“ಲವ್ ಥಿಯರಿ” ಮೂಲಕ ನಾಯಕರಾಗಿ ನಿರ್ದೇಶಕ ಮನೋಜ್ ಪಿ ನಡಲುಮನೆ ಪಾದಾರ್ಪಣೆ
“ಆನ”, ” ಮೇರಿ” ಹಾಗೂ “ನೀ ನಂಗೆ ಅಲ್ಲವಾ” ಚಿತ್ರಗಳ ನಿರ್ದೇಶಕ ಮನೋಜ್ ಪಿ ನಡಲುಮನೆ ಈಗ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಪ್ರಸ್ತುತ “ನೀ ನಂಗೆ ಅಲ್ಲವಾ”, ” ಎಲ್ ಎಸ್ ಡಿ” ಹಾಗೂ ಶ್ರೀಮುರಳಿ ಅಭಿನಯದ “ಉಗ್ರಾಯುಧಮ್” ಚಿತ್ರಗಳ ನಿರ್ಮಾಪಕ ಜಯರಾಮ್ ದೇವಸಮುದ್ರ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಜಾನರ್ನ ಈ ಚಿತ್ರಕ್ಕೆ “ಲವ್ ಥಿಯರಿ” ಎಂದು ಹೆಸರಿಡಲಾಗಿದೆ. ನಾಯಕನಾಗಿ ನಟಿಸುತ್ತಿರುವ ಮನೋಜ್ ಪಿ ನಡುಲಮನೆ ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ

ನಾಯಕ ಹಾಗೂ ನಿರ್ದೇಶಕ ಮನೋಜ್ ಪಿ ನಡಲುಮನೆ ಮಾತನಾಡಿ ನಟನಾಗಬೇಕೆಂಬ ಹಂಬಲ ಮೊದಲಿನಿಂದಲೂ ಇತ್ತು. ಆಸೆಯನ್ನು ನಿರ್ಮಾಪಕ ಜಯರಾಮ್ ದೇವಸಮುದ್ರ ಪೂರೈಸುತ್ತಿದ್ದಾರೆ. “ಲವ್ ಥಿಯರಿ”, ಶೀರ್ಷಿಕೆ ಕೇಳಿದ ತಕ್ಷಣ ಇದೊಂದು ಪ್ರೇಮ ಕಥೆ ಅನಿಸುವುದು ಸಹಜ. ಇದು ಪ್ರೇಮ ಕಥೆ ಮಾತ್ರ ಅಲ್ಲ. ರೊಮ್ಯಾಂಟಿಕ್ ಕಾಮಿಡಿ ಜಾನರ್ ನ ಚಿತ್ರ. ಅಷ್ಟೇ ಅಲ್ಲದೆ ಮಾನವ ಸಂಬಂಧಗಳನ್ನು ಎತ್ತಿ ಹಿಡಿಯುವ ಚಿತ್ರವೂ ಹೌದು ಎಂದಿದ್ದಾರೆ
ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದೇನೆ. ಉದಯ್ ಲೀಲಾ ಛಾಯಾಗ್ರಹಣ, ಸೂರಜ್ ಜೋಯಿಸ್ ಸಂಗೀತ ನಿರ್ದೇಶನ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಸಂಕಲನಕಾರ ನಾಗೇಂದ್ರ ಉಜ್ಜನಿ ಸಂಕಲನ ಈ ಚಿತ್ರಕ್ಕಿದೆ. ಉಳಿದ ಮಾಹಿತಿಯನ್ನು ಸದ್ಯದಲ್ಲೇ ನೀಡುತ್ತೇವೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು ಹಾಗೂ ಕೊಡಗಿನಲ್ಲಿ ಚಿತ್ರೀಕರಣ ನಡೆಯಲಿದೆ. ನಾಯಕನಾಗಿ ಮೊದಲ ಬಾರಿಗೆ ಪಾದಾರ್ಪಣೆ ಮಾಡುತ್ತಿದ್ದೇನೆ. ನನ್ನ ಪ್ರಯತ್ನಕ್ಕೆ ನಿಮ್ಮೆಲ್ಲರ ಪೆÇ್ರೀತ್ಸಾಹವಿರಲಿ ಎಂದು ಹೇಳಿದ್ದಾರೆ


