Gilli actor's new film to launch on June 21st

ಗಿಲ್ಲಿ ನಟನ ಹೊಸ ಚಿತ್ರಕ್ಕೆ ಜೂನ್ 21 ರಂದು ಮಹೂರ್ತ - CineNewsKannada.com

ಗಿಲ್ಲಿ ನಟನ ಹೊಸ ಚಿತ್ರಕ್ಕೆ ಜೂನ್ 21 ರಂದು ಮಹೂರ್ತ

ಕೆವಿಎನ್ ಅರ್ಪಿಸುವ ,ಕೆವಿಎನ್ ಪ್ರೊಡಕ್ಷನ್ಸ್ ನ ಕಾರ್ಯಕಾರಿ ನಿರ್ಮಾಪಕರಾದ ನವೀನ್ ಮತ್ತು ಹರೀಶ್ ಚೊಚ್ಚಲ ನಿರ್ಮಾಣದ ಗಿಲ್ಲಿ ನಟನ ನೂತನ ಸಿನಿಮಾ ಸೆಟ್ಟೇರಲು ಸಜ್ಜಾಗಿದೆ

ಜೂನ್ 21 ರಂದು ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರ ಸೆಟ್ಟೇರುತ್ತಿದೆ. ಗಿಲ್ಲಿ ನಟ ನಾಯಕ ನಟನಾಗಿ ಅಭಿನಯಿಸುತಿದ್ದಾರೆ. ಹಾಸ್ಯ ಚಿತ್ರಗಳಿಗೆ ಬ್ರ್ಯಾಂಡ್ ಆಗಿರುವ ನಿರ್ದೇಶಕ ಚಂದ್ರ ಮೋಹನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.

ಕೆ.ವಿ.ಎನ್ ಪ್ರೊಡಕ್ಷನ್ಸ್ ನ ಸಂಸ್ಥಾಪಕ ಕೆ. ವೆಂಕಟ ನಾರಾಯಣ ಮತ್ತು ಬ್ಯುಸಿನೆಸ್ ಹೆಡ್ ಸುಪ್ರಿತ್ ಹರೀಶ್ ಮತ್ತು ನವೀನ್ಗೆ ಸಾಥ್ ನೀಡ್ತಿದ್ದಾರೆ.ಈ ಚಿತ್ರ ಸದ್ಯದಲ್ಲೇ ಸೆಟ್ಟರೇಲಿದ್ದು ಚಿತ್ರದ ಮುಹೂರ್ತಕ್ಕೆ ವಿಭಿನ್ನ ಪ್ರೊಮೊ ಮಾಡಿ ಚಿತ್ರತಂಡ ಗಮನ ಸೆಳೆಯುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin