KD Movie Review: ರಕ್ತದೋಕುಳಿಯಲ್ಲಿ ಮಿಂದ “ಕಾಳಿ”ಯ ರುದ್ರ ತಾಂಡವ “ಕೆಡಿ”
ಚಿತ್ರ; ಕೆಡಿ
ನಿರ್ದೇಶನ : ಪ್ರೇಮ್
ತಾರಾಗಣ; ದೃವ ಸರ್ಜಾ, ರೀಷ್ಮಾ ನಾಣಯ್ಯ, ಸಂಜಯ್ ದತ್ , ಶಿಲ್ಪಾ ಶೆಟ್ಟಿ,ರವಿಚಂದ್ರನ್, ರಮೇಶ್ ಅರವಿಂದ್, ಕಿಚ್ಚ ಸುದೀಪ್, ರವಿಶಂಕರ್, ದತ್ತಣ್ಣ, ಶೋಭರಾಜ್, ಯಶ್ ಶೆಟ್ಡಿ, ಮಾನಸಿ ಸುಧೀರ್ ಮತ್ತಿತರರು
ರೇಟಿಂಗ್ : **** 4 / 5
” ಅವತ್ತು ನಿನ್ ಮಾಂಗಲ್ಯ ಉಳಿಸಿದ್ದೇನೆ
ಇವತ್ತು ನನ್ ಫ್ಯಾಮಿಲಿ ಉಳಿಸಿಕೊಡಿ ಅಕ್ಕಾ…”
ದೇವ ಕೊಟ್ಟ ಗಡುವಿನಲ್ಲಿ 2 ಗಂಟೆ ಮುಗಿದೆ.. ನಿನ್ ಫ್ಯಾಮಿಲಿ ಉಳಿಸಿಕೋ..
ದಡ್ಡ ನೀನು.. ಬದುಕ ಬೇಕು..ಅಂದ್ರೆ..ಫ್ಯಾಮಿಲಿ ಕರೆದುಕೊಂಡು ಊರು ಬಿಟ್ಟುಬಿಡು..
ಗಂಡನ ತಲೆ ಕಡಿದಿರುವ ತಲೆ ತರೋನಿಗೆ ದೇವನ ಸಮಸ್ತವನ್ನೂ ಎಷ್ಟೇ ಏಕೆ ನನ್ನ ಸರ್ವಸ್ವವನ್ನೂ ಕೊಡುವೆ..
ಕಾಲಬೈರವನ ಆಗಮನ.. ಇನ್ನೊಂದೆಡೆ ದಕ್ಷಿಣ ಆಪ್ರಿಕಾದಿಂದ ಬಂದ ಮತ್ತೊಬ್ಬ…ಕೆಡಿ ಡೆವಿಲ್ ಕಿಂಗ್ ಡಮ್ ಆರಂಭ…
ಈ ವಾರ ಪ್ರೇಕ್ಷಕರ ಮುಂದೆ ಬಂದಿರುವ ಶೋ ಮ್ಯಾನ್ ಪ್ರೇಮ್ ನಿರ್ದೆಶನದ ಚಿತ್ರ “ಕೆಡಿ”ಯ ಝಲಕ್.
ಚಿತ್ರದಲ್ಲಿ ಅಣ್ಣ- ತಮ್ಮ, ಸಹೋದರಿಯರ ಬಾಂಧವ್ಯ.. ಕುಟುಂಬದ ರಕ್ಷಣೆಗಾಗಿ ಡಾನ್ ಮುಂದೆ ಅಂಗಲಾಚುವ ಅಮಾಯಕ.. ಗಂಡನ ಸಾವಿಗೆ ಕಾರಣರಾದವರ ವಿರುದ್ದ ಸೇಡು ತೀರಿಸಿಕೊಳ್ಳುವ ಶಪಥ..ಕೈಗೆ ಮೆತ್ತಿಕೊಂಡ ರಕ್ತಕ್ಕೆ ವಿರಾಮ ನೀಡಿ ಶಾಸಕನಾಗಬೇಕೆನ್ನುವ ಹಂಬಲ ಹೊಂದಿದ ಡಾನ್.. ಇದೆಲ್ಲದರ ನಡುವೆ ಹಾವು- ಮುಂಗುಸಿ ರೀತಿಯ ಪ್ರೇಮಿಗಳ ಕಿತ್ತಾಟ, ರಕ್ತದೋಕುಳಿಯಲ್ಲಿ ಮಿಂದ ಕಾಳಿಯ ರುದ್ರ ನರ್ತನ “ಕೆಡಿ” ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದೆ.
ಓದು ತಲೆಗೆ ಹತ್ತದ ಕಾಳಿ ( ಧೃವ ಸರ್ಜಾ) ಅಣ್ಣ ಧರ್ಮ ( ರಮೇಶ್ ಅರವಿಂದ್ ) ಕಂಡರೆ ಭಯ, ಆತನಿಗೂ ಡಾನ್ ದೇವ ( ಸಂಜಯ್ ದತ್ ) ಕಂಡರೆ ಎಲ್ಲಿಲ್ಲದ ಅಭಿಮಾನ. ಆತನ ಹೆಂಡತಿ ಸತ್ಯವತಿ( ಶಿಲ್ಪಾ ಶೆಟ್ಟಿ)ಯ ಮಾಂಗಲ್ಯ ಕಾಪಾಡಿದವ.
ಕಾಳಿ ಇರುವ ಕಡೆಯೇ ಇರುವ ಮಚ್ ಲಕ್ಷ್ಮಿ ( ರೀಷ್ಮಾ ನಾಣಯ್ಯ) ಭಜಾರಿ. ಸೀಮೆ ಎಣ್ಣೆ ಹಾಕುವ ವಿಷಯದಲ್ಲಿ ಇಬ್ಬರಿಗೂ ಕಿತ್ತಾಟ.ಆಮೇಲೆ ಸಲುಗೆ ,ಪ್ರೀತಿ. ಈ ನಡುವೆ ಶಾಸಕ ಅಣ್ಣಯ್ಯಪ್ಪ ( ರವಿಚಂದ್ರನ್) ಅಣ್ಣನ ಆಪ್ತ ಸ್ಹೇಹಿತ. ಇಂತಹವನ ವಿರುದ್ದ ದೇವ ಎಲೆಕ್ಷನ್ ಗೆ ನಿಲ್ಲಲು ಮುಂದಾಗುತ್ತಾನೆ.. ಹುಡುಗಿ ತಂಟೆಗೆ ಬಂದ ದೇವನ ಬಂಟನ್ನು ಬಗ್ಗು ಬಡಿದು ದೇವನಿಗೂ ಮುಹೂರ್ತ ಇಡ್ತಾನೆ. ಕಾಲಭೈರವ ( ಕಿಚ್ಚ ಸುದೀಪ್) ಆಗಮನ.ಈ ನಡುವೆ ಮುಂದೇನು ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.
ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯ ನಿರ್ಮಾಣದಲ್ಲಿ ನಿರ್ದೇಶಕ ಪ್ರೇಮ್ ಒಂದೊಂದು ಫ್ರೇಮ್ ಗಳಗಳನ್ನು ದೃಶ್ಯ ವೈಭವದಂತೆ ಪ್ರೇಕ್ಷಕರ ಮುಂದಿಟ್ಡಿದ್ದಾರೆ ಜೊತೆಗೆ ಅಷ್ಟೇ ಅಂದವಾಗಿ ತೆರೆಯ ಮೇಲೆ ಛಾಯಾಗ್ರಾಹಕ ವಿಲಿಯಂ ಡೇವಿಡ್ ಅದನ್ನು ತೋರಿಸಿರುವ ರೀತಿ ಸುಂದರ ದೃಶ್ಯ ಕಲೆಯಂತೆ ಚಿತ್ರ ಬಿಂಬಿತವಾಗಿದೆ.
ಇದಕ್ಕೆ ಪೂರಕವಾಗಿ ಅರ್ಜುನ್ ಜನ್ಯ ಸಂಗೀತ, ಹಿನ್ನೆಲೆ ಸಂಗೀತ, ಬೋರ್ ಹೊಡೆಸದೆ ಪ್ರೇಪಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸುವಂತೆ ಮಾಡಿದ ಹಾಡು,ಆಕ್ಷನ್, ಸೆಂಟಿಮೆಂಟ್ ದೃಶ್ಯಗಳು ಕೊನೆ ತನಕ ಕುತೂಲಹವನ್ನು ಕಾಪಾಡಿಕೊಳ್ಳುವಲ್ಲಿ ಕೆಡಿ ಚಿತ್ರ ಯಶಸ್ಸು ಕಂಡಿದೆ. ಇದರ ಎಲ್ಲಾ ಶ್ರೇಯ ನಿರ್ದೇಶಕ ಪ್ರೇಮ್ ಮತ್ತು ಅವರ ತಂಡಕ್ಕೆ ಸಲ್ಲಬೇಕು..
ಇದರೊಂದಿಗೆ ಕೊನೆಯಲ್ಲಿ ಎಂಟ್ರಿ ಕೊಡುವ ವ್ಯಕ್ತಿ ಯಾರು.. ತಮ್ಮ, ಸಹೋದರಿಯರನ್ನು ಅತಿಯಾಗಿ ಇಷ್ಡಪಡುವ ಧರ್ಮ , ಗಂಡನ ಚಿತೆಯ ಮುಂದೆ ಸತ್ಯವತಿಗೆ ತಾಳಿ ಕಟ್ಟಿದ್ದೇಕೆ..ಅವರ ಹಿನ್ನೆಲೆ ಏನು. ಕಿಂಗ್ ಡಮ್.. ಕೆಡಿ – 2 ನಲ್ಲಿ ಮುಂದೇನು ಎನ್ನುವ ಕುತೂಹಲವನ್ನು ಚಿತ್ರ ಮುಗಿದ ನಂತರವೂ ಕಾಯ್ದುಕೊಂಡಿದೆ.
ಹಾಗಾದಾರೆ ಮುಂದಿನ ಭಾಗದಲ್ಲಿ ಏನೆಲ್ಲಾ ಆಗಲಿದೆ. ಕಾಳಿ ನಡೆ ಏನು.. ಧರ್ಮನ ಹೊಸ ಆಟ ಯಾವುದು..ಡಾನ್ ಹತ್ಯೆಗೆ ಆಕೆಯ ಪತ್ನಿ ಸೇಡು ತೀರಿಸಿಕೊಳ್ಳದೆ ಸುಮ್ಮನೆ ಬಿಡ್ತಾಳಾ.. ಕಾಲಭೈರವ ಯಾರ ರಕ್ಷಣೆಗೆ ಆಗಮಿಸುತ್ತಾನೆ ಎನ್ನುವ ಹಲವು ಕುತೂಹಲಗಳನ್ನು ಪ್ತೇಕ್ಷಕರ ವ್ಯಾಖ್ಯಾನಕ್ಕೆ ನಿರ್ದೇಶಕ ಪ್ರೇಮ್ ಬಿಟ್ಟಿದ್ದಾರೆ
ನಿರ್ದೇಶಕ ಪ್ರೇಮ್ ಅವರ ಇದುವರೆಗಿನ ಚಿತ್ರಗಳಿಗಿಂತ ಕೆಡಿ ಚಿತ್ರ ವಿಭಿನ್ನವಾಗಿ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ಬಹಳ ವರ್ಷಗಳ ನಂತರ ಗೆಲುವಿನ ಸಿಹಿ ಕಂಡಿದ್ದಾರೆ.
ನಟ ದೃವ ಸರ್ಜಾ ಕಾಳಿಯ ಅವತರಾದಲ್ಲಿ ಆಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದಾರೆ. ಜೊತೆಗೆ ಭಾವನಾತ್ಮಕ ಸನ್ನಿವೇಶಗಳಲ್ಲಿ ಗಮನ ಸೆಳೆದಿದ್ದಾರೆ. ಅಮಾಯಕನನ್ನು ಕೆಣಕಿದರೆ ಕುಟುಂಬದ ರಕ್ಷಣೆಗೆ ಯಾವ ರೀತಿ ವೈಲೆಂಟ್ ಆಗ್ತಾನೆ ಎನ್ನುವುದಕ್ಕೆ ದೃವ ಸರ್ಜಾ ಪಾತ್ರ ತಾಜಾ ನಿದರ್ಶನವಾಗಿದೆ
ನಟಿ ರೀಷ್ಮಾ ನಾಣಯ್ಯ ರಗಡ್ ಲುಕ್ ನಲ್ಲಿ ಮಚ್ ಲಕ್ಷ್ಮಿಯಾಗಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಸಿಕ್ಕ ಅವಕಾಶವನ್ನು ಸುದುಪಯೋಗ ಪಡಿಸಿಕೊಂಡಿದ್ದಾರೆ
ಜನರ ಬೆಂಬಲಕ್ಕೆ ನಿಲ್ಲುವ ಶಾಸಕ ಅಣ್ಣಯ್ಯಪ್ಪನಾಗಿ ರವಿಚಂದ್ರನ್, ಶಾಲಾಶಿಕ್ಷಕನ , ಶಿಸ್ತಿಗೆ ಹೆಸರಾದ ಧರ್ಮನ ಪಾತ್ರದಲ್ಲಿ ರಮೇಶ್ ಅರವಿಂದ್, ದೇವನಾಗಿ ಸಂಜಯ್ ದತ್, ಸತ್ಯವತಿಯಾಗಿ ಶಿಲ್ಪಾ ಶೆಟ್ಟಿ, ಕಾಲಭೈರವನಾಗಿ ಕಿಚ್ಚ ಸುದೀಪ್ ಒಬ್ಬೊಬ್ಬ ಎಂಟ್ರಿಯೂ ಅದ್ಬುತವಾಗಿ ಮೂಡಿಬಂದಿದೆ. ಜೊತೆಗೆ ಪಾತ್ರವೂ ಕೂಡ
ಉಳಿದಂತೆ ರವಿಶಂಕರ್, ಯಶ್ ಶೆಟ್ಟಿ, ಮುನಿ,ಶೋಭರಾಜ್, ಮಾನಸಿ ಸುಧೀರ್, ಸೇರಿದಂತೆ ಹಲವು ಕಲಾವಿದರ ಚಿತ್ರಕ್ಕೆ ಪೂರಕವಾಗಿದ್ದಾರೆ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

