"O Belake Ba Belake" song from the movie 'Mother Promise' released: To be released on July 10th

‘ಮದರ್ ಪ್ರಾಮಿಸ್’ ಚಿತ್ರದ “ಓ ಬೆಳಕೆ ಬಾ ಬೆಳಕೆ” ಹಾಡು ಬಿಡುಗಡೆ : ಜುಲೈ 10ಕ್ಕೆ ಸಿನಿಮಾ ತೆರೆಗೆ - CineNewsKannada.com

‘ಮದರ್ ಪ್ರಾಮಿಸ್’ ಚಿತ್ರದ “ಓ ಬೆಳಕೆ ಬಾ ಬೆಳಕೆ” ಹಾಡು ಬಿಡುಗಡೆ : ಜುಲೈ 10ಕ್ಕೆ ಸಿನಿಮಾ ತೆರೆಗೆ

ಡಾಲಿ ಧನಂಜಯ ನಿರ್ಮಾಣ ಮತ್ತು ನಟನೆಯ “ಮದರ್ ಪ್ರಾಮಿಸ್” ಚಿತ್ರ ಜುಲೈ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಈ ನಡುವೆ ಚಿತ್ರದ “ಓ ಬೆಳಕೆ ಬಾ ಬೆಳಕೆ” ಹಾಡನ್ನು ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ಮಕ್ಕಳೊಂದಿಗೆ ಬಿಡುಗಡೆ ಮಾಡಲಾಗಿದೆ.

ಈಗಾಗಲೇ ವಿಭಿನ್ನ ರೀತಿಯ ಪ್ರಚಾರ, ಹಾಡುಗಳು ಮತ್ತು ಕಂಟೆಂಟ್ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿರುವ ಸಿನಿಮಾ “ಮದರ್ ಪ್ರಾಮಿಸ್” ಚಿತ್ರದ ಪ್ರೇಮಗೀತೆ, ಹಳ್ಳಿ ಸೊಗಡಿನ ಗೀತೆ ಬರೆದಿರುವ ಡಾಲಿ ಮೊದಲ ಬಾರಿಗೆ ಮಕ್ಕಳ ಪ್ರಾರ್ಥನಾ ಗೀತೆ ಬರೆದಿದ್ಧಾರೆ

ಡಾಲಿ ಧನಂಜಯ ಬರೆದಿರುವ “ಓ ಬೆಳಕೆ ಬಾ ಬೆಳಕೆ” ಹಾಡು ಮಕ್ಕಳ ಭಾವನಾತ್ಮಕ ಪ್ರಾರ್ಥನಾ ಗೀತೆಯಾಗಿದ್ದು, ಸಂಪೂರ್ಣ ಹಾಡನ್ನ ತುಮಕೂರಿನ ಸಿದ್ದಗಂಗಾ ಮಠದ ಅಂಗಳದಲ್ಲಿ ಮಕ್ಕಳ ಜೊತೆ ಚಿತ್ರೀಕರಣ ಮಾಡಲಾಗಿದೆ. ಮಕ್ಕಳ ಜೊತೆಯಲ್ಲಿ ಮದರ್ ಪ್ರಾಮಿಸ್ ಸಿನಿಮಾತಂಡವೂ ಸೇರಿ ದಿನ ಪೂರ್ತಿ ಮಠದ ಅಂಗಳ , ಶಾಲೆ , ಅಡುಗೆ ಕೋಣೆ ಹೀಗೆ ಪ್ರತಿ ಸ್ಥಳದಲ್ಲಿಯೂ ಸಮಯ ಕಳೆದು ಈ ಹಾಡನ್ನ ಚಿತ್ರೀಕರಿಸಿದ್ದಾರೆ.

ಸದಾ ಕಮರ್ಷಿಯಲ್ , ರೊಮ್ಯಾಂಟಿಕ್ ಹಾಡುಗಳ ಮಧ್ಯೆ ಇಂಥದೊಂದು ಪ್ರಾರ್ಥನಾ ಗೀತೆ ಕೇಳಿ ಸಿನಿಮಾ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಡಾಲಿ ಪಿಕ್ಚರ್ಸ್ ಸಹಯೋಗದೊಂದಿಗೆ ಗೆಳೆಯ ಹರ್ಷ ನಿರ್ಮಾಣ ಮಾಡಿದ್ದಾರೆ

ಮದರ್ ಪ್ರಾಮಿಸ್ ಅನ್ನೋದೇ ಎಮೋಷನಲ್ ಇದರ ಜೊತೆಗೆ ಕಾಮಿಡಿ ಹಾಗೂ ಥ್ರಿಲ್ ಇರುವ ಕಥೆಯನ್ನ ತೆರೆ ಮೇಲೆ ತರಲು ಸಿದ್ದವಾಗಿದ್ದಾರೆ ನಿರ್ದೇಶಕ ಪೂರ್ಣ ಚಂದ್ರ ಮೈಸೂರು. ಚಿತ್ರದಲ್ಲಿ ಡಾಲಿ ಧನಂಜಯ ಸೇರಿದಂತೆ ನಾಗಭೂಷಣ್ , ವಿನಯಪ್ರಸಾದ್ , ಗೀತಾ, ಗುರುದತ್ ಇವರ ಜೊತೆಯಲ್ಲಿ ಬಹುದೊಡ್ಡ ಹೊಸ ಕಲಾವಿದರ ದಂಡೇ ಸಿನಿಮಾದಲ್ಲಿದೆ

ಡಾಲಿ ಧನಂಜಯ ಅವರ ಸ್ನೇಹಿತ ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಾಪಕರಾಗಿ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ..ನಿರ್ದೇಶನದ ಜವಾಬ್ದಾರಿ ಪೂರ್ಣಚಂದ್ರ ಮೈಸೂರು ವಹಿಸಿಕೊಂಡಿದ್ದರೆ, ಡೇರ್ ಡೆವಿಲ್ ಮುಸ್ತಾಫ ಸಿನಿಮಾ ನಿರ್ದೇಶಕ ಶಶಾಂಕ್ ಕ್ರಿಯೇಟಿವ್ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ರಾಹುಲ್ ರಾಯ್ ಕ್ಯಾಮೆರಾ, ನವನೀತ್ ಶ್ಯಾಮ್ ಸಂಗೀತಾ ನಿರ್ದೇಶನ ಸಿನಿಮಾಗಿದೆ. ಚಿತ್ರ ಜುಲೈ 10 ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin