“Balaramana Dindigul” movie song release: Cinema release on June 26th

“ಬಲರಾಮನ ದಿನಗಳು” ಚಿತ್ರ ಹಾಡು ಬಿಡುಗಡೆ: ಜೂನ್ 26ರಂದು ಸಿನಿಮಾ ತೆರೆಗೆ - CineNewsKannada.com

“ಬಲರಾಮನ ದಿನಗಳು” ಚಿತ್ರ ಹಾಡು ಬಿಡುಗಡೆ: ಜೂನ್ 26ರಂದು ಸಿನಿಮಾ ತೆರೆಗೆ

ಬಲರಾಮನ ದಿನಗಳು ಚಿತ್ರದ ಹಾಡುಗಳು ಬಿಡುಗಡೆಗೆ ಸಜ್ಜಾಗಿದೆ. ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್ ಸಂಗೀತದಲ್ಲಿ ಆಲ್ ಓಕೆ ಹಾಡಿರುವ ಗೀತೆಯನ್ನು ಬಿಡುಗಡೆ ಮಾಡಲಾಗಿದ್ದು ಚಿತ್ರ ಜೂನ್ 26ಕ್ಕೆ ಬಿಡುಗಡೆಯಾಗಲಿದೆ

ನಟ ವಿನೋದ್ ಪ್ರಭಾಕರ್ ಮಾತನಾಡಿ ತಂದೆ ಟೈಗರ್ ಪ್ರಭಾಕರ್ ಅವರು ಕಾರಣ. ಬಲರಾಮ ಏನಿದೆಯೋ ಟೈಗರ್ ಪ್ರಭಾಕರ್ ಬಿಟ್ಟೋದ ಅಧ್ಯಾಯ ನಾನು. ಚಿತ್ರರಂಗದಲ್ಲಿ ಅವರ ಕನಸು ಬಹಳ ಇತ್ತು. ನಾನು ಚಿತ್ರರಂಗಕ್ಕೆ ಬಂದಾಗ ಬಹಳ ಎಡವಿದೆ. ನಾನು ಇದಕ್ಕೆ ದಾರಿತಪ್ಪಿದ ಮಗ ಅಂತ ಇಂಟರ್‍ವ್ಯೂನಲ್ಲಿ ಇದಕ್ಕೆ ಹೇಳಿದೆ. ಮತ್ತೆ ನಾನು ಯೂಟರ್ನ್ ಮಾಡಿಕೊಂಡು ಬಂದೆ ಎಂದರು

ಈಗ ಕಂಟೆಂಟೇ ಹೀರೋ, ನಿರ್ಮಾಪಕರಿಗೆ ಧನ್ಯವಾದ, ಟೈಗರ್ ಪ್ರಭಾಕರ್ ಅವರ ಮುಂದುವರಿದ ಅಧ್ಯಾಯ ಅಂತ ಮತ್ತೊಮ್ಮೆ ಹೇಳ್ತೇನೆ. ಪ್ರತಿ ಅವಾರ್ಡ್ ಏನೇ ತಗೊಂಡರು ನನ್ನ ತಂದೆಗೆ ಸಲ್ಲುತ್ತದೆ. ಆಲ್ ಓಕೆ ಅವರ ಎಲ್ಲಾ ಟೀಮ್‍ಗೆ ಧನ್ಯವಾದ ಹೇಳಿದರು. ಸಾಂಗ್ ಬಹಳ ಚೆನ್ನಾಗಿ ಮೂಡಿ ಬಂದಿದೆ. ಪಟಾನ್ ಅವರು ಬಹಳ ಚೆನ್ನಾಗಿ ಮನರಂಜಿಸಿದ್ರು. ಈ ಸಾಂಗ್ ಖಂಡಿತ ಹಿಟ್ ಆಗುತ್ತೆ. ಆಲ್ ಓಕೆ ಅವರು ನಮ್ಮ ಸಿನಿಮಾಗೆ ಕೆಲಸ ಮಾಡಿದ್ದಕ್ಕೆ ನಾನು ಚಿರಋಣಿ ಎಂದು ಹೇಳಿದರು. ನಮ್ಮ ಕೆವಿಎಲ್ ಸಂಸ್ಥೆ ಜೊತೆಗೆ, ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದ ಹೇಳಿದರು. ಅವತ್ತಿನ ಜನರೇಷನ್‍ಗೂ ಇವತ್ತಿನ ಜನರೇಷನ್‍ಗೂ ಮ್ಯಾಚ್ ಮಾಡೋಕೆ ಈ ಸಾಂಗ್ ಇದೆ ಎಂದು ಹೇಳಿದರು.

ನಿರ್ಮಾಪಕ ಶ್ರೇಯಸ್ ಮಾತನಾಡಿ ಮಧ್ಯರಾತ್ರಿ ನನಗೆ ಈ ಪದ್ಯ ಕುರಿತು ಹೇಳುತ್ತಾರೆ. ಐದೂವರೆಗೆ ಫೈನಲ್ ವರ್ಷನ್ ಬರುತ್ತೆ. ಅದನ್ನು ಕೇಳಿ ನನ್ನ ಮೈ ಜುಂ ಅನಿಸ್ತು ತುಂಬಾ ಧನ್ಯವಾದ ಹೇಳ್ತೀನಿ ಎಂದು ಹೇಳಿದರು.

ನಿರ್ಮಾಪಕಿ ಪದ್ಮಾವತಿ ಮಾತನಾಡಿ ಈ ಪದ್ಯ ಕುರಿತು ಮಾತಲ್ಲಿ ಹೇಳಿದರೆ ಸಾಲದು, ಮನಸ್ಸಿಂದ ಹೇಳ್ತಾ ಇದ್ದೀನಿ. ಆಲ್ ಓಕೆ ಅವರಿಗೆ ಧನ್ಯವಾದ. ಕೇವಲ ಆರು ದಿನ ಇದೆ ಭಯ ಆಗ್ತಿದೆ. ಇವತ್ತಿನ ಟ್ರೆಂಡ್‍ಗೆ ಈ ತರಹ ಪದ್ಯ ಬೇಕು. ಯೂತ್‍ಗೆ ಇದು ಇಷ್ಟ ಆಗುತ್ತದೆ ಎನ್ನುವ ಭರವಸೆ ಇದೆ. ನನಗೆ ಸಾಂಗ್ ಕೇಳಿ ಶಾಕ್ ಆಯಿತು. ಅಷ್ಟು ಚೆನ್ನಾಗಿದೆ. ಇದೊಂದು ಸಾಂಗ್ ದೊಡ್ಡಮಟ್ಟಕ್ಕೆ ನಿಂತಿದೆ ಎಂದು ಹೇಳಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin