"Dhruti", a film with a social message, to hit the screens on May 8th
ಮೇ 8 ರಂದು ಸಾಮಾಜಿಕ ಸಂದೇಶ ಸಾರುವ “ಧೃತಿ” ಚಿತ್ರ ತೆರೆಗೆ
ಮೂಲತಃ ಉದ್ಯಮಿಯಾಗಿರುವ ಜಗದೀಶ್ ಎಂ ಮೊದಲ ಬಾರಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಛಾಯಾಗ್ರಹಣ ಮಾಡಿ ನಿರ್ದೇಶಿಸಿರುವ ಹಾಗೂ ನಿರ್ಮಾಣವನ್ನು ಮಾಡಿರುವ “ಧೃತಿ” ಚಿತ್ರ ಮೇ 8 ರಂದು ತೆರೆಗೆ ಬರುತ್ತಿದೆ. ಗೀತಾ ದಾಮೋದರನ್ ಚಿತ್ರದ ಸಹ ನಿರ್ಮಾಪಕರು.

ನಿರ್ದೇಶಕ ಜಗದೀಶ್ ಮಾತನಾಡಿ ಶೋಷಣೆಗೆ ಒಳಗಾದ ಹೆಣ್ಣಮಗಳೊಬ್ಬಳ ಸುತ್ತ “ಧೃತಿ” ಚಿತ್ರದ ಕಥೆ ಸಾಗುತ್ತದೆ. ಆದರೆ ಚಿತ್ರದಲ್ಲಿ ಶೋಷಣೆಂ ವಿಜೃಂಭಿಸಿಲ್ಲ. ಸಮಸ್ಯೆಗೆ ಪರಿಹಾರವನ್ನು ಹೇಳಿದ್ದೇವೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರ ಇದಾಗಲಿದೆ ಎಂದು ತಿಳಿಸಿದ್ದಾರೆ
ಪ್ರಸನ್ನ ಕುಮಾರ್ ಸಂಗೀತ ನಿರ್ದೇಶನ ಹಾಗೂ ಶಶಾಂಕ್ ಮುರಳಿಧರನ್ ಸಂಕಲನವಿರುವ ಚಿತ್ರದ ತಾರಾಬಳಗದಲ್ಲಿ ಆಂಚಲ್ ಗೌಡ, ಪ್ರಶಾಂತ್ ಸೊಪ್ಪಿಮಠ, ಭಾವನಾ ರೆಡ್ಡಿ, ಮನೋಜ್ ಕುಮಾರ್, ಧನುಷ್, ಪ್ರದೀಪ್, ದೀಪಕ್, ಮಧು ಮಂದಗೆರೆ ಮುಂತಾದವರಿದ್ದಾರೆ.


