ ಮೌನಾ ರಾಗಕ್ಕಾಗಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2026 ನಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದಿದ್ದಾರೆ.

ಈ ಸಾಧನೆ ಪತ್ರಿಕೋದ್ಯಮದಿಂದ ಚಿತ್ರರಂಗದತ್ತ ನಡೆದ ಮಹತ್ವದ ಬದಲಾವಣೆ ಸೂಚಿಸುವುದರ ಜೊತೆಗೆ, ಕನ್ನಡ ಸಿನೆಮಾದಲ್ಲಿ ಹೊಸ ಧ್ವನಿಯಾಗಿ ಸ್ಥಾನ ದೃಢಪಡಿಸಿದೆ.

ಸುನಯನಾ ಸುರೇಶ್ ಮಾತನಾಡಿ ಮೊದಲ ಚಿತ್ರರಂಗದ ಹೆಜ್ಜೆಗೆ ವಿಮರ್ಶಕರಿಂದ ದೊರೆತ ಮಾನ್ಯತೆ ಎಂಬುದರಿಂದ ತುಂಬಾ ವಿಶೇಷವಾಗಿದೆ. ಚಂದನವನಾ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್‍ನಲ್ಲಿ `ಮೌನಾ ರಾಗ’ ಚಿತ್ರದಿಗಾಗಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದಿರುವುದು ನನಗೆ ವಿನಮ್ರತೆಯ ಅನುಭವ ನೀಡಿದೆ.ಪ್ರಯಾಣದ ಆರಂಭದಂತೆ ಭಾಸವಾಗುತ್ತಿದೆ. ನಾನು ಪ್ರೀತಿಸುವ ಮತ್ತು ಗೌರವಿಸುವ ಸಿನೆಮಾ ಮತ್ತು ಮಾಧ್ಯಮ ಕ್ಷೇತ್ರದ ಜನರ ಮಧ್ಯೆ ಈ ಕ್ಷಣವನ್ನು ಅನುಭವಿಸುವುದು ಅತ್ಯಂತ ವಿಶೇಷವಾಗಿತ್ತು. ಎಂದಿದ್ದಾರೆ

ಈ ಸಾಧನೆ ನನ್ನ ಪ್ರತಿಭಾವಂತ ತಂಡದ ನಂಬಿಕೆ ಮತ್ತು ಪರಿಶ್ರಮದಿಂದ ಸಾಧ್ಯವಾಗಿದೆ. ನನ್ನ ಕುಟುಂಬವು ನನಗೆ ಕನಸು ಕಾಣುವ ಧೈರ್ಯ ನೀಡಿದ ಕಾರಣ ಮೌನಾ ರಾಗ ಚಿತ್ರದ ಮೂಲಕ ಸುನಯನಾ ಸುರೇಶ್ ಭರವಸೆಯ ನಿರ್ದೇಶಕಿಯಾಗಿ ಹೊರಹೊಮ್ಮಿದ್ದು, ಪ್ರಶಸ್ತಿ ಅವರ ಮುಂದಿನ ಸಿನೆಮಾ ಪಯಣಕ್ಕೆ ಪ್ರಮುಖ ಮೆಟ್ಟಿಲಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin