Golden Star Ganesh's 20 years of cinematic journey: Tribute from the film 'Pinaka

ಗೋಲ್ಡನ್ ಸ್ಟಾರ್ ಗಣೇಶ್ 20 ವರ್ಷಗಳ ಸಿನಿ ಪಯಣ: ‘ಪಿನಾಕ’ ಚಿತ್ರದಿಂದ ಗೌರವ - CineNewsKannada.com

ಗೋಲ್ಡನ್ ಸ್ಟಾರ್ ಗಣೇಶ್ 20 ವರ್ಷಗಳ ಸಿನಿ ಪಯಣ: ‘ಪಿನಾಕ’ ಚಿತ್ರದಿಂದ ಗೌರವ

ನಟ ‘ಗೋಲ್ಡನ್ ಸ್ಟಾರ್’ ಗಣೇಶ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಯಶಸ್ವಿ 20 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದಾರೆ. ಕಳೆದ ಎರಡು ದಶಕಗಳಿಂದ ಪ್ರೇಕ್ಷಕರಿಂದಲೂ ಅತಿ ಹೆಚ್ಚು ಪ್ರೀತಿಯನ್ನೂ ಗಳಿಸಿದ್ದಾರೆ ಈ ವಿಶೇಷ ಮೈಲಿಗಲ್ಲನ್ನು ‘ಪಿನಾಕ’ ಚಿತ್ರೀಕರಣದ ಸೆಟ್‌ನಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು

ಚಿತ್ರದ ನಿರ್ಮಾಪಕ ಟಿಜಿ ವಿಶ್ವಪ್ರಸಾದ್‌ ಮತ್ತು ಕೃತಿ ಪ್ರಸಾದ್‌, ಗಣೇಶ್ ದೀರ್ಘಕಾಲದ ಸಾಧನೆ ಸ್ಮರಿಸಿ, ಅವರಿಗೆ ಸನ್ಮಾನ ಮಾಡುವ ಮೂಲಕ ಗೌರವ ಸಲ್ಲಿಸಿದರು. .

ಅಂತಿಮ ಹಂತದಲ್ಲಿ ‘ಪಿನಾಕ

ಪಿನಾಕ ಚಿತ್ರ ಭಾರಿ ವೆಚ್ಚದಲ್ಲಿ ಮತ್ತು ಅದ್ಧೂರಿ ತಾರಾಗಣದೊಂದಿಗೆ ನಿರ್ಮಾಣವಾಗುತ್ತಿದೆ. ಈಗಾಗಲೇ ಚಿತ್ರದ ಶೇ. 80 ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, . ವಿವಿಧ ಭಾಷೆಗಳ ಖ್ಯಾತ ಕಲಾವಿದರು ಚಿತ್ರದಲ್ಲಿ ಒಂದಾಗುತ್ತಿದ್ದು, ಗಣೇಶ್ ಕೆರಿಯರ್‌ನಲ್ಲೇ ಅತಿ ದೊಡ್ಡ ಸಿನಿಮಾವಾಗಲಿದೆ.

ನಟ ಗಣೇಶ್ ಮಾತನಾಡಿ ಚಿತ್ರರಂಗಕ್ಕೆ ಬಂದು 20 ವರ್ಷಗಳಾದವು. ಅಂದು ನನ್ನನ್ನು ಹೇಗೆ ಸ್ವೀಕರಿಸಿದ್ದಿರೋ, ಅದೇ ಪ್ರೀತಿ ಮತ್ತು ವಿಶ್ವಾಸ ಇಂದಿಗೂ ಚಿತ್ರರಂಗದವರು ಹಾಗೂ ಅಭಿಮಾನಿಗಳು ತೋರಿಸುತ್ತಿದ್ದಾರೆ. ಕಾಲ ಉರುಳಿದರೂ ಅಭಿಮಾನಿ ಬಳಗ ಇನ್ನೂ ದೊಡ್ಡದಾಗುತ್ತಿರುವುದು ಪುಣ್ಯ. ಎಲ್ಲರಿಗೂ ನನ್ನ ಹೃತ್ಪೂರ್ವಕ ನಮಸ್ಕಾರಗಳು ಎಂದಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin