‘ಲೈಫ್ ಟುಡೇ” ಚಿತ್ರದ ಟ್ರೈಲರ್ ಬಿಡುಗಡೆ : ಆಗಸ್ಟ್ 6ಕ್ಕೆ ಸಿನಿಮಾ ತೆರೆಗೆ
ಯುವ ಪ್ರತಿಭೆ ಕಿರಣ್ ಆದಿತ್ಯ ನಾಯಕನಾಗಿ ಕಾಣಿಸಿಕೊಂಡಿರುವ “ ಲೈಫ್ ಟುಡೆ” ಚಿತ್ರ ಆಗಸ್ಟ್ 6 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ, ಕಿರಣ್ಗೆ ನಾಯಕಿಯಾಗಿ ಲೇಖ ಚಂದ್ರ ನಟಿಸಿದ್ದಾರೆ

ಕಾಂತ ಕನ್ನಲ್ಲಿ ನಿರ್ದೇಶನ ದಲ್ಲಿ ಮೂಡಿ ಬಂದಿರುವ ಚಿತ್ರವನ್ನು ಮೇಘನಾ ಪ್ರದೀಪ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದು ಚಿತ್ರದ ಹಾಡುಗಳು ಜನಮನ ಸೆಳೆದಿದ್ದು, ಚಿತ್ರತಂಡ ಅಧಿಕೃತ ಟ್ರೈಲರ್ ಜೊತೆಗೆ ಚಿತ್ರದ ಬಿಡುಗಡೆಯ ದಿನಾಂಕ ಪ್ರಕಟಿಸಿದೆ
ದಿಯಾ ನಿರ್ಮಾಪಕ ಕೃಷ್ಣ ಚೈತನ್ಯ, ವಾಮನ ನಿರ್ಮಾಪಕ ಚೇತನ್ ಗೌಡ ಲೈಫ್ ಟುಡೇ ಟ್ರೈಲರ್ ನ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು
ಇಂದಿನ ಹರೆದ ಮನಗಳ ಪ್ರೀತಿ ನೀತಿ ನಿಷ್ಠೆಯ ಕದನ ಕಲಹಗಳ ಹೂರಣದಂತೆ ಕಾಣ್ತಿರೋ ಲೈಫ್ ಟುಡೇ ಚಿತ್ರದ ಟ್ರೈಲರ್ ಭರವಸೆಯುಕ್ತವಾಗಿದೆ. ನವ ನಟ ಕಿರಣ್ ಆದಿತ್ಯ, ನಟಿ ಲೇಖ ಚಂದ್ರ ಕೆಮಿಸ್ಟ್ರಿ ಹೈಲೈಟ್ ಆಗಿದೆ. ಮೇಲ್ನೋಟಕ್ಕೆ ಇವತ್ತಿನ ಲವ್ ಸ್ಟೋರಿ ತರಹ ಕಾಣ್ತಿರೋ ಲೈಫ್ ಟುಡೇ ಚಿತ್ರದಲ್ಲಿ ಸಿಕ್ಕಾಪಟ್ಟೆ ತಿರುವು ಇರುವಂತಿದೆ… ನಾಯಕ ಹೊಸಬರಾದ್ರೂ ಇಡೀತಂಡದಲ್ಲಿ ಅನುಭವಸ್ಥರೇ ಇದ್ದಾರೆ.. ತಬಲನಾಣಿ, ಕಾಕ್ರೋಚ್ ಸುಧಿ, ಜಗ್ಗಪ್ಪ,ಯುಕ್ತ,ರತರ್ವ್ ಸೇರಿದಂತೆ ಹಲವು ಕಲಾವಿದರ ದಂಡು ಈ ಚಿತ್ರದಲ್ಲಿದೆ.

ನಾಯಕ ಕಿರಣ್ ಆದಿತ್ಯ ಮಾತನಾಡಿ ಈ ಜನರೇಷನ್ ವಿಷ್ಯ ನಿಮಗಿಷ್ಟ ಆಗಲಿದೆ. ಆಗಸ್ಟ್ 6 ರಂದು ಚಿತ್ರವನ್ನು ತೆರೆಗೆ ತರಲಾಗುತ್ತಿದೆ, ನಮ್ಮ ಪ್ರಯತ್ನಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲವಿರಲಿ ಎಂದು ಕೇಳಿಕೊಂಡರು
ನಿರ್ದೇಶಕ ಕಾಂತ ಕನ್ನಲ್ಲಿ ಮಾತನಾಡಿ ಇಂದಿನ ಹದಿಹರೆಯದ ಬದುಕುಗಳಿಗೆ ತೀರ ಹತ್ತಿರವಿರೋ ವಿಚಾರ ಸಿನಿಮ್ಯಾಟಿಕ್ ಆಗಿ ಪ್ರೇಕ್ಷಕರ ಮನಮುಟ್ಟುವ ಪ್ರಯತ್ನ ಮಾಡಿದ್ದೀವಿ ಎಂದರು,
ನಟಿ ಲೇಖಾ ಚಂದ್ರ ಮಾತನಾಡಿ, ಹೆಣ್ಣಿನ ತುಮುಲ ತಲ್ಲಣಗಳನ್ನು ಚಿತ್ರದಲ್ಲಿ ನಿರ್ದೇಶಕರು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳಿದರು
ಹಿರಿಯ ಕಲಾವಿದ ತಬಲ ನಾಣಿ ಮಾತನಾಡಿ ಚಿತ್ರದಲ್ಲಿ ನಟಿ ಲೇಖಾ ಚಂದ್ರ ಉತ್ತಮವಾಗಿ ನಟಿಸಿದ್ಧಾರೆ ಅವರಿಗೆ ಪ್ರಶಸ್ತಿ ಬರುವ ರೀತಿ ನಟಿಸಿದ್ದಾರೆ, ಚಿತ್ರದಲ್ಲಿ ಅಪ್ಪ-ಮಗಳ ಪಾತ್ರ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು
ಕಲಾವಿದ ಕಾಕ್ರೋಚ್ ಸುಧಿ ಈ ಚಿತ್ರದ ಪಾತ್ರಧಾರಿಯಾಗಿ ಮತ್ತು ಈ ಚಿತ್ರತಂಡದ ಪ್ರಯತ್ನಕ್ಕೆ ಯಶಸ್ಸು ಧಕ್ಕಲಿದೆ ಅನ್ನೋ ಭರವಸೆಯ ವ್ಯಕ್ತಪಡಿಸಿದರು


