"Shikhandi" movie to hit screens on May 15th: Curiosity increases

“ಶಿಖಂಡಿ” ಚಿತ್ರ ಮೇ 15 ರಂದು ತೆರೆಗೆ : ಕುತೂಹಲ ಹೆಚ್ಚಳ - CineNewsKannada.com

“ಶಿಖಂಡಿ” ಚಿತ್ರ ಮೇ 15 ರಂದು ತೆರೆಗೆ : ಕುತೂಹಲ ಹೆಚ್ಚಳ

ಪೊಲಾ ಪ್ರವೀಣ್ ಕುಮಾರ್ ನಿರ್ಮಾಣದ ಹಾಗೂ ಗುರುಮೂರ್ತಿ ವಿ ನಿರ್ದೇಶನದ “ಶಿಖಂಡಿ” ಚಿತ್ರ ಇದೇ ಮೇ 15 ರಂದು ಬಿಡುಗಡೆಯಾಗುತ್ತಿದ್ದು ಚಿತ್ರ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ. ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಹಾಡು ಹಾಗೂ ಟ್ರೇಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ

ಶಾಸಕ ಸಿ.ಎನ್ ಬಾಲಕೃಷ್ಣ ಸೇರಿದಂತೆ ಮತ್ತಿತರರು ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದರು

ನಿರ್ದೇಶಕ ಗುರುಮೂರ್ತಿ ಮಾಹಿತಿ ನೀಡಿ, ಮಹಾಭಾರತದಲ್ಲಿ ಬರುವ “ಶಿಖಂಡಿ” ಪಾತ್ರವನ್ನು ಆಧರಿಸಿರುವ ಕಥಾಹಂದರ ಹೊಂದಿರುವ ಹಾಗೂ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ. ನಿರ್ಮಾಪಕ ಪೊಲಾ ಪ್ರವೀಣ್ ಕುಮಾರ್ ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಯುವರಾಜ್ ಎಂಬ ಯುವಪ್ರತಿಭೆ ನಾಯಕನಾಗಿ, ಖ್ಯಾತಿ ನಾಯಕಿಯಾಗಿ ನಟಿಸಿದ್ದಾರೆ. ಮೇ 15 ರಂದು ಕನ್ನಡದಲ್ಲಿ ಮೊದಲು ಬಿಡುಗಡೆಯಾಗುತ್ತಿದೆ. ಆನಂತರ ಉಳಿದ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆಗೆ ಬರಲಿದೆ ಎಂದರು.

ನಿರ್ಮಾಪಕ ಪೊಲಾ ಪ್ರವೀಣ್ ಕುಮಾರ್ ಮಾತನಾಡಿ ಚಿತ್ರ ನಿರ್ಮಾಣ ಮಾಡಲು ಗುರುಮೂರ್ತಿ ಅವರು ಎರಡು ತಿಂಗಳಿನಿಂದ ಸಂಪರ್ಕಿಸುತ್ತಿದ್ದರು. ಆದರೆ ಅವರು ಎರಡು ತಿಂಗಳ ನಂತರ ಬಂದಾಗ ಯಲ್ಲಮ್ಮ ತಾಯಿಯ ಹಾಡನ್ನು ಕೇಳಿಸಿದರು. ಹಾಡು ಕೇಳಿದ ತಕ್ಷಣ ಒಪ್ಪಿಕೊಂಡೆ. ನನ್ನ ಕುಟುಂಬ ಹಾಗೂ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ ಪ್ರೋತ್ಸಾಹವಿರಲಿ ಎಂದು ತಿಳಿಸಿದರು.

ನಾಯಕ ಯುವರಾಜ್ ಗೌಡ ಮಾತನಾಡಿ ನಾಯಕ ನಾಗಬೇಕೆಂಬ ಹಂಬಲ ಚಿತ್ರದ ಮೂಲಕ ಈಡೇರಿದೆ. ಸೂರ್ಯ ನನ್ನ ಪಾತ್ರದ ಹೆಸರು. ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ಎಂದರು

“ಶಿಖಂಡಿ” ನನಗೂ ಸಹ ಮೊದಲ ಚಿತ್ರ ಎಂದು ನಾಯಕಿ ಖ್ಯಾತಿ ತಿಳಿಸಿದರೆ, ಉತ್ತಮ ಪಾತ್ರದಲ್ಲಿ ನಟಿಸಿರುವುದಕ್ಕೆ ಖುಷಿಯಾಗಿದೆ ಎಂದು ನಟಿ ನಿಖಿತಾಸ್ವಾಮಿ ಹೇಳಿದರು.

ತಮ್ಮ ಪಾತ್ರದ ಬಗ್ಗೆ “ಬಿಗ್ ಬಾಸ್” ಖ್ಯಾತಿಯ ನೀತು, ವೇದ ಹಾಗೂ ಬಳ್ಳಾರಿಯ ಚಾಂದಿನಿ ವಿವರಣೆ ನೀಡಿದರು. ಮೊದಲ ಬಾರಿಗೆ ಮಂಗಳಮುಖಿ ಪಾತ್ರದಲ್ಲಿ ಅಭಿನಯಿಸಿರುವುದಾಗಿ ನಟ ರಾಘವೇಂದ್ರ ಹೇಳಿದರು.

ಯಲ್ಲಮ್ಮ ಹಾಡಿನ ಗೀತರಚನೆಕಾರ ಹಾಗೂ ಸಂಗೀತ ನಿರ್ದೇಶಕ ಮಂಜು ಕವಿ ಹಾಡಿನ ಕುರಿತು ಮಾಹಿತಿ ನೀಡಿದರು. ಸಹ ನಿರ್ಮಾಪಕಿ ಪೊಲಾ ಲಕ್ಷ್ಮೀ, ನಿರ್ಮಾಪಕ ಪೊಲಾ ಪ್ರವೀಣ್ ಕುಮಾರ್ ಪುತ್ರ ಕರಣ್, ಸೊಸೆ ಹಾಗೂ ಮಗಳು ನಮ್ರತಾ ಸಮಾರಂಭದಲ್ಲಿ ಉಪಸ್ಥಿತರಿದ್ದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin