“ಎಜುಕೇಟಡ್ ಬುಲ್ಸ್ ಚಿತ್ರದ ಮೂಲಕ ಮರಳಿ ಬಂದ ನಿರ್ದೇಶಕ ಜಿ ಕೆ ಮುದ್ದುರಾಜ್ - CineNewsKannada.com

“ಎಜುಕೇಟಡ್ ಬುಲ್ಸ್ ಚಿತ್ರದ ಮೂಲಕ ಮರಳಿ ಬಂದ ನಿರ್ದೇಶಕ ಜಿ ಕೆ ಮುದ್ದುರಾಜ್

ಕಳೆದ ನಾಲ್ಕು ದಶಕಗಳಿಂದ ಡಾ.ಅಂಬರೀಷ್, ದೇವರಾಜ್, ಜಗ್ಗೇಶ್ ಶಶಿಕುಮಾರ್ ಮುಂತಾದ ಸ್ಟಾರ್ ನಟರ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಹಿರಿಯ ತಂತ್ರಜ್ಞ ಜಿ.ಕೆ. ಮುದ್ದುರಾಜ್ ಹತ್ತು ವರ್ಷಗಳ ನಂತರ ನಿರ್ದೇಶಿಸಿರುವ ಚಿತ್ರ ” ಎಜುಕೇಟಡ್ ಬುಲ್ಸ್ ” ಚಿತ್ರದ ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ

ಮುದ್ದುರಾಜ್ ನಿರ್ದೇಶನದ 41ನೇ ಚಿತ್ರ ಇದಾಗಿದ್ದು ಟ್ರೈಲರ್ ಜೊತೆಗೆ ಹಾಡು ಬಿಡುಗಡೆಯಾಗಿದೆ. ಸಮಾರಂಭ ನೀರಜ್, ಪೂರ್ವಿಕಾ (ಸ್ವಪ್ನ) ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದು, ಅಜಯ್‌ ಕುಮಾರ್, ತೇಜಸ್‌ಕುಮಾರ್, ರಾಕೇಶ್ ಅಲ್ಲದೆ ಪಾಪ ಪಾಂಡು ಖ್ಯಾತಿಯ ಚಿದಾನಂದ್, ಹಿರಿಯ ನಟಿ ಭವ್ಯ ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ.

ನಿರ್ದೇಶಕ ಮುದ್ದುರಾಜ್ ಮಾತನಾಡಿ
ಎಜುಕೇಟೆಡ್ ಬುಲ್ಸ್ ಎಂದರೆ ವಿದ್ಯಾವಂತ ಗೂಡೆಗಳು ಎಂದರ್ಥ. ಎಲ್ಲಾ ಕಲಾವಿದರು ಹೊಸಬರು ಅನಿಸದ ಹಾಗೆ ಅಭಿನಯಿಸಿದ್ದಾರೆ. 4 ವರ್ಷಗಳ ಹಿಂದೆ ಇದೇ ಹೆಸರಿನಲ್ಲಿ ಸಿನಿಮಾ ಆರಂಭಿಸಿದ್ದೆ. ಆ ನಿರ್ಮಾಪಕರು ಹಿಂದೆ ಸರಿದು ಚಿತ್ರ ನಿಂತು ಹೋಯಿತು. ಆಮೇಲೆ ಬೇರೊಂದು ಕಥೆ ತೆಗೆದುಕೊಂಡು ನಿರ್ದೇಶಿಸಿ ನಿರ್ಮಾಣ ಸಹ ಮಾಡಿದ್ದೇನೆ. 4 ಜನ ವೆಲ್ ಎಜುಕೇಟೆಡ್ ಯುವಕರು, ಅವರಿಗೆ ಸಮಾಜದಲ್ಲಿ ನಮ್ಮನ್ನು ನಗುರುತಿಸಿಕೊಳ್ಳಬೇಕು, ಹೀಗೇ ಇರಬೇಕು ಎಂಬ ಕನಸಿರುತ್ತದೆ‌. ಇವರ ಆಸೆಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಾರೆ. ಹೀಗೇ ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ತಾನೇ ಹೋಗ್ತಾರೆ. ವಿದ್ಯೆಯ ಜತೆ ಬುದ್ದಿ ಸ್ವಲ್ಪ ಜಾಸ್ತಿನೇ ಇರಬೇಕು ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಿದ ಚಿತ್ರವಿದು ಎಂದರು

ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದ್ದಾರೆ.‌ಹಾಡು, ಡೈಲಾಗ್, ಕ್ಯಾಮೆರಾ ವರ್ಕ್ ತುಂಬಾ ಚೆನ್ನಾಗಿ ಬಂದಿದೆ. ಜನ ಇಷ್ಟಪಡುತ್ತಾರೆ ಎಂಬ ನಂಬಿಕೆಯಿದೆ. ನಿರ್ಮಾಪಕನಿಗೆ ಶೇಕಡಾ 50 ರಷ್ಟಾದರೂ ಹಣ ವಾಪಸ್ ಬಂದರೆ ಮಾಡಿದ ಶ್ರಮ ಸಾರ್ಥಕ ಎಂದು ಹೇಳಿದರು

ಸಂಗೀತ ನಿರ್ದೇಶಕ ಸೂರಜ್ ಜೋಯಿಸ್ ಮಾತನಾಡಿ ಕಂಗ್ರಾಚುಲೇಶನ್ಸ್ ಬ್ರದರ್ಸ್, ಬಿಚ್ಚುಗತ್ತಿ ಸೇರಿದಂತೆ 15 ಚಿತ್ರಗಳಿಗೆ ಮ್ಯೂಸಿಕ್ ಮಾಡಿದ್ದೇನೆ. ಇದು 16ನೇ ಚಿತ್ರ. 2 ಹಾಡುಗಳ ಜತೆ ಮೆಸೇಜ್, ಎಂಟರ್ ಟೈನ್ ಮೆಂಟ್ ಇರೋ ಚಿತ್ರವಿದು, ಹಿನ್ನೆಲೆ ಸಂಗೀತವನ್ನೂ ಮಾಡಿದ್ದೇನೆ ಎಂದರು

ನಟ ಚಿದಾನಂದ್ ಮಾತನಾಡಿ ಭಾಗ್ಯಲಕ್ಷ್ಮಿಗಾಗಿ ನಾವೆಲ್ಲ ಆಗ ಬರುತ್ತೆ, ಈಗ ಬರುತ್ತೆ ಅಂತ ಕಾಯ್ತಾ ಇರ್ತೇವೆ. ಈ ಚಿತ್ರ 25 ಕೋಟಿಯ ಆಸೆಯನ್ನು ಉಳಿಸುತ್ತೆ ಎಂದು ಹೇಳಿದರು.

ನಾಯಕಿ ಪೂರ್ವಿಕಾ ಮಾತನಾಡಿ ಹಳ್ಳಿಯ ಸಾಮಾನ್ಯ ಹುಡುಗಿಯಾಗಿ ನಟಿಸಿದ್ದೇನೆ. ಯೂಥ್ ಗೆ ಮೋಟಿವೇಶನ್ ಆಗೋ ಚಿತ್ರವಿದು ಎಂದರು. ಉಳಿದ ಕಲಾವಿದರೆಲ್ಲ ತಂತಮ್ಮ ಪಾತ್ರಗಳ ಕುರಿತಂತೆ ಸಂಕ್ಷಿಪ್ತವಾಗಿ ಹೇಳಿಕೊಂಡರು.

ರತಿಂದ್ ಗೌಡ ಛಾಯಾಗ್ರಹಣ , ಸಂಜೀವರೆಡ್ಡಿ ಸಂಕಲನ, ಎಂ.ಪಿ.ಅರುಣ್‌ಕುಮಾರ್ ಕಥೆ, ಹರೀಶ್ ಸಂಭಾಷಣೆ, ರಾಮ್ ನಾರಾಯಣ್ ಸಾಹಿತ್ಯ, ಥ್ರಿಲ್ಲರ್‌ ಮಂಜು ಸಾಹಸ, ಬಾಬು ಖಾನ್ ಕಲೆ, ಸಫೈರ್‌ ರವಿ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin