Xerox Web Series Review ; ಜೆರಾಕ್ಸ್ ಅಂಗಡಿ…ಯಂತ್ರ ಮತ್ತು ಅದರ ಸುತ್ತ ಸಾಗುವ ಕುತೂಹಲಕಾರಿ ಕಥನ ” ಝೆರಾಕ್ಸ್”.
ವೆಬ್ ಸರಣಿ ; ಝೆರಾಕ್ಸ್
ನಿರ್ದೇಶನ ; ಶ್ರೀನಿಧಿ ಬೆಂಗಳೂರು
ನಿರ್ಮಾಣ : ಡಾಲಿ ಧನಂಜಯ
ಪ್ರಸಾರ ವೇದಿಕೆ : ಜೀ 5
ತಾರಾಗಣ : ನಾಗಭೂಷಣ, ಪಾಯಲ್ ಚಂಗಪ್ಲ, ಅರುಣಾ ಬಾಲರಾಜ್, ಓಂ ಪ್ರಕಾಶ್ ರಾವ್, ವಿಜಯ ಪ್ರಸಾದ್, ಮಂಜು ಪಾವಗಡ, ತುಕಾಲಿ ಸಂತು, ಜಗ್ಗಪ್ಪ ಮತ್ತಿತರರು
ರೇಟಿಂಗ್ :**** 4/5
ಮಗಿ ಹೆಸರಲ್ಲಿ ಮಂತ್ರ ಮಾಡಿದ ತಾಯ್ತ ಅದು. ಸಿಗಲಿಲ್ಲ ಅಂದ್ರೆ ಕೇಡು ತಪ್ಪಿದ್ದಲ್ಲ…”
ಮಗನ ಸಮಸ್ಯೆ ಪರಿಹಾರಕ್ಕೆ ತಂದೆ – ತಾಯಿ ದೇವಾಲಯಕ್ಕೆ ಬಂದಾಗ ದೀಪವೇ ಆರಿ ಹೋಗುತ್ತದೆ. ಮಂತ್ರ ಮಾಡಿದ ಯಂತ್ರವೇ ಕಳಚಿ ಬೀಳುತ್ತದೆ. ಇಂತಹ ಸಮಯದಲ್ಲಿ ಪೂಜಾರಿ ಮಾತು ಕೇಳಿ ತಂದೆ ತಾಯಿ ಮತ್ತಷ್ಡು ಆತಂಕ್ಕೆ ಒಳಗಾಗುತ್ತಾರೆ.
ಎಲೆಕ್ಷನ್ ಮುಗಿದ ಮೇಲೆ ಚೆಲುವಣ್ಣ ಜಂಬೋ ಝೆರಾಕ್ಸ್ ಹಾಕಿಕೊಡ್ತೇನೆ ಎಂದಿದ್ದಾರೆ. ನೋಡ್ತಾ ಇರು ಹೇಂಗೆ ಬೆಳಿತೀನಿ ಅಂತ.. ಪ್ರಕಾಶ್ ತನ್ನ ಪ್ರಿಯಮತೆಗೆ ಭರವಸೆ.
ಮತ್ತೊಂದೆಡೆ ಗ್ರಾಮೀಣ ಬದುಕು, ರಾಜಕೀಯದ ಮೇಲಾಟ, ಸೇರಿದಂತೆ ವಿವಿಧ ವಿಷಯಗಳನ್ನು ವಾಸ್ತವ ನೆಲೆಗಟ್ಟಿನಲ್ಲಿ 6 ಸರಣಿಯ ಮೂಲಕ ಜನರ ಮುಂದಿಡಲಾಗಿದೆ. ಒಂದೊಂದು ಸರಣಿಯೂ ಕುತೂಹಲ ಮತ್ತು ಪ್ರೇಕ್ಷಕರ ಆಸಕ್ತಿ ಹೆಚ್ಚಿಸುವಂತೆ ಮಾಡಿದೆ.
ಝೆರಾಕ್ಸ್ ಅಂಗಡಿ ನಡೆಸುವ ಪ್ರಕಾಶ ( ನಾಗಭೂಷಣ) ಅದು ಕೆಟ್ಟು ಹೋಗಿ ದುಡಿಮೆ ಇಲ್ಲದಂತಾಗುತ್ತದೆ
ಆತನ ಪ್ರಿಯತಮೆ ಸುಜಿ ( ಪಾಯಲ್ ಚೆಂಗಪ್ಪ) ಮನೆಯಲ್ಲಿ ಹುಡುಗನ ನೋಡುತ್ತಾರೆ ಏನಾದರೂ ನಿರ್ದಾರ ತೆಗೆಕೊಳ್ಳುವಂತೆ ಒತ್ತಡ ಹಾಕ್ತಾಳೆ.
ಡೊಡ್ಡಪ್ಪ ( ಓಂ ಪ್ರಕಾಶ್ ) ಹಾಕಿಕೊಟ್ಟ ಜೆರಾಕ್ಸ್ ಯಂತ್ರ, ಅದು ಮನುಷ್ಯನನ್ನೇ ನಕಲು ಮಾಡಿದರೆ ಅದರಿಂದ ಮುಂದೇನಾಗುತ್ತದೆ. ಝೆರಾಕ್ಸ್ ಯಂತ್ರ ಮನುಷ್ಯನನ್ನು ನಕಲು ಮಾಡುತ್ತಾ ಮುಂದೇನಾಗುತ್ತದೆ.
ಯಂತ್ರ ಸಿಗುತ್ತಾ.. ಪ್ರಕಾಶ ಜಂಬೋ ಹಾಕ್ತಾನಾ. ಯಂತ್ರ ಮತ್ತು ಝೆರಾಕ್ಸ್ ಅಂಡಗಿ ಮತ್ತು ಅದರ ಸುತ್ತ ನಡೆಯುವ ಕಥೆಯನ್ನು ಕುತೂಹಲ ಮತ್ತು ರೋಚಕವಾಗಿ ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ ನಿರ್ದೇಶಕ ಶ್ರೀನಿಧಿ ಬೆಂಗಳೂರು ಜನರ ಮುಂದಿಟ್ಟಿದ್ದಾರೆ.
ನಾಗಭೂಷಣ ಅವರ ಸಹಜಾಭಿನಯ, ಓಂ ಪ್ರಕಾಶ್ ಅವರ ಎಂದಿನ ಟಿಪಿಕಲ್ ಡೈಲಾಗ್ ,ಪಾಯಲ್ ಚೆಂಗಪ್ಪ, ವಿಜಯ್ ಪ್ರಸಾದ್, ಮಂಜು ಪಾವಗಡ, ಜಗ್ಗಪ್ಪ,ತುಕಾಲಿ ಸಂತು ಸೇರಿದಂತೆ ಹಲವರು ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಒಂದೊಂದು ವೆಬ್ ಸರಣಿಯೂ ಕುತೂಹಲ ಭರಿತವಾಗಿದ್ದು ಪ್ರೇಕ್ಷಕರನ್ನು ಕುತೂಹಲ ಹೆಚ್ಚಿಸಿದೆ. ಇದೇ ಕಥಾ ಹಂದರವನ್ನು ಅಚ್ಚುಕಟ್ಟಾದ ಸಿನಿಮಾ ಕೂಡ ಮಾಡಬಹುದಾದ ಕಥಾವಸ್ತು. ಯಾವ ಸಿನಿಮಾಗೂ ಕಡಿಮೆ ಇಲ್ಲದೆ ಜನರ ಗಮನ ಸೆಳೆಯುವ ಕಥಾನಕ.
ವೆಬ್ ಸರಣಿ ನೋಡುತ್ತಿದ್ದರೆ ಸಿನಿಮಾದಂತೆಯೇ ಮೂಡಿಬಂಡಿದೆ. ವೆಬ್ ಸರಣಿ ನಿರ್ಮಾಣ ಮಾಡುವ ಡಾಲಿ ಫಿಕ್ಚರ್ ಸಾಹಸ ಅಭಿನಂಧನಾರ್ಹ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

