'Common Man' movie motion poster released

‘ಕಾಮನ್ ಮ್ಯಾನ್’ ಚಿತ್ರ ಮೋಷನ್ ಪೋಸ್ಟರ್ ಬಿಡುಗಡೆ - CineNewsKannada.com

‘ಕಾಮನ್ ಮ್ಯಾನ್’ ಚಿತ್ರ ಮೋಷನ್ ಪೋಸ್ಟರ್ ಬಿಡುಗಡೆ

ಕೆರೆಬೇಟೆ ಖ್ಯಾತಿಯ ಗೌರೀಶಂಕರ್ ಚಿತ್ರದ ನಾಯಕನಾಗಿ ನಟಿಸಿರುವ ಚಿತ್ರ “ಕಾಮನ್ ಮ್ಯಾನ್”. ಒಬ್ಬ ಸಾಮಾನ್ಯ ಲಾಯರ್ ರಾಜ್ಯದ ಮುಖ್ಯಮಂತ್ರಿ ಹೇಗಾಗ್ತಾನೆ ಎಂದು ಹೇಳುವ ಚಿತ್ರ. ಸಮಾಜ ಸೇವಕ ಎನ್. ನರಸಿಂಹಮೂರ್ತಿ ಕಥೆ ಬರೆದು ಸುರಭಿ ಫಿಲಂಸ್ ಅಡಿ ನಿರ್ಮಾಣ ಮಾಡಿರುವ ಚಿತ್ರಕ್ಕೆ ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರು ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ನಿರ್ಮಾಪಕರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ವಿನಯ ಚಂದ್ರ ಸಂಗೀತ, ಜೆ.ಜಿ.ಕೃಷ್ಣ, ದೀಪಕ್ ಕುಮಾರ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ಈ ಚಿತ್ರಕ್ಕಿದೆ.

ನಿರ್ಮಾಪಕ ಎನ್. ನರಸಿಂಹಮೂರ್ತಿ ಮಾತನಾಡಿ ನಿರ್ಮಾಣದ 3 ನೇ ಚಿತ್ರ. ಮೊದಲು ನಮ್ಮ ಚಿತ್ರಕ್ಕೆ ನಾನೇ ಸಿಎಂ ಎಂಬ ಟೈಟಲ್ ಅಂದುಕೊಂಡಿದ್ದೆವು. ಕಾಮನ್ ಮ್ಯಾನ್ ಅಂತ ಚೇಂಜ್ ಮಾಡಿಕೊಂಡೆವು. ಸಾಯಿಪ್ರಕಾಶ್ ಅ ಜತೆ ಸಿನಿಮಾ ಮಾಡುತ್ತಿದ್ದೇನೆ ಅಂದಾಗ ತುಂಬಾ ಜನ ಅವರದು ಓಲ್ಡ್ ಸ್ಟೈಲ್ ಅಂದರು. ಅದನ್ನೇ ನಾನು ಚಾಲೆಂಜ್ ಆಗಿ ತಗೊಂಡೆ, ಅಂಥವರ ಅನುಭವ, ಬುದ್ದಿವಂತಿಕೆ, ಕೆಲಸ ನಮಗೆ ಸಾಧ್ಯವಿಲ್ಲ. ಚಿತ್ರದ ಥೀಮ್ ಚೆನ್ನಾಗಿದೆ. ಒಬ್ಬ ಎಂಎಲ್‍ಎ ಆಗಬೇಕಾದರೂ ಚುನಾವಣೆ ನಡೆಯಬೇಕು. ಚಿತ್ರದ ನಾಯಕ ವಿಥೌಟ್ ಎಲೆಕ್ಷನ್ ಸರ್ಕಾರದ ಮೇಲೆ ಒತ್ತಡ ತಂದು ಹೇಗೆ ಸಿಎಂ ಆಗ್ತಾನೆ ಅನ್ನೋದೇ ಚಿತ್ರದ ಕಥೆ. ವಿನಯಚಂದ್ರ 4 ಹಾಡುಗಳನ್ನು ತುಂಬಾ ಚನ್ನಾಗಿ ಮಾಡಿದ್ದಾರೆ. ಚೈತ್ರಾ ಆಚಾರ್, ಕೈಲಾಶ್ ಖೇರ್, ಬಾಬಾ ಸೈಗಲ್ ರಂಥ ಗಾಯಕರು ದನಿಯಾಗಿದ್ದಾರೆ ಎಂದರು.

ನಿರ್ದೇಶಕ ಸಾಯಿಪ್ರಕಾಶ್ ಮಾತನಾಡಿ ನಿರ್ದೇಶನದ 106ನೇ ಚಿತ್ರ. ಒಬ್ಬ ಕಾಮನ್ ಮ್ಯಾನ್ ರಾಜ್ಯದ ಸಿಎಂ ಆದರೆ ಏನು ಮಾಡಬಹುದು ಎಂದು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ. ನಾಯಕ ಒಬ್ಬ ಲಾಯರ್, ಆತ ಅನಿರೀಕ್ಷಿತವಾಗಿ ರಾಜ್ಯದ ಸಿಎಂ ಆಗಿ ಏನೇನು ಸುಧಾರಣೆ ಮಾಡಬಹುದು, ಅದು ಸಾಧ್ಯವಾಯಿತಾ ಎಂಬುದನ್ನು ಕುತೂಹಲಕರವಾಗಿ ಹೇಳೋ ಪ್ರಯತ್ನ ಮಾಡಿದ್ದೇನೆ. ಹಿರಿಯ ನಟ ಅಶೋಕ್ ರಾಜ್ಯಪಾಲರ ಪಾತ್ರ ಮಾಡಿದ್ದಾರೆ.

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದು ಅವಕಾಶ ಬರುತ್ತೆ. ಹಾಗೇ ನಾಯಕನಿಗೂ ಅದು ಬಂದಾಗ ಅದನ್ನಾತ ಹೇಗೆ ಯುಟಲೈಸ್ ಮಾಡಿಕೊಳ್ತಾನೆ, ಇದೊಂದು ಫ್ಯಾಮಿಲಿ ಎಂಟರ್ ಟೈನರ್. ನಾಯಕ ಗೌರಿಶಂಕರ್ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ನಾಯಕಿ ಸೋನಾ ಲದ್ವಾ ಕೂಡ ಚೆನ್ನಾಗಿ ಅಭಿನಯಿಸಿದ್ದಾರೆ. ಬಾಂಬೆ ಮೂಲದ ಮತ್ತೊಬ್ಬ ನಟಿಯೂ ಚಿತ್ರದಲ್ಲಿದ್ದಾರೆ. ಕ್ಯಾಮೆರಾ ಮ್ಯಾನ್ ಕೃಷ್ಣ, ಡೈಲಾಗ್ ರೈಟರ್ ಶೈಲೇಶ್ ಎಲ್ಲರೂ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ನಾಯಕ ಗೌರಿಶಂಕರ್ ಮಾತನಾಡಿ ಮೂರನೇ ಚಿತ್ರ. ಕೆರೆಬೇಟೆ ನಂತರ ಒಂದೊಳ್ಳೆ ಕಥೆಗಾಗಿ ಕಾಯ್ತಿದ್ದೆ. ಬಯಸಿದಂಥ ಪಾತ್ರವೇ ಹುಡುಕಿಕೊಂಡು ಬಂದಿತ್ತು. ನಿರ್ಮಸಪಕರು ನಮ್ಮಂಥ ಕಲಾವಿದರಿಗೆ ಅವಕಾಶ ಕೊಟ್ಟಿದ್ದಾರೆ. ಚಿತ್ರದಲ್ಲಿ ಅವರ ಪಾತ್ರವೂ ಚೆನ್ನಾಗಿದೆ. ಕಥೆ ಏನು ಕೇಳುತ್ತೋ ಅದನ್ನೆಲ್ಲ ಒದಗಿಸಿಕೊಟ್ಟಿದ್ದಾರೆ. ಅವರಿಗೆ ದೊಡ್ಡ ಯಶಸ್ಸು ಸಿಗಬೇಕು. ಇಂಥ ದೊಡ್ಡ ನಿರ್ದೇಶಕರ ಜತೆ ಕೆಲಸ ಮಾಡಿರುವುದು ಯಾವುದೋ ಜನ್ಮದ ಪುಣ್ಯ. ಆಗಸ್ಟ್ ವೇಳೆಗೆ ಕಾಮನ್ ಮ್ಯಾನ್ ರಿಲೀಸಾಗಲಿದೆ ಎಂದು ಹೇಳಿದರು.

ಚಿತ್ರದ ಉಳಿದ ಪಾತ್ರಗಳಲ್ಲಿ ಗಣೇಶರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು ನಟಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin