Raj B Shetty- Pajwal Devaraj starrer “Karavali” to hit the screens on July 24

ರಾಜ್ ಬಿ ಶೆಟ್ಟಿ- ಪಜ್ವಲ್ ದೇವರಾಜ್ ನಟನೆಯ “ಕರಾವಳಿ” ಚಿತ್ರ ತೆರೆಗೆ ಜುಲೈ 24 ರಂದು ತೆರೆಗೆ - CineNewsKannada.com

ರಾಜ್ ಬಿ ಶೆಟ್ಟಿ- ಪಜ್ವಲ್ ದೇವರಾಜ್ ನಟನೆಯ “ಕರಾವಳಿ” ಚಿತ್ರ ತೆರೆಗೆ ಜುಲೈ 24 ರಂದು ತೆರೆಗೆ

ಕಳೆದ ವರ್ಷ “ಸು ಫ್ರಂ ಸೋ” ಭರವಸೆಯ ಬೆಳಕಾಗಿ ಬಂತು. ಕಳೆದ ವರ್ಷ ಜುಲೈ 24ಕ್ಕೆ ಬಿಡುಗಡೆಯಾಗಿ ಸದ್ದು ಮಾಡಿತ್ತು.ಇದರ ಬೆನ್ನಲ್ಲೇ ರಾಜ್ ಬಿ ಶೆಟ್ಟಿ ಅಭಿನಯದ ಕರಾವಳಿ ಜುಲೈ 24 ರಂದು ತೆರೆಗೆ ಬರಲು ಸಜ್ಜಾಗಿದೆ

ಗುರುದತ್ ಗಾಣಗ ನಿರ್ದೇಶನದ ರಾಜ್ ಬಿ ಶೆಟ್ಟಿ, ಪ್ರಜ್ವಲ್ ದೇವರಾಜ್ ನಟನೆಯ ಕರಾವಳಿ ಸಿನಿಮಾ ಸಿನಿಮಾದ ರಿಲೀಸ್ ಡೇಟ್ ಅನ್ನೌಸ್ ಆಗಿದ್ದು, ಜುಲೈ 24ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.

ಈಗಾಗಲೇ ಪೆÇೀಸ್ಟರ್ ಮತ್ತು ಟೀಸರ್‍ಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಕರಾವಳಿ ಕೊನೆಗೂ ತೆರೆಗೆ ಬರುತ್ತಿದೆ. ಸು ಫ್ರಂ ಸೋ ಹಾಗಯೇ ಕರಾವಳಿ ಕೂಡ ಚಿತ್ರರಂಗಕ್ಕೆ ಗೇಮ್ ಚೇಂಜರ್ ಆಗಲಿದೆ ಎನ್ನುವ ಭರವಸೆ ಮೂಡಿಸಿದೆ. ಕಳೆದ ವರ್ಷ ಜುಲೈ ತಿಂಗಳು ಕನ್ನಡ ಸಿನಿಮಾರಂಗ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿತ್ತು. ಸು ಫ್ರಂ ಸೋ ಎಕ್ಕ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ್ದವು. ಈ ವರ್ಷದ ಜುಲೈ ಕೂಡ ಕನ್ನಡ ಸಿನಿಮಾರಂಗದ ಕಳೆ ಹೆಚ್ಚಾಗುವ ಸಾಧ್ಯತೆ ಕಾಣುತ್ತಿದೆ.

ಕರಾವಳಿ ಹೆಸರೆ ಹೇಳುವ ಹಾಗೆ ಅಲ್ಲಿನ ಸಂಸ್ಕೃತಿ, ಸೊಗಡಿನ ಬಗ್ಗೆ ಇರುವ ಸಿನಿಮಾ. ಪ್ರಜ್ವಲ್ ದೇವರಾಜ್‍ಗೆ ನಾಕಿಯಾಗಿ ಸಂಪದಾ ನಟಿಸಿದ್ದಾರೆ. ಇನ್ನೂ ಉಳಿದಂತೆ ಸಿನಿಮಾದ ಪವರ್ ಫುಲ್ ಪಾತ್ರದಲ್ಲಿ ನಟ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಸೇರಿದಂತೆ ದೊಡ್ಡ ತಾರಾಬಳಗವಿದೆ.

ಕರಾವಳಿ, ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಗಾಣಿಗ ಫಿಲ್ಮ್ಸ್‍ನಲ್ಲಿ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿ ಬಂದಿದೆ. ಸಚಿನ್ ಬಸ್ರೂರು ಸಂಗೀತ, ಅಭಿಮನ್ಯೂ ಸದಾನಂದನ್ ಕ್ಯಾಮರ ವರ್ಕ್ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin