Horror, Suspense, Thriller movie “KA-18”

ಹಾರರ್,ಸೆಸ್ಪೆನ್ಸ್,ಥ್ರಿಲ್ಲರ್ ಕಥಾನಕದ “ಕೆಎ-18 ಚಿತ್ರಕ್ಕೆ ಮುಹೂರ್ತ - CineNewsKannada.com

ಹಾರರ್,ಸೆಸ್ಪೆನ್ಸ್,ಥ್ರಿಲ್ಲರ್ ಕಥಾನಕದ “ಕೆಎ-18 ಚಿತ್ರಕ್ಕೆ ಮುಹೂರ್ತ

ವಿನೂತನ ಶೀರ್ಷಿಕೆ ‘ಕೆಎ-18’ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಚಿತ್ರಕ್ಕೆ ಹಿರಿಯ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಳಿಯ ನಟ ಮನೋಜ್ ಕ್ಯಾಮಾರ ಮಾಡಿದರು. ಹಿರೇಮಗಳೂರು ಮೂಲದ ಎ.ಟಿ.ಎಂ.ಮಂಜು ನಿರ್ಮಾಣ ಮಾಡುವುದರ ಜತೆಗೆ ನಾಯಕನಾಗಿ ಹಚ್ಚಿದ್ದಾರೆ. ಮೋಹನ್ ಚಿಕ್ಕಿ ಮೂರನೇ ಸಿನಿಮಾಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಉತ್ತರಕಾಂಡದ ಸೋನಿಯಾ ರಾವುತ್ ಸಹ ನಿರ್ಮಾಪಕಿ ಹಾಗೂ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಚಿತ್ರವು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿರುವುದು ವಿಶೇಷ.

ಮುಖ್ಯ ಪಾತ್ರದಲ್ಲಿ ಎ.ಟಿ.ಎಂ.ಮಂಜು, ತನಿಷಾ ಕುಪ್ಪಂಡ, ಸೋನಿಯಾ ರಾವುತ್. ಖಳನಾಗಿ ದೀಪು ಇವರೊಂದಿಗೆ ವರ್ಧನ್, ವಿಜಿ, ಪೂಜಾ ಮುಂತಾದವರು ಅಭಿನಯಿಸಿದ್ದಾರೆ. ಶಶಿಕುಮಾರ್.ಜೆ.ಕೆ ಸಾಹಿತ್ಯ, ಛಾಯಾಗ್ರಹಣ ಮುಂಜಾನೆ ಮಂಜು, ಸಂಕಲನ ರಘು ಶಿವರಾಮ್, ಸಾಹಸ ವೈಲೆಂಟ್ ವೇಲು, ನಿರ್ಮಾಣ ನಿರ್ವಹಣೆ ಮಂಜುನಾಥ್ ದೈವಜ್ಞ ಅವರದಾಗಿದೆ.

ನಿರ್ದೇಶಕ ಮೋಹನ್ ಚಿಕ್ಕಿ ಮಾತನಾಡಿ ಗೆಳೆಯ ನಿರ್ದೇಶಕ ಆರ್ಯ ಮಹೇಶ್ ಸಹಕಾರ ಎಂದಿಗೂ ಮರೆಯಲಾಗದು. ನಿರ್ಮಾಪಕರು ಹೇಳಿದ ಒಂದು ಏಳೆಯನ್ನು ಬಳಸಿಕೊಂಡು ಅದನ್ನು ವಿಸ್ತಾರ ಮಾಡಿಕೊಳ್ಳಲಾಗಿದೆ. ಚಿತ್ರ ಎರಡು ಪಾತ್ರಗಳ ಸುತ್ತ ಸಾಯಂಕಾಲ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ನಡೆಯುವ ಘಟನೆಯಲ್ಲಿ ನಾಲ್ಕೈದು ಎಲಿಮೆಂಟ್ಸ್ ಬರುತ್ತದೆ. ಚಿಕ್ಕಮಗಳೂರು ಸ್ಥಳದಲ್ಲಿ ಸಂಪೂರ್ಣ ಚಿತ್ರೀಕರಣವನ್ನು ಒಂದೇ ಹಂತದಲ್ಲಿ ಮುಗಿಸಲು ಯೋಜನೆ ಹಾಕಲಾಗಿದೆ ಎಂದು ಹೇಳಿದ್ದಾರೆ.

ನಿರ್ಮಾಪಕ ಎ.ಟಿ.ಎಂ.ಮಂಜು ಮಾತನಾಡಿ ಶಾಲೆ ಕಾಲೇಜು ದಿನಗಳಿಂದಲೂ ನಾಟಕ ಪ್ರೇಮಿ. ಅಂದಿನಿಂದಲೇ ಸಿನಿಮಾ ಮಾಡಬೇಕೆಂಬ ಹುಚ್ಚು ಇತ್ತು. ಅದಕ್ಕೆ ಈಗ ಕಾಲ ಕೂಡಿಬಂದಿದೆ. 2000 ಇಸವಿಯಲ್ಲಿ ಅಪ್ಪನೊಂದಿಗೆ ಕೆಮ್ಮಣ್ಣುಗುಂಡಿಗೆ ಹೋಗಿದ್ದಾಗ ಅಲ್ಲಿ ನೋಡಿದಂತ ಘಟನೆಯನ್ನು ನಿರ್ದೇಶಕರಿಗೆ ಹೇಳಿದೆ. ಈ ಸ್ಥಳ ಹಾಗೂ ಆ ಸ್ಥಳದ ಮಧ್ಯೆ ಮೂಲಭೂತ ಸೌಕರ್ಯವಿಲ್ಲದ ಹಾದಿಯಲ್ಲಿ ಮುಖ್ಯ ಕಾರಣವನ್ನು ಸಂಶೋಧನೆ ಮಾಡಲು ಹೋಗುತ್ತಿದ್ದಾಗ ಒಂದಷ್ಟು ಅಡಚಣೆಗಳು ಬರುತ್ತದೆ. ಕೊನೆಗೆ ಅದರಿಂದ ರಕ್ಷಣೆ ಸಿಗುತ್ತದಾ ಇಲ್ಲವಾ ಎಂಬುದನ್ನು ಹೇಳ ಹೊರಟದ್ದೀವೆ. ಅಲ್ಲದೆ ಮೂಢನಂಬಿಕೆ ಅಂಶವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ನಾಯಕಿ ತನಿಷಾ ಕುಪ್ಪಂಡ ಮಾತನಾಡಿ ಅಂಕಿತಾ ಹೆಸರಿನಲ್ಲಿ ಕಾಡು ದಾರಿಯಲ್ಲಿ ಅಪರಿಚಿತ ವ್ಯಕ್ತಿಯೊಂದಿಗೆ ಪಯಣಿಸುವಾಗ ಸಣ್ಣ ಪುಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಯಾರು ಯಾರಿಗೆ ಒಳ್ಳೇದು, ಕೆಟ್ಟದ್ದು ಮಾಡುತ್ತಾರೆ ಎಂಬುದನ್ನು ಹೇಳ ಹೊರಟಿದ್ದಾರೆ ಎಂದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin