Golden Star Ganesh celebrates 20 years of cinematic journey
ಗೋಲ್ಡನ್ ಸ್ಟಾರ್ ಗಣೇಶ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ
ನಟನಾಗಿ ಕನ್ನಡಿಗರ ಮನ ಗೆದ್ದಿರುವ ಗೋಲ್ಡನ್ ಸ್ಟಾರ್ ನಾಯಕರಾಗಿ ನಟಿಸಿದ್ದ ಮೊದಲ ಚಿತ್ರ “ಚೆಲ್ಲಾಟ” ಬಿಡುಗಡೆಯಾಗಿ ಏಪ್ರಿಲ್ 21ಕ್ಕೆ ಇಪ್ಪತ್ತು ವರ್ಷಗಳಾಗಿದೆ. ಎಂ.ಡಿ.ಶ್ರೀಧರ್ ಚಿತ್ರ ನಿರ್ದೇಶಿಸಿದ್ದರು. ಈ ಮೂಲಕ ಗಣೇಶ್ ನಾಯಕರಾಗಿ ಚಿತ್ರರಂಗ ಪ್ರವೇಶಿಸಿ ಇಪ್ಪತ್ತು ವರ್ಷಗಳಾಗಿದೆ.

ಅದೇ ವರ್ಷ ಗಣೇಶ್ ಅಭಿನಯದ ಕನ್ನಡದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ “ಮುಂಗಾರು ಮಳೆ” ಸಹ ಬಿಡುಗಡೆಯಾಗಿ, ಭರ್ಜರಿ ಯಶಸ್ಸು ಕಂಡಿತ್ತು. ಆನಂತರ “ಗಾಳಿಪಟ”, ” ಚೆಲುವಿನ ಚಿತ್ತಾರ”, “ಕೃಷ್ಣ” ದಿಂದ ಹಿಡಿದು ಇತ್ತೀಚೆಗೆ ತೆರೆಕಂಡ “ಕೃಷ್ಣಂ ಪ್ರಣಯ ಸಖಿ”ವರೆಗೂ ಸಾಕಷ್ಟು ಹಿಟ್ ಚಿತ್ರಗಳ ಮೂಲಕ ಅಭಿಮಾನಿಗಳನ್ನು ಗಣೇಶ್ ತಮ್ಮ ಅಮೋಘ ಅಭಿನಯದಿಂದ ರಂಜಿಸಿದ್ದಾರೆ.

ಗಣೇಶ್ ನಾಯಕರಾಗಿ ಇಪ್ಪತ್ತು ವರ್ಷಗಳು ಪೂರೈಸಿರುವ ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಮೆಚ್ಚಿನ ನಾಯಕನಿಗೆ ವಿಶೇಷ ಅಭಿನಂದನೆಗಳನ್ನು ತಿಳಿಸಿದ್ದಾರೆ.


