Actor Chandan Kumar's directorial film "Flutter" is set for a re-release

ನಟ ಚಂದನ್ ಕುಮಾರ್ ನಿರ್ದೇಶನದ “ಪ್ಲರ್ಟ್” ಚಿತ್ರ ಮರುಬಿಡುಗಡೆಗೆ ಸಜ್ಜು - CineNewsKannada.com

ನಟ ಚಂದನ್ ಕುಮಾರ್ ನಿರ್ದೇಶನದ “ಪ್ಲರ್ಟ್” ಚಿತ್ರ ಮರುಬಿಡುಗಡೆಗೆ ಸಜ್ಜು

ನಾಯಕ ನಟ ಚಂದನ್ ಕುಮಾರ್ ಮೊದಲಬಾರಿಗೆ ಆಕ್ಷನ್-ಕಟ್ ಹೇಳಿದ್ದ ಚಿತ್ರ ‘ಫ್ಲರ್ಟ್’ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಹಾಗೂ ಉತ್ತಮ ವಿಮರ್ಶೆ ಸಹ ಪಡೆದುಕೊಂಡಿತ್ತು. ಆ ಸಮಯದಲ್ಲಿ ಹಲವಾರು ಚಿತ್ರಗಳು ಬಿಡುಗಡೆಯಾದ ಕಾರಣ, ನಮ್ಮ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರನ್ನು ತಲುಪಬೇಕು ಎಂದು ಎಲ್ಲಾ ಥೇಟರುಗಳಿಂದ ಚಿತ್ರವನ್ನು ಹಿಂಪಡೆಯಲಾಗಿತ್ತು. ನಂತರ ಚಿತ್ರದ ಕೆಲ ದೃಶ್ಯಗಳನ್ನು ಟ್ರಿಮ್ ಮಾಡಿದಾಗ ‘ಫ್ಲರ್ಟ್’ ಹೊಸದೊಂದು ರೂಪ ಪಡೆದುಕೊಂಡಿದೆ,

ಇದೀಗ ಚಿತ್ರವನ್ನು ರೀರಿಲೀಸ್ ಮಾಡಲು ಚಂದನ್ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಸದ್ಯದಲ್ಲೇ ಹೊಸ ಫ್ಲರ್ಟ್ ರಾಜ್ಯಾದ್ಯಂತ ತೆರೆಕಾಣಲಿದೆ. ವಿಶೇಷವಾಗಿ ಈ ಚಿತ್ರದ ಹಾಡುಗಳನ್ನು ಕೇಳಿದ ಲಹರಿ ವೇಲು ಅವರು ತುಂಬಾ ಇಷ್ಟಪಟ್ಟು ಆಡಿಯೋ ರೈಟ್ಸ್ ಪಡೆದುಕೊಂಡಿದ್ದಾರೆ.

ಚಂದನ್ ಅವರೇ ಚಿತ್ರದ ನಾಯಕನಾಗಿ ನಟಿಸಿದ್ದಲ್ಲದೆ ಎವರೆಸ್ಟ್ ಪಿಕ್ಚರ್ಸ್ ಮೂಲಕ ನಿರ್ಮಾಣ ಕೂಡ ಮಾಡಿದ್ದರು. ಎ ಪ್ಯೂರ್ ಡವ್ ಸ್ಟೋರಿ ಎಂಬ ಅಡಿಬರಹ ಇರುವ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ಫ್ರೆಂಡ್ ಶಿಪ್ ಕುರಿತಾದ ಹಾಡೊಂದನ್ನು ಹಾಡಿದ್ದರು. ಚಂದನ್ ಚಂದನ್ ನಮ್ಮನೆ ಹುಡುಗ ಅಂತಲೇ ಸಪೋರ್ಟ್ ಮಾಡುತ್ತಾ ಬಂದಿರುವ ಕಿಚ್ಚ ಸುದೀಪ್ ಅವರೇ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದರು.ಸುದೀಪ್ ಹಾಡಿದ್ದ ‘ನೀ ನನ್ನ ಜೀವ …’ ಎಂಬ ಫ್ರೆಂಡ್‍ಶಿಪ್ ಹಾಡು ಅತಿಹೆಚ್ಚು ವೀಕ್ಷಣೆಯಾಗಿ ಟ್ರೆಂಡಿಂಗ್ ನಲ್ಲಿದೆ.

ನಟ ಚಂದನ್ ಮಾತನಾಡಿ ಇದೊಂದು ರೋಮ್ ಕಾಮ್ ಸಿನಿಮಾ ಆದರೂ ಫ್ರೆಂಡ್ ಶಿಪ್, ಲವ್, ಹೀಗೆ ಎಲ್ಲಾ ಥರದ ಮನರಂಜನೆ ಒಳಗೊಂಡಿದೆ. ‘ಫ್ಲರ್ಟ್’ ಎಂದರೆ ಬರೀ ಚುಡಾಯಿಸುವುದು ಎಂದರ್ಥವಲ್ಲ. ಗಾಢವಾದ ಪ್ರೀತಿಯನ್ನೂ ಸಹ ಫ್ಲರ್ಟ್ ಎಂದೇ ಕರೆಯುತ್ತಾರೆ. ಎಲ್ಲರ ಡವ್‍ನಲ್ಲೂ ಒಂದೊಂದು ಲವ್ ಇರುತ್ತದೆ. ಚಿತ್ರದಲ್ಲಿ ಎಲ್ಲ ಪಾತ್ರಗಳಿಗೂ ವ್ಯಾಲ್ಯೂ ಇದೆ. ರೋಮ್ ಕಾಮ್ ಜತೆಗೆ ಸೈಕೋ ಕ್ಯಾರೆಕ್ಟರ್ ಕೂಡ ಇದೆ. ನೀವೆಲ್ಲ ಚಿತ್ರನೋಡಿ ಹರಸುತ್ತೀರೆಂಬ ನಂಬಿಕೆಯಿಂದ ರೀರಿಲೀಸ್ ಮಾಡುತ್ತಿದ್ದೇನೆ ಎಂದಿದ್ದಾರೆ.

ಚಿತ್ರದ ನಾಯಕಿಯರಾಗಿ ನಿಮಿಕಾ ರತ್ನಾಕರ್, ಅಕ್ಷತಾ ಬೋಪಣ್ಣ ಅಭಿನಯಿಸಿದ್ದು, ಜಡ್ಜ್ ಪಾತ್ರದಲ್ಲಿ ಹಿರಿಯನಟ ಅವಿನಾಶ್, ಸ್ನೇಹಿತನಾಗಿ ಗಿರೀಶ್ ಶಿವಣ್ಣ, ಹಿರಿಯ ನಟಿ ಶೃತಿ, ಸಾಧು ಕೋಕಿಲ, ವಿನಯ್ ಗೌಡ ನಟಿಸಿದ್ದಾರೆ.

ಸುದೀಪ್ ಹಾಡಿಗೆ ನಕುಲ್ ಅಭಯಂಕರ್ ಮ್ಯೂಸಿಕ್ ಮಾಡಿದ್ದು, ಜಸ್ಸಿ ಗಿಫ್ಟ್ ಉಳಿದ 3 ಹಾಡುಗಳ ಜತೆಗೆ ಹಿನ್ನೆಲೆ ಸಂಗೀತವನ್ನೂ ಒದಗಿಸಿದ್ದಾರೆ. ಹೆಚ್.ಸಿ. ವೇಣು ಛಾಯಾಗ್ರಹಣ ಚಿತ್ರಕ್ಕಿದೆ,

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin