After Tagaru Palya, Vidyapati, Nagabhushan to play lead role in Daali Dhananjaya's 'Xerox'

ಟಗರು ಪಲ್ಯ, ವಿದ್ಯಾಪತಿ ಬಳಿಕ ಡಾಲಿ ಧನಂಜಯ ನಿರ್ಮಾಣದ ‘ಜೆರಾಕ್ಸ್’ ನಲ್ಲಿ ನಾಗಭೂಷಣ್ ನಾಯಕ - CineNewsKannada.com

ಟಗರು ಪಲ್ಯ, ವಿದ್ಯಾಪತಿ ಬಳಿಕ ಡಾಲಿ ಧನಂಜಯ ನಿರ್ಮಾಣದ ‘ಜೆರಾಕ್ಸ್’ ನಲ್ಲಿ ನಾಗಭೂಷಣ್ ನಾಯಕ

ನಟ ಡಾಲಿ ಧನಂಜಯ ತಾನೂ ಬೆಳೆಯುವ ಜೊತೆಗೆ ತನ್ನ ಜೊತೆಯಲ್ಲಿ ಇರುವ ಮಂದಿಯೂ ಬೆಳೆಯಬೇಕು ಎನ್ನುವ ಸಿದ್ದಾಂತದಲ್ಲಿ ನಂಬಿಕೆ ಇಟ್ಟರು, ಅದಕ್ಕಾಗಿ ಗೆಳಯರಿಗಾಗಿ ಮೇಲಿಂದ ಮೇಲೆ ಸಿನಿಮಾ, ವೆಬ್ ಸರಣಿ ನಿರ್ಮಾಣ ಮಾಡುತ್ತಿದ್ದಾರೆ, ಟಗರು ಪಲ್ಯ, ವಿದ್ಯಾಪತಿ ಬಳಿಕ ನಟ ನಾಗಭೂಷಣ್ ಅವರಿಗಾಗಿ “ಜೆರಾಕ್ಸ್” ವೆಬ್ ಸರಣಿ ನಿರ್ಮಾಣ ಮಾಡುತ್ತಿದ್ದಾರೆ.

ಮತ್ತೊಬ್ಬ ಗೆಳೆಯ ಪೂರ್ಣಚಂದ್ರ ಮೈಸೂರು ನಿರ್ದೇಶನದಲ್ಲಿ “ಮದರ್ ಪ್ರಾಮಿಸ್” ಚಿತ್ರ ನಿರ್ಮಾಣ ಮಾಡುತ್ತಿರುವ ಡಾಲಿ ಧನಂಜಯ, ಇನ್ನೊಬ್ಬ ಗೆಳೆಯ ನಾಗಭೂಷಣ್ ಅವರಿಗೆ ಎರಡು ಸಿನಿಮಾ ಬಳಿಕ ಇದೀಗ ವೆಬ್ ಸೀರೀಸ್ ನಿರ್ಮಾಣ ಮಾಡುತ್ತಾ ತನ್ನೊಂದಿಗೆ ಅವರೂ ಬೆಳೆಯಬೇಕು ಎನ್ನುವ ಹಂಬಲ ಹೊಂದಿದವರು

ಕನ್ನಡ ಮಣ್ಣಿನ ಸೊಗಡನ್ನು ಪ್ರತಿಬಿಂಬಿಸುವ ಕಥೆಗಳಿಗೆ ಜೀ- 5 ವೇದಿಕೆ ಸೃಷ್ಟಿಸಿದೆ. ಈಗಾಗಲೇ ಹಲವು ವೆಬ್ ಸರಣಿಗಳನ್ನು ಪ್ರೇಕ್ಷಕರಿಗೆ ನೀಡಿರುವ ಜೀ5 ಇದೀಗ ‘ಜೆರಾಕ್ಸ್’ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ.

ನಟನಾಗಿ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ಬ್ಯಾನರ್ ನಡಿ ‘ಜೆರಾಕ್ಸ್’ ವೆಬ್ ಸರಣಿ ನಿರ್ಮಿಸುತ್ತಿದ್ದಾರೆ. ಈ ಸರಣಿಯನ್ನು ‘ಬ್ಲಿಂಕ್’ ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ನಿರ್ದೇಶಿಸಲಿದ್ದಾರೆ.

ಟಗರು ಪಲ್ಯ, ವಿದ್ಯಾಪತಿ ಸಿನಿಮಾಗಳ ಜೊತೆಗೆ ಇಕ್ಕಟ್ ಹಾಗೂ ಹನಿಮೂನ್ ವೆಬ್ ಸರಣಿಗಳ ಮೂಲಕ ತಮ್ಮ ನಟನಾ ಕೌಶಲ್ಯ ಪ್ರದರ್ಶಿಸಿರುವ ನಾಗಭೂಷಣ್ ಈಗ ಜೆರಾಕ್ಸ್ ನಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಬಹು ಬೇಡಿಕೆ ಕಾಮಿಡಿ ನಟರುಗಳಲ್ಲಿ ಒಬ್ಬರಾಗಿರುವ ನಾಗಭೂಷಣ, ಡಾರ್ಕ್ ಹಾಸ್ಯ ಥ್ರಿಲ್ಲರ್ ಕಥೆಯ ಜೆರಾಕ್ಸ್ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

ಜೆರಾಕ್ಸ್ ಈಗಾಗಲೇ ತನ್ನ ಶೀರ್ಷಿಕೆಯೊಂದಿಗೆ ಕುತೂಹಲ ಹುಟ್ಟುಹಾಕಿದೆ. ಈ ಸರಣಿಯು ಮಂಡ್ಯ-ಮೈಸೂರು ಸುತ್ತಮುತ್ತ ನಡೆಯುತ್ತಿದ್ದು, ಜೆರಾಕ್ಸ್ ಅಂಗಡಿಯ ಮಾಲೀಕ ಪ್ರಕಾಶ್ ಜೀವನದಲ್ಲಿ ನಡೆಯುವ ಅನಿರೀಕ್ಷಿತ ತಿರುವುಗಳನ್ನು ಕಟ್ಟಿಕೊಡಲಾಗಿದೆ.

ಈ ಘೋಷಣೆಯೊಂದಿಗೆ, ಕನ್ನಡ ಜೀ-5 ಸ್ಥಳೀಯ ಸಂವೇದನೆಗಳಲ್ಲಿ ಬೇರೂರಿರುವ ಕಥೆಗಳು ಮತ್ತು ಸಾಂಸ್ಕೃತಿಕ ಸತ್ಯ ಮತ್ತು ಸಮಕಾಲೀನ ಪ್ರಸ್ತುತತೆಯನ್ನು ಪರದೆಗೆ ತರುವ ಸೃಷ್ಟಿಕರ್ತರ ಮೇಲೆ ತನ್ನ ಗಮನವನ್ನು ಬಲಪಡಿಸುವುದನ್ನು ಮುಂದುವರೆಸಿದೆ.

ನಾಯಕ ನಟ ನಾಗಭೂಷಣ ಮಾತನಾಡಿ, “ಜೆರಾಕ್ಸ್ ಭಾಗವಾಗಿದ್ದ ಯಾವುದೇ ವಿಷಯಕ್ಕಿಂತ ಭಿನ್ನವಾಗಿದೆ, ಅನಿರೀಕ್ಷಿತ, ವಿಲಕ್ಷಣ ಮತ್ತು ನಿರಂತರವಾಗಿ ಬದಲಾಗುತ್ತಿದೆ. ಶ್ರೀನಿಧಿ ಸೃಷ್ಟಿಸಿರುವ ಪ್ರಪಂಚ ಅದೇ ಸಮಯದಲ್ಲಿ ಪರಿಚಿತ ಮತ್ತು ವಿಲಕ್ಷಣವೆನಿಸುತ್ತದೆ. ಒಬ್ಬ ಕಲಾವಿದನಾಗಿ ಆ ಸ್ಥಳವು ಅನ್ವೇಷಿಸಲು ರೋಮಾಂಚನಕಾರಿಯಾಗಿತ್ತು. ಕನ್ನಡ Zಇಇ5 ವಿಭಿನ್ನವಾಗಿರಲು ಧೈರ್ಯವಿರುವ ಕಥೆಗಳಿಗೆ ಅವಕಾಶ ನೀಡುತ್ತಿದೆ ಎಂದು ನನಗೆ ರೋಮಾಂಚನವಾಗಿದೆ” ಎಂದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin