Young talents' "Love Season" is set to hit the screens on July 3rd

ಯುವ ಪ್ರತಿಭೆಗಳ “ಲವ್ ಸೀಸನ್” ಜುಲೈ 3 ರಂದು ತೆರೆಗೆ ಬರಲು ಸಜ್ಜು - CineNewsKannada.com

ಯುವ ಪ್ರತಿಭೆಗಳ “ಲವ್ ಸೀಸನ್” ಜುಲೈ 3 ರಂದು ತೆರೆಗೆ ಬರಲು ಸಜ್ಜು

ಪ್ರೀತಿಯ ಮೂರು ಆವೃತ್ತಿಯನ್ನು ತೋರಿಸುವ “ಲವ್ ಸೀಸನ್” ಚಿತ್ರ ಜುಲೈ 3 ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಮೆಲೋಡಿ ಹಾಡುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು, ಚಿತ್ರದ ಹಾಡುಗಳು ಮೂಡಿಬಂದಿರುವ ಪರಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ

ಯುವ ನಟ ಮುಕುಂದ ರಾಮಸ್ವಾಮಿ ನಾಯಕನಾಗಿ ಕಾಣಿಸಿಕೊಂಡಿರುವ ಚಿತ್ರದಲ್ಲಿ ಶ್ವೇತಾ ಕೋಗಲೂರು, ದಿಯಾ ಕೀರ್ತಿ, ಚಂದನ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕೃತ್ವಿಕ್ ಆಕ್ಷನ್‍ಕಟ್ ಹೇಳಿದ್ದು ಮಂಜುನಾಥ್ ಬಂಡವಾಳ ಹೂಡಿದ್ದಾರೆ.

ನಿರ್ದೇಶಕ ಕೃತ್ವಿಕ್ ಮಾತನಾಡಿ, ಪ್ರೀತಿಯನ್ನು ಮೂರು ಸೀಸನ್‍ಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ,ಒಂದೊಂದು ಸೀಸನ್ ಕೂಡ ಅದ್ಬುತವಾಗಿ ಮೂಡಿ ಬಂದಿದೆ. ನಿರ್ಮಾಪಕ ಮಂಜುನಾಥ್ ಅವರ ಚಿತ್ರಕ್ಕೆ ಯಾವುದೇ ರೀತಿಯಲ್ಲಿ ಕೊರತೆಯಾಗದಂತೆ ಚಿತ್ರ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ, ಹಾಡುಗಳು ಚೆನ್ನಾಗಿ ಮೂಡಿ ಬಂದಿದ್ದು ಜುಲೈ 3 ರಂದು ಚಿತ್ರ ತೆರೆಗೆ ಬರಲಿದೆ ಎಂದು ಎಲ್ಲರ ಸಹಕಾರವಿರಲಿ ಎಂದರು

ನಿರ್ಮಾಪಕ ಮಂಜುನಾಥ್ ಮಾತನಾಡಿ, ಹೊಸಬರಾದರೂ ಚಿತ್ರರಂಗದ ಬಗ್ಗೆ ಸಾಕಷ್ಟು ವಿಷಯ ಸಂಗ್ರಹಿಸಿದ್ದೇವೆ. ಹೊಸಬರ ತಂಡಕ್ಕೆ ಚಿತ್ರರಂಗದ ಯಾರೊಬ್ಬರೂ ನೆರವಿಗೆ ಬರುವುದಿಲ್ಲ ಎನ್ನುವುದು ಅರಿವಾಗಿದೆ ಚಿತ್ರದ ಕಥೆ ಹಾಡುಗಳು ಚೆನ್ನಾಗಿದೆ, ಹೀಗಾಗಿ ನಮ್ಮ ಕಥೆಯ ಮೇಲೆ ನಮಗೆ ನಂಬಿಕೆ ಇದೆ. ಒಳ್ಳೆಯ ಚಿತ್ರ ಮಾಡಿದ್ದೇವೆ, ಮುಂದೆಯೂ ಒಳ್ಳೆಯ ಚಿತ್ರ ಮಾಡುತ್ತೇವೆ ಎಂದು ಹೇಳಿದರು.

ನಾಯಕ ಮುಕುಂದ ರಾಮಸ್ವಾಮಿ ಮಾತನಾಡಿ, ಇಡೀ ತಂಡ ಶ್ರಮಪಟ್ಟು ಸಿನಿಮಾ ಮಾಡಿದ್ದೇವೆ. ಚಿತ್ರಕ್ಕೆ ಏನು ಬೇಕೋ ಅದನ್ನು ನೀಡಿದ್ದೇವೆ, ಪ್ರತಿಭೆಯ ಮೇಲೆ ನಂಬಿಕೆ ಇದೆ, ಹೊಸ ತಂಡವನ್ನು ಬೆಳಸಿ ಎಂದು ಕೇಳಿಕೊಂಡರು

ನಾಯಕಿ ಶ್ವೇತಾ ಕೋಳಲೂರು ಮಾತನಾಡಿ “ಪ್ರೇಮಕಾವ್ಯ” ಸೀರಿಯಲ್ಲಿ ನಟಿಸುತ್ತಿದ್ದೇನೆ. ಹಿರಿ ತೆರೆಯಲ್ಲಿ ಕೆಲಸ ಮಾಡಿದ್ದು ಖುಷಿ ಆಗಿದೆ ಎಂದರು

ಪ್ರೇಮ ಕವಿ ಕೆ ಕಲ್ಯಾಣ್ ಮಾತನಾಡಿ, ಓದಿದ್ದೇ ಹತ್ರನೇ ತರಗತಿ ಆದರೆ ದೇವರು ಬರೆಯುವ ಕೆಲಸ ನೀಡಿದರು.ಹಾಡು ಚೆನ್ನಾಗಿ ಮೂಡಿಬಂದಿದೆ. ನಿರ್ಮಾಪಕರು ಒಳ್ಳೆಯ ಸಿನಿಮಾ ಮಾಡಿದ್ದಾರೆ ಎನ್ನುವ ನಂಬಿಕೆ ಇದೆ ಚಿತ್ರಕ್ಕೆ ಎಲ್ಲರ ಸಹಕಾರವಿರಲಿ ಎಂದರು.

ಸಂಗೀತ ನಿರ್ದೆಶಕ ವೀರ್ ಸಮರ್ಥ್ ಮಾತನಾಡಿ , ಒಳ್ಳೆಯ ತಂಡ, ನಿರ್ಮಾಪಕರು ಚಿತ್ರಕ್ಕೆ ಅಗತ್ಯವಿದೆ. ಚಿತ್ರ ಗೆಲ್ಲಬೇಕು.. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಜನರು ನಿರ್ಧಾರ ಮಾಡಲಿದ್ದಾರೆ. ಯುವ ನಿರ್ದೇಶಕ ಕೃತ್ವಿಕ್ ಅವರಲ್ಲಿ ಜೋಶ್ ಇದೆ. ಚಿತ್ರದಲ್ಲಿ ಇಂಗ್ಲಿಷ್ ಹಾಡು ಸೇರಿದಂತೆ ನಾಲ್ಕು ಹಾಡುಗಳಿವೆ. ಕೆ.ಕಲ್ಯಾಣ್ ಬರೆದಿರುವ ಹಾಡು ಅತ್ಯುತ್ತಮವಾಗಿ ಮೂಡಿಬಂದಿದೆ ಎಂದು ಮಾಹಿತಿ ಹಂಚಿಕೊಂಡರು.

ಗೀತ ಸಾಹಿತಿ ಪ್ರಮೋದ್ ಮರವಂತೆ,ಗಾಯಕಿ ಪ್ರಜ್ಞಾ ಮರಾಠೆ , ಸಾಹಿತಿ ಸಾಯಿ ಸರ್ವಶ್ ಮತ್ತಿತರು ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಉಳಿದಂತೆ ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತ ಸೇರಿದಂತೆ ಹಲವು ಹಿರಿ ಕಿರಿಯ ಕಲಾವಿದರ ದೊಡ್ಡ ದಂಡೇ ಇದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin