ನಟ ಶ್ರೀಮುರಳಿ ಅಭಿನಯದ “ಪರಾಕ್” ಚಿತ್ರದ ಟೀಸರ್ ಬಿಡುಗಡೆ
ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಹು ನಿರೀಕ್ಷಿತ “ಪರಾಕ್” ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಪರಾಕ್ ಟೀಸರ್ ನಲ್ಲಿ ಸಿಕ್ಸ್ ಪ್ಯಾಕ್ ಗೆಟಪ್‍ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ

ಈ ವೇಳೆ ನಿರ್ದೇಶಕ ಹಾಲೇಶ್ ಕೊಗುಂಡಿ ಮಾತನಾಡಿ, ಸಿನಿಮಾದಲ್ಲಿ ಸಾಕಷ್ಟು ವಿಷಯಗಳನ್ನು ಹೇಳಿದ್ದೇವೆ. ಶ್ರೀಮುರಳಿ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ನಿಮ್ಮ ಬೆಂಬಲ ಇರಲಿ ಎಂದರು.
ನಟ ಶ್ರೀಮುರಳಿ ಮಾತನಾಡಿ, ಪರಾಕ್ ಟೀಸರ್ ಹಿಂದೆ ಶ್ರಮ ಇದೆ. ಪರಾಕ್ ಸುಲಭವಾಗಿ ಶುರುವಾದ ಸಿನಿಮಾವಲ್ಲ. ಕಥೆಗೆ ಮೂರೂವರೆ ವರ್ಷ ಟೈಮ್ ಕೊಟ್ಟಿದ್ದೇವೆ. ಹೊಸಬರು, ಹೊಸ ಪೆÇ್ರಡಕ್ಷನ್ ಜೊತೆ ಯಾಕೆ ಸಿನಿಮಾ ಮಾಡಿದ್ದೇನೆ. ಪರಾಕ್ ಎಂಬ ಅದ್ಬುತ ಪ್ರಯತ್ನವನ್ನು ಎಲ್ಲರಿಗೂ ನೀಡಬೇಕು ಎಂಬ ಅಸೆ, ಹಠ, ಕಾಳಜಿಯಿಂದ ಮಾಡುತ್ತಿದ್ದೇವೆ. ಇನ್ನೂ ಸಿನಿಮಾ ಚಿತ್ರೀಕರಣ ಮಾಡುವುದು ಇದೆ ಎಂದರು.

ಯುವ ನಿರ್ದೇಶಕ ಹಾಲೇಶ್ ಕೋಗುಂಡಿ ಪರಾಕ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಇವರು ನಿರ್ದೇಶನ ಮಾಡುತ್ತಿರುವ ಚೊಚ್ಚಲ ಚಿತ್ರ ಇದಾಗಿದೆ. ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್ ಅಡಿ ಚಿತ್ರ ಸಿನಿಮಾ ನಿರ್ಮಾಣವಾಗುತ್ತಿದೆ.
ಚರಣ್ ರಾಜ್ ಎಂ.ಆರ್ ಸಂಗೀತ ನಿರ್ದೇಶನ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ರಕ್ಷಿತ್ ಕಾಪ್ ಸಂಕಲನ, ಡಾ ಕೆ ರವಿವರ್ಮ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಮಂಜುನಾಥ್ ಟಿ, ಮೋಹನ್ ಕೆ ಓ, ಹಾಲೇಶ್ ಕೋಗುಂಡಿ ಸಂಭಾಷಣೆ ಬರೆದಿದ್ದಾರೆ. ಸದ್ಯ ಚಿತ್ರದ 35ರಷ್ಟು ಭಾಗದ ಚಿತ್ರೀಕರಣ ಮುಕ್ತಾಯಗೊಂಡಿದೆ.


