Actor Prabhas' much-awaited film 'Fauji' released

ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ‘ಫೌಜಿ’ ಚಿತ್ರದ ಬಿಡುಗಡೆ - CineNewsKannada.com

ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ‘ಫೌಜಿ’ ಚಿತ್ರದ ಬಿಡುಗಡೆ

ಭಾರತೀಯ ಚಿತ್ರರಂಗದ ಸ್ಟಾರ್ ನಟ ಪ್ರಭಾಸ್ ಅಭಿನಯದ, ನಿರ್ದೇಶಕ ಹನು ರಾಘವಪುಡಿ ಮಹತ್ವಾಕಾಂಕ್ಷೆಯ ಚಿತ್ರ ‘ಫೌಜಿ’ಯ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಚಿತ್ರತಂಡ ಆಕರ್ಷಕ ಪೆÇೀಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ, ಈ ಚಿತ್ರ ಇದೇ ವರ್ಷದ ಡಿಸೆಂಬರ್ 3 ರಂದು ಪ್ರಪಂಚದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ ಎಂದು ಖಚಿತಪಡಿಸಿದೆ.

‘ಅಜ್ಞಾತಪರ್ವ ಎಂಡ್ಸ್’ ಎಂಬ ಕುತೂಹಲಕಾರಿ ಘೋಷಣೆಯೊಂದಿಗೆ, ಚಿತ್ರದ ನಿರ್ಮಾಪಕರು ‘ದಿ ರೆಬೆಲಿಯನ್ ಬಿಗಿನ್ಸ್’ ಎಂದು ಸಾರಿದ್ದಾರೆ. ಈ ಘೋಷಣೆ ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. ಪ್ರಭಾಸ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪೆÇೀಸ್ಟರ್, ಚಿತ್ರದ ತೀವ್ರತೆ ಎತ್ತಿ ತೋರಿಸುತ್ತದೆ. ರಕ್ತಸಿಕ್ತವಾದ ಉಡುಪಿನಲ್ಲಿ, ಸುತ್ತಲೂ ಶವಗಳ ನಡುವೆ ಕಲ್ಲಿನ ಮೇಲೆ ಕುಳಿತು ಗನ್ ಹಿಡಿದಿರುವ ಪ್ರಭಾಸ್ ಅವರ ಲುಕ್, ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ.

‘ಬಾಹುಬಲಿ’ಯ ನಂತರ ಪ್ರಭಾಸ್ ಮತ್ತೊಮ್ಮೆ ಒಂದು ಬೃಹತ್ ಪೀರಿಯಡ್ ಡ್ರಾಮಾ ಕಥೆಯೊಂದಿಗೆ ಬೆಳ್ಳಿಪರದೆಗೆ ಮರಳುತ್ತಿದ್ದಾರೆ. “ಎ ಬೆಟಾಲಿಯನ್ ಹೂ ಫೈಟ್ಸ್ ಅಲೋನ್” ಎಂಬ ಟ್ಯಾಗ್‍ಲೈನ್ ಹೊಂದಿರುವ ಈ ಚಿತ್ರವು, ಭಾವನಾತ್ಮಕ ಹಾಗೂ ಅದ್ಭುತ ದೃಶ್ಯ ವೈಭವದ ಅನುಭವ ನೀಡುವ ಭರವಸೆ ನೀಡಿದೆ. ಈ ಚಿತ್ರ ಪ್ರಭಾಸ್ ಅವರ ವೃತ್ತಿಜೀವನದಲ್ಲಿ ಅತ್ಯಂತ ಮಹತ್ವದ ಮತ್ತು ದೊಡ್ಡ ಪ್ರಾಜೆಕ್ಟ್ ಎನಿಸಿಕೊಂಡಿದೆ.

ಈ ಚಿತ್ರದ ವಿಶೇಷತೆ ಏನೆಂದರೆ, ಇದು ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಮತ್ತು ಹನು ರಾಘವಪುಡಿ ಸಮಾಗಮವಾಗಿದೆ. ಭಾರತೀಯ ಚಿತ್ರರಂಗದ “ತಲೆಮಾರುಗಳ ಸಂಘಟನೆ” ಎಂದು ಕರೆಯಲಾಗುತ್ತಿದ್ದು, ಇದು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಅತ್ಯಂತ ದುಬಾರಿ ಮತ್ತು ಅದ್ದೂರಿ ಚಿತ್ರಗಳಲ್ಲಿ ಒಂದಾಗಿದೆ.

Àನವೀನ್ ಯರ್ನೇನಿ ಮತ್ತು ವೈ. ರವಿ ಶಂಕರ್, ಟಿ-ಸೀರೀಸ್ ಫಿಲ್ಮ್ಸ್‍ನ ಭೂಷಣ್ ಕುಮಾರ್ ಅವರೊಂದಿಗೆ ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರ ಡಿಸೆಂಬರ್ 3 ರವರೆಗೆ ಬರಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin